ಬೆಂಗಳೂರಿಗೆ ಬಂತು ಸಣ್ಣ ಕಾರು ಹ್ಯುಂಡೈ ಇಯಾನ್

"ದೇಶದ ರಸ್ತೆಗೆ ಸೂಕ್ತವಾಗಿ ಅಭಿವೃದ್ಧಿಪಡಿಸಲಾಗಿರುವ ಇಯಾನ್ ಕಾರು ಬೆಂಗಳೂರು ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆಯಿದೆ" ಎಂದು ಹ್ಯುಂಡೈ ಇಂಡಿಯಾದ ನಿರ್ದೇಶಕ ಎಚ್ ಡಬ್ಲ್ಯು ಪಾರ್ಕ್ ಹೇಳಿದ್ದಾರೆ. ಈ ಕಾರನ್ನು ಅಭಿವೃದ್ಧಿಪಡಿಸಲು ಕಂಪನಿಯು ದೇಶದಲ್ಲಿ ಸುಮಾರು 900 ಕೋಟಿ ರುಪಾಯಿ ವಿನಿಯೋಗ ಮಾಡಿದೆ ಎಂದರು.
ಇಯಾನ್ ಕಾರು 814 ಸಿಸಿ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 5,500 ಆರ್ ಪಿಎಂಗೆ 56 ಪಿಎಸ್ ಪವರ್ ಮತ್ತು 4 ಸಾವಿರ ಆರ್ ಪಿಎಂಗೆ 76.5 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಇದು 5 ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿದೆ.
ಮೈಲೇಜ್: ನೂತನ ಪುಟ್ಟ ಕಾರು ಹ್ಯುಂಡೈ ಇಯಾನ್ ಮೈಲೇಜ್ ಆಕರ್ಷಕವಾಗಿದೆ. ಇದು ಪ್ರತಿಲೀಟರ್ ಪೆಟ್ರೋಲ್ ಗೆ 21.1 ಕಿ.ಮೀ. ಮೈಲೇಜ್ ನೀಡುತ್ತದೆ.


Click it and Unblock the Notifications








