ಮಹೀಂದ್ರ XUV 500 ಬುಕ್ಕಿಂಗ್ ಸ್ಥಗಿತ!! ಛೇ ಮುಂದೇನು?

XUV 500 ರಸ್ತೆಗಿಳಿಯುವ ಮುನ್ನವೇ ಹೊಸ ಹೈಪ್ ಕ್ರಿಯೆಟ್ ಮಾಡಿತ್ತು. ಇದು ಹಲವು ಬಣ್ಣಗಳಲ್ಲಿ ದೊರಕುತ್ತಿದ್ದರೂ ಹೆಚ್ಚಿನ ಜನರು ಬಿಳಿ ಬಣ್ಣದ ಕಾರನ್ನು ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ನಿರೀಕ್ಷೆಗಿಂತ ಜಾಸ್ತಿ ಬೇಡಿಕೆ ಇರುವ ಹಿನ್ನಲೆಯಲ್ಲಿ ಕಂಪನಿಯು ಈ ಕಾರಿನ ಉತ್ಪಾದನೆಯನ್ನೂ ಹೆಚ್ಚಿಸಿದೆ.
ನೂತನ ಎಕ್ಸ್ ಯುವಿ 5ಒಒ ಕಾರು ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಪುಣೆಗಳಲ್ಲಿ ಬಿಡುಗಡೆಯಾಗಿತ್ತು. ಕಂಪನಿಯು ಹೊಸ ಕಾರನ್ನು ಸದ್ಯ ಬೇರೆ ಯಾವ ರಾಜ್ಯಕ್ಕೂ ಪರಿಚಯಿಸದಿರಲು ನಿರ್ಧರಿಸಿದೆ. ಅಂದರೆ ಈಗಾಗಲೇ ಬೇಡಿಕೆ ಹೆಚ್ಚಿರುವುದರಿಂದ ಗ್ರಾಹಕರಿಗೆ ವೇಟಿಂಗ್ ಪಿರೆಯೆಡ್ ಹೆಚ್ಚು ಮಾಡಲು ಕಂಪನಿಗೆ ಮನಸ್ಸಿಲ್ಲ.
ಮಹೀಂದ್ರ ಎಕ್ಸ್ ಯುವಿ5ಒಒ ಕಾರು 4 ಮತ್ತು 2 ವೀಲ್ ಡ್ರೈವ್ ಆಯ್ಕೆಯಲ್ಲಿ ದೊರಕುತ್ತಿದೆ. ಎಕ್ಸ್ ಶೋರೂಂ ದರ 10.8 ಲಕ್ಷ ರು.ನಿಂದ 12.88 ಲಕ್ಷ ರು.ವರೆಗಿದೆ.
ನೂತನ ಎಕ್ಸ್ ಯುವಿ ಕಾರು 2.2 ಲೀಟರಿನ ಸಿಆರ್ ಡಿಐ ಡೀಸೆಲ್ ಎಂಜಿನ್ ಹೊಂದಿದೆ. ಇದು 140 ಹಾರ್ಸ್ ಪವರ್ ಮತ್ತು 330 ಎನ್ ಎಂ ಟಾರ್ಕ್ ನೀಡುತ್ತದೆ. ಈ ಕಾರು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲೇ ಅತ್ಯುತ್ತಮವಾದ ಮೈಲೇಜ್ ನೀಡುತ್ತದೆ. ಕಂಪನಿಯ ಪ್ರಕಾರ ಇದರಲ್ಲಿ ಪ್ರತಿಲೀಟರ್ ಗೆ 15 ಕಿ.ಮೀ. ಮೈಲೇಜ್ ಪಡೆಯಬಹುದು.
ಮಹೀಂದ್ರ ಎಕ್ಸ್ ಯುವಿ500 ದರ
* ಎಕ್ಸ್ ಯುವಿ 500 ಡಬ್ಲ್ಯು6 ದರ: 10.80 ಲಕ್ಷ ರುಪಾಯಿ
* ಎಕ್ಸ್ ಯುವಿ 500 ಡಬ್ಲ್ಯು8 (2 ವೀಲ್ ಡ್ರೈವ್) ದರ: 11.95 ಲಕ್ಷ ರುಪಾಯಿ
* ಎಕ್ಸ್ ಯುವಿ500 ಡಬ್ಲ್ಯು8 (4 ವೀಲ್ ಡ್ರೈವ್) ದರ: 12.88 ಲಕ್ಷ ರುಪಾಯಿ


Click it and Unblock the Notifications








