ನ್ಯಾನೊ ರಫ್ತು ಮಾಡುವಂತೆ ಬ್ರೆಝಿಲ್ ಗವರ್ನರ್ ಕೋರಿಕೆ

Brazil Minister Request Tata Nano Export
ಬ್ರೆಝಿಲ್ ರಾಜ್ಯಪಾಲ ಆಂಟೊನಿಯೊ ಆಗೊಸ್ಟೊ ಆನಸ್ಟಸಿಯಾ ಈಗ ಟಾಟಾ ನ್ಯಾನೊ ಕಾರಿನ ಅಭಿಮಾನಿ. ದೇಶದ ಪುಟ್ಟ ನ್ಯಾನೊ ಕಾರನ್ನು ಬ್ರೆಝಿಲ್ ಗೆ ರಫ್ತು ಮಾಡುವಂತೆ ಅನಸ್ಟಸಿಯಾ ಕೋರಿದ್ದಾರೆ. ಅವರು ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದಾಗ ಟಾಟಾ ಮೋಟರ್ಸ್ ಚೇರ್ಮನ್ ರತನ್ ಟಾಟಾರನ್ನು ಭೇಟಿಯಾಗಿ ಈ ಕೋರಿಕೆ ಸಲ್ಲಿಸಿದ್ದಾರೆ.

ದೇಶದ ಉದ್ದಿಮೆಗಳೊಂದಿಗೆ ನಡೆಸುತ್ತಿದ್ದ ಮಾತುಕತೆಯಲ್ಲಿ ಬ್ರೆಝಿಲ್ ಗವರ್ನರ್ "ಬ್ರೆಝಿಲ್ ಗೆ ಪುಟ್ಟ ನ್ಯಾನೊ ಕಾರನ್ನು ತೆಗೆದುಕೊಂಡು ಹೋಗುವುದು ನಮಗೆ ತುಂಬಾ ಸಂತೋಷ ತರುವ ವಿಷಯ" ಎಂದರು.

"ಬ್ರೆಝಿಲ್ ಮತ್ತು ಭಾರತದ ನಡುವೆ ಈಗಾಗಲೇ ಅತ್ಯುತ್ತಮ ಬಾಂಧವ್ಯ ಇರುವುದರಿಂದ ಇಲ್ಲಿನ ಬೃಹತ್ ಉದ್ದಿಮೆದಾರರನ್ನು ನಮ್ಮ ದೇಶಕ್ಕೆ ಆಹ್ವಾನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

"ಬ್ರೆಝಿಲ್ ಈಗ ವಿಶ್ವದ ವೇಗವಾಗಿ ಪ್ರಗತಿ ಕಾಣುತ್ತಿರುವ ವಾಹನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ನಮ್ಮಲ್ಲಿ ಸಣ್ಣ ಕಾರುಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ದಕ್ಷಿಣ ಅಮೆರಿಕ ದೇಶಕ್ಕೆ ನ್ಯಾನೊ ಖಂಡಿತಾ ಇಷ್ಟವಾಗುವ ಕಾರು" ಎಂದು ಅವರು ಹೇಳಿದ್ದಾರೆ.

ಟಾಟಾ ಮೋಟರ್ಸ್ ಈಗಾಗಲೇ ಯುರೋಪ್ ದೇಶಗಳಿಗೆ ನ್ಯಾನೊ ಕಾರುಗಳನ್ನು ರಫ್ತು ಮಾಡಲು ಆರಂಭಿಸಿದ್ದಾರೆ. ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾಕ್ಕೆ ನ್ಯಾನೊ ಕಾರು ಕಾಲಿಟ್ಟಿದೆ. ಬಾಂಗ್ಲಾದಲ್ಲಿ ನ್ಯಾನೊ ಕಾರು ಬಿಡುಗಡೆ ಕಾರ್ಯಕ್ರಮ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ.

ಯುರೋಪಿಯನ್ ಮಾರುಕಟ್ಟೆಗಾಗಿ ಟಾಟಾ ಮೋಟರ್ಸ್ ಒಮ್ಮೆ "ನ್ಯಾನೊ ಯುರೋಪ" ಕಾರುಗಳನ್ನು ಪ್ರದರ್ಶಿಸಿತ್ತು. ನ್ಯಾನೊ ಯುರೋಪ ಅತ್ಯುತ್ತಮ ಸ್ಟಾಂಡರ್ಡ್ ಫೀಚರ್ಸ್ ಹೊಂದಿರುವ ಕಾರಾಗಿದೆ.

More from DriveSpark

Article Published On: Monday, October 17, 2011, 11:32 [IST]
English summary
The Tata Nano has got a new international fan in the form of Brazil's Antonio Augusto Anastasia. Mr Anastasia is the governor of Brazil's Minas Gerais. He mis on a state visit to India and will be here for eight days. He met Tata Group Chairman Ratan Tata and expressed his wish to see the Nano in Brazil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+