ಹ್ಯುಂಡೈ ಇಯಾನ್ ಬುಕ್ಕಿಂಗ್ ಹೇಗಿದೆ?

Hyundai EON Bookings
800 ಸಿಸಿಯ ಹ್ಯುಂಡೈ ಇಯಾನ್ ಕಾರು ರಸ್ತೆಗಿಳಿದು ಕೆಲವು ದಿನಗಳು ಕಳೆದಿವೆ. ಮಾರುತಿ 800 ಸ್ಥಾನಕ್ಕೆ ಬಂದಿರುವ ಈ ಕಾರಿನ ಕುರಿತು ಗ್ರಾಹಕರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ ಎಂದು ಕಂಪನಿ ಹೇಳಿದೆ. ಇಲ್ಲಿವರೆಗೆ ಸುಮಾರು 5 ಸಾವಿರ ಯುನಿಟ್ ಇಯಾನ್ ಕಾರುಗಳು ಬುಕ್ಕಿಂಗ್ ಆಗಿದೆ ಎಂದು ಕಂಪನಿಯ ಸಿಇಒ ಎಚ್ ಡಬ್ಲ್ಯು ಪಾರ್ಕ್ ಹೇಳಿದ್ದಾರೆ.

ಹ್ಯುಂಡೈ ಇಯಾನ್ ದರವೂ ಕಡಿಮೆ. ಹೀಗಾಗಿ ಹೆಚ್ಚು ಜನರನ್ನು ಸೆಳೆಯುವ ನಿರೀಕ್ಷೆ ಕಂಪನಿಯದು. ಈ ಕಾರು ಮಾರುತಿ ಆಲ್ಟೊ ಮತ್ತು ಷೆವರ್ಲೆ ಸ್ಪಾರ್ಕ್ ಗಳಿಗೆ ಪೈಪೋಟಿ ನೀಡುವ ಕಾರಾಗಿದೆ. ಹೀಗಾಗಿ 5 ಸಾವಿರ ಬುಕ್ಕಿಂಗ್ ನೋಡಿದ ಕಂಪನಿ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಆಶಾಭಾವನೆ ಹೊಂದಿದೆ.

ಹ್ಯುಂಡೈ ಇಯಾನ್ ಕಾರಿನ ದರ 2.69 ಲಕ್ಷ ರು.ನಿಂದ 3.71 ಲಕ್ಷ ರು.(ಎಕ್ಸ್ ಶೋರೂಂ ದೆಹಲಿ)ವರೆಗಿದೆ. 814 ಸಿಸಿಯ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 5,500 ಆರ್ ಪಿಎಂಗೆ 56 ಪಿಎಸ್ ಪವರ್ ಮತ್ತು 4 ಸಾವಿರ ಆರ್ ಪಿಎಂಗೆ 76.5 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ.

ಇಯಾನ್ ಸಣ್ಣ ಕಾರು ಆರು ಆವೃತ್ತಿಗಳಲ್ಲಿ ದೊರಕುತ್ತದೆ. ಆರಂಭಿಕ ಆವೃತ್ತಿ ಡಿ-ಲೈಟ್ ದರ ಸುಮಾರು 2.69 ಲಕ್ಷ ರು. ಆಗಿದೆ. ಟಾಪ್ ಎಂಡ್ ಸ್ಪೋರ್ಟ್ಸ್ ಆವೃತ್ತಿ ದರ ಸುಮಾರು 3.71 ಲಕ್ಷ ರುಪಾಯಿ ಆಗಿದೆ. ಹ್ಯುಂಡೈ ಇಯಾನ್ ಪ್ರತಿಲೀಟರ್ ಗೆ ಸುಮಾರು 21.1 ಕಿ.ಮೀ. ಮೈಲೇಜ್ ನೀಡುತ್ತದೆ.

More from DriveSpark

Article Published On: Tuesday, October 18, 2011, 11:17 [IST]
English summary
Hyundai EON Bookings crossed 5k. Hyundai motors launched new hatchback Eon someday ago. The brand new small car will compromise all aspects for customers. It priced at 2.9 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+