ಬಾಲಿವುಡ್ ಬ್ಯೂಟಿ ಪನಾಗ್ ಗೆ ಕ್ಯೂ5 ಕೀಲಿಕೈ

ಐಷಾರಾಮಿ ಕಾರು ತಯಾರಿಕಾ ಕಂಪನಿಗಳು ಸದಾ ಸೆಲೆಬ್ರಿಟಿಗಳನ್ನು ಆಕರ್ಷಿಸಲು ಯತ್ನಿಸುತ್ತಿವೆ. ಕೆಲವೊಂದು ಕಾರುಗಳನ್ನು ಉಡುಗೊರೆಯಾಗಿ ನೀಡುವುದು ಉಂಟು. ಇದೀಗ ಗುಲ್ ಪನಾಗ್ ಗೆ ಇತ್ತೀಚಿನ ಕಾರೊಂದನ್ನು ಉಡುಗೊರೆಯಾಗಿ ನೀಡಿದೆ.
ಇತ್ತೀಚೆಗೆ ಆಡಿ ಕಾರು ಖರೀದಿಸಿದ ಸೆಲೆಬ್ರಿಟಿ ಅಂದರೆ ಜಾನ್ ಅಬ್ರಹಾಂ. ಅವರು ಆಡಿ ಕ್ಯೂ7 ಕಾರು ಖರೀದಿಸಿದ್ದರು. ಕ್ಯೂ7ಗೆ ಹೋಲಿಸಿದರೆ ಗುಲ್ ಪನಾಗ್ ಪಡೆದ ಕಾರು ಸ್ವಲ್ಪ ಚಿಕ್ಕದು. ಈಗ ಜಾಗತಿಕವಾಗಿ ಹೆಚ್ಚು ಜನರು ಕ್ಯೂ5 ಖರೀದಿಸುತ್ತಿದ್ದಾರೆ. ಈ ಕಾರಿನ ಆರಂಭಿಕ ದರ ಸುಮಾರು 42 ಲಕ್ಷ ರುಪಾಯಿ.
ಕ್ಯೂ7 ಸರಣಿಯ ಎಂಜಿನ್ ಕ್ಯೂ5 ಕಾರಿನಲ್ಲಿದೆ. ಆದರೆ ಈ ಕಾರಿನ ಗಾತ್ರ ಚಿಕ್ಕದಿರುವುದರಿಂದ ಸಿಟಿ ರಸ್ತೆಗಳಿಗೆ ಹೆಚ್ಚು ಸೂಕ್ತವಾಗಿದೆ. ಕ್ಯೂ5 ಸ್ಪೋರ್ಟ್ಸ್ ಕಾರು ಎರಡು ಲೀಟರಿನ ಟಿಡಿಐ ಎಂಜಿನ್ ಮತ್ತು 3.0 ಟಿಡಿಐ ಆಯಿಲ್ ಬರ್ನರ್ ಹೊಂದಿದೆ.


Click it and Unblock the Notifications