ಅಗ್ಗದ SUV ಪರಿಚಯಿಸಲು ಮಹೀಂದ್ರ ಚಿಂತನೆ

ಮಹೀಂದ್ರ ಎಸ್ ಯುವಿ ನೋಡಲು ಎಸ್100 ಸ್ಪೋರ್ಟ್ ವಾಹನದಂತೆ ಇರಲಿದೆಯಂತೆ. ಆದರೆ ಅದಕ್ಕಿಂತ ನಾಲ್ಕು ಮೀಟರ್ ಸಣ್ಣದಾಗಿರಲಿದೆ ಎಂದು ವರದಿ ಹೇಳಿದೆ. ಇದರಿಂದ ಎಸ್ ಯುವಿ ಅಬಕಾರಿ ಸುಂಕ ಕಡಿಮೆಯಾಗಲಿದೆ. ಇದರ ದರ ಕೂಡ 4 ಲಕ್ಷ ರು.ನಿಂದ 6 ಲಕ್ಷ ರು.ವರೆಗಿರಲಿದೆ. ಕೆಲವು ವರದಿಗಳ ಪ್ರಕಾರ ಇದರ ದರ 3 ಲಕ್ಷ ರು.ನಿಂದ ಆರಂಭವಾಗಲಿದೆ.
ಇಷ್ಟು ಕಡಿಮೆ ದರಕ್ಕೆ ದೊರಕಿದರೆ ಇದು ಜಗತ್ತಿನ ಅಗ್ಗದ ಸ್ಪೋರ್ಟ್ ಯುಟಿಲಿಟಿ ವಾಹನವಾಗಲಿದೆ. ದೇಶದ ಸಣ್ಣ ಮತ್ತು ಅಗ್ಗದ ಸ್ಪೋರ್ಟ್ಸ್ ಯುಟಿಲಿಟಿ ವಾಹನವೆಂದರೆ ಪ್ರೀಮಿಯರ್ ರಿಯೊ. ಅದರ ದರ 4.7 ಲಕ್ಷ ರು. ಇದೆ. ಇದಕ್ಕಿಂತ ಕಡಿಮೆಗೆ ಮಹೀಂದ್ರ SUV ದೊರಕಲಿದೆ ಎಂದು ವರದಿಗಳು ಹೇಳಿವೆ.
SUV ಅಂದ್ರೆ ದುಬಾರಿ ವಾಹನ. ಸ್ಕೋಡಾ ಯೆಟಿ, ಜೀಪ್ ವ್ರಾಂಗ್ಲರ್ ಮತ್ತು ನಿಸ್ಸಾನ್ ಜ್ಯೂಕ್ ಪ್ರಮುಖ SUVಗಳಾಗಿವೆ. ಇದರಲ್ಲಿ ದೇಶದಲ್ಲಿ ಮಾರಾಟವಾಗುವ ಯೆಟಿ ದರ 14 ಲಕ್ಷ ರುಪಾಯಿ ಇದೆ.
ನೂತನ SUV ಮಹೀಂದ್ರ ಕಂಪನಿಯ ಚಕನ್ ಘಟಕದಲ್ಲಿ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದೇ ಘಟಕದಲ್ಲಿ ಕಂಪನಿಯು ನೂತನ XUV 500 ಕಾರನ್ನು ಉತ್ಪಾದಿಸುತ್ತಿದೆ.
ನೂತನ ಮಿನಿ ಎಸ್ ಯುವಿ 1.2 ಲೀಟರಿನ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುವ ನಿರೀಕ್ಷೆಯಿದೆ. ಯಾಕೆಂದರೆ ಸ್ಯಾನ್ಸೊಂಗ್ ಕಂಪನಿಯು ಹೆಚ್ಚಾಗಿ ಈ ಮಾದರಿಯ ಎಂಜಿನ್ ಎಸ್ ಯುವಿ ಹೊರತರುತ್ತಿದೆ. (ಚಿತ್ರದಲ್ಲಿರುವುದು ಸ್ಯಾನ್ಸೊಂಗ್ ಎಸ್ ಯುವಿ)


Click it and Unblock the Notifications