ಮುಂಬೈ ತಲುಪಿದ ಪೊಲಾರಿಷ್ ಆಫ್-ರೋಡರ್

Polaris India Ltd forays Mumbai market
ಪೊಲಾರಿಷ್ ಆಫ್ ರೋಡ್ ವಾಹನಗಳು ಅಂದ್ರೆ ರಸ್ತೆಯ ಹಂಗಿಲ್ಲದೇ ಚಲಿಸೋ ವಾಹನಗಳು. ಇದನ್ನು ಡ್ರೈವ್ ಮಾಡಲು ಡಾಮರ್, ಕಾಂಕ್ರಿಟ್ ರಸ್ತೆ ಬೇಕಿಲ್ಲ. ಬೆಟ್ಟದ ದಾರಿಗಳಲ್ಲಿ, ಮಣ್ಣಿನ ರಸ್ತೆಯಲ್ಲಿ, ಕೊರಕಲು ಹಾದಿಗಳಲ್ಲಿ, ಒಟ್ಟಾರೆ ರಸ್ತೆಯೆಂಬ ಕುರುಹು ಇಲ್ಲದಲ್ಲಿಯೂ ಆಫ್ ರೋಡ್ ವಾಹನಗಳು ಚಲಿಸುತ್ತವೆ.

ಗದ್ದೆಯಲ್ಲಿ ಟ್ರಾಕ್ಟರ್, ಟಿಲ್ಲರ್ ಚಲಿಸುವಂತೆ, ಗುಡ್ಡಕ್ಕೆ ಜೆಸಿಬಿ ಹತ್ತುವಂತೆ ಈ ಪೊಲಾರಿಷ್ ವಾಹನಗಳನ್ನು ಡ್ರೈವ್ ಮಾಡಬಹುದು. ಪೊಲಾರಿಷ್ ಇಂಡಿಯಾ ಲಿಮಿಟೆಡ್ ಇಂದು(ಅ 14) ಮುಂಬೈ ಮಾರುಕಟ್ಟೆಗೆ ಆಫ್ ರೋಡ್ ವಾಹನಗಳನ್ನು ಪರಿಚಯಿಸಿದೆ.

ಅಮೆರಿಕದ ಪೊಲಾರಿಷ್ ಇಂಡಸ್ಟ್ರಿಸ್ ಕಂಪನಿಯ ಅಂಗಸಂಸ್ಥೆ ಪೊಲಾರಿಷ್ ಇಂಡಿಯಾ ಲಿಮಿಟೆಡ್ ಶೀಘ್ರದಲ್ಲಿ ಮುಂಬೈ ಮಾರುಕಟ್ಟೆಗೆ ಇನ್ನಷ್ಟು ಆಫ್-ರೋಡ್ ವೆಹಿಕಲ್ ಗಳನ್ನು ಹೊರತರುವುದಾಗಿ ಹೇಳಿದೆ.

ರಸ್ತೆಯ ಅಗತ್ಯವಿಲ್ಲದ ಪೊಲಾರಿಷ್ ಆಫ್ ರೋಡ್ ವಾಹನಗಳ ದರ 2.78 ಲಕ್ಷ ರು.ನಿಂದ ಆರಂಭವಾಗುತ್ತದೆ. ಈ ವಾಹನಗಳನ್ನು ನವನೀತ್ ಮೋಟರ್ಸ್ ಮೂಲಕ ಖರೀದಿಸಬಹುದೆಂದು ಕಂಪನಿ ಪ್ರಕಟಿಸಿದೆ.

ಕಂಪನಿಯು ಮುಂದಿನ 5 ವರ್ಷಗಳೊಳಗೆ ಭಾರತದಲ್ಲಿ ಘಟಕ ನಿರ್ಮಿಸಲಿದೆಯಂತೆ. ಇಲ್ಲಿ ಸುಮಾರು 40 ಕೋಟಿ ಡಾಲರ್ ಆದಾಯ ಸಂಪಾದಿಸುವ ನಿರೀಕ್ಷೆಯನ್ನೂ ಕಂಪನಿ ವ್ಯಕ್ತಪಡಿಸಿದೆ. ಸದ್ಯ ಕಂಪನಿಯು ಆಫ್-ರೋಡರ್ಸ್ ಗಳನ್ನು ಅಮೆರಿಕ ಮತ್ತು ಮೆಕ್ಸಿಕೊದಿಂದ ಆಮದು ಮಾಡಿಕೊಳ್ಳಲು ಉದ್ದೇಶಿಸಿದೆ.

ನಿರ್ಮಾಣ, ಗಣಿಗಾರಿಕೆ, ಅರಣ್ಯ, ಸಮುದ್ರ ದಂಡೆಗಳಲ್ಲಿ, ಬೀಚುಗಳಲ್ಲಿ ಚಲಾಯಿಸಬಹುದು. ಈ ಆಫ್ ರೋಡ್ ವಾಹನಗಳು ಮೋಜಿನ ಸವಾರಿಗೆ ಮಾತ್ರವಲ್ಲದೇ ಪೊಲೀಸ್ ಮತ್ತು ಅರೆ ಸೇನಾಪಡೆಗೆ ಕೂಡ ಉಪಯುಕ್ತವಾಗಿವೆ.

More from DriveSpark

Article Published On: Friday, October 14, 2011, 17:10 [IST]
English summary
Polaris India Pvt. Ltd announced today their foray into the Mumbai market. Polaris, the US based off-road vehicle manufacturer, which launched its vehicles priced between Rs.2.4 lakhs and Rs.20 lakhs. The company said it would set up a plant in India within the next five years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+