ಬುಗಾಟಿ ವೆರೊನ್ ಪ್ರತಿಸ್ಪರ್ಧಿ ಮೆಕ್ ಲಾರೆನ್ ಕಾರ್

McLaren Tests Bugatti Veyron Fighter Mega Mac
ಜಗತ್ತಿನ ಶ್ರೇಷ್ಠ ಕಾರು, ವಾಹನ ಲೋಕದ ದಂತಕತೆ, ಅತ್ಯಂತ ವೇಗದ ಕಾರು ಮತ್ತು ತನ್ನಷ್ಟು ಪೌರುಷವಿರುವ ಕಾರು ಯಾವುದೂ ಇಲ್ಲ ಎಂಬ ಅಹಂನಲ್ಲಿ ಸಾಗುತ್ತಿದ್ದ ಬುಗಾಟಿ ವೆರೊನ್ ಬೆನ್ನಲ್ಲಿ ತಣ್ಣಗಿನ ನಡುಕವೊಂದು ಆರಂಭವಾಗಿದೆ. ಮೆಕ್ ಲಾರೆನ್ ಹೊರತರಲಿರುವ ಹೈಪರ್ ಕಾರೊಂದು ಇದರ ಭಯಕ್ಕೆ ಕಾರಣ.

ಇಲ್ಲಿವರೆಗೆ ಬುಗಾಟಿ ವೆರೊನ್ ಗೆ ಪ್ರತಿಸ್ಪರ್ಧಿಯೇ ಇರಲಿಲ್ಲ. ಯಾಕೆಂದರೆ ಈಗ ಅದೇ ವಿಶ್ವದ ವೇಗದ ಕಾರು. ವೆರೊನ್ ಕಾರನ್ನು ಅಭಿವೃದ್ಧಿಪಡಿಸಲು ಎಷ್ಟು ಕ್ವಿಂಟಲ್ ಡಾಲರ್ ಸುರಿದಿದೆಯೋ ಲೆಕ್ಕವಿಲ್ಲ. ಕೊನೆಗೂ ವೆರೊನ್ ಎಂಬ ವಾಹನ ಲೋಕದ ದಂತಕತೆಯಾಗುವ ಕಾರನ್ನು ಕಂಪನಿ ಹೊರತಂದಿತ್ತು.

ಬುಗಾಟಿ ವೆರೊನ್ ಕಾರುಗಳು ನೂರರ ಲೆಕ್ಕದಲ್ಲಿ ಮಾರಾಟವಾಗುವುದಿಲ್ಲ. ದಿನಕ್ಕೆ ಒಂದು ಕಾರು ಮಾರಾಟವಾದರೆ ಸಾಧನೆ. ಯಾಕೆಂದರೆ ಬುಗಾಟಿ ವೆರೊನ್ ದರವೇ 16 ಕೋಟಿ ರುಪಾಯಿ ಇದೆ.

ಬುಗಾಟಿಗೆ ಸೆಡ್ಡುಹೊಡೆಯಲು ಮೆಕ್ ಲಾರೆನ್ ಕಾರೊಂದನ್ನು ಹೊರತರಲಿದೆಯಂತೆ. ಮೆಕ್ ಲಾರೆನ್ ಕಂಪನಿ ಫಾರ್ಮುಲಾ ಒನ್ ಕಾರುಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಫೇಮಸ್ಸು. ಕಂಪನಿಯು ಇದೀಗ ಅಭಿವೃದ್ಧಿಯ ಹಂತದಲ್ಲಿರುವ ಹೈಪರ್ ಕಾರಿನ ಟೆಸ್ಟ್ ಕೂಡ ಮಾಡಿದೆ ಎಂದು ವರದಿ ಹೇಳಿದೆ.

ಇದು 5 ಲೀಟರ್ ಎಂಜಿನ್ ಹೊಂದಿದ್ದು, ಸುಮಾರು 800 ಹಾರ್ಸ್ ಪವರ್ ನೀಡಲಿದೆ. ಈ ಕಾರಿನ ದರ, ಹೆಚ್ಚಿನ ಟೆಕ್ ಮಾಹಿತಿ ಲಭ್ಯವಿಲ್ಲ. ಆದರೆ ಬುಗಾಟಿ ವೆರೊನ್ ಮಾತ್ರ ಭಯಪಡಲಿದೆ ಅಂತ ಆಟೋ ವಿಶ್ಲೇಷಕರು ಹೇಳುತ್ತಾರೆ.

More from DriveSpark

Article Published On: Thursday, October 20, 2011, 15:10 [IST]
English summary
McLaren Tests Bugatti Veyron Fighter Mega Mac. The world of super cars and hyper cars is a very competitive one. According to reports, the new McLaren is being called as the Mega Mac. The development of the Mega Mac is so advanced that McLaren has already started track testing of the hyper car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+