ಉತ್ಪಾದನೆಯಾಗುತ್ತಿದೆ 518 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಸ್ಯಾಂಡ್ ರೇಸರ್ ಸೂಪರ್ ಕಾರು

Written By:

ಯುಎಇ ಮೂಲದ ಜಾರೂಕ್ ಮೋಟಾರ್ಸ್ ಸಂಸ್ಥೆಯು ಆಪ್ ರೋಡಿಂಗ್‌ಗಾಗಿ ಸ್ಯಾಂಡ್ ರೇಸರ್ 500ಜಿಟಿ ಸೂಪರ್ ಕಾರು ಉತ್ಪಾದನೆಗೆ ಮುಂದಾಗಿದ್ದು, ಹೊಸ ಕಾರಿನ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.

ಇದು 518 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಸ್ಯಾಂಡ್ ರೇಸರ್ ಸೂಪರ್ ಕಾರು

ಅರಬ್ ರಾಷ್ಟ್ರಗಳಲ್ಲಿ ಸ್ಯಾಂಡ್ ರೇಸರ್ ಸೂಪರ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಜಾರೂಕ್ ಮೋಟಾರ್ಸ್ ಸಂಸ್ಥೆಯು ಆಪ್ ರೋಡಿಂಗ್‌ಗಾಗಿ ವಿಶೇಷ ವಿನ್ಯಾಸದ 500ಜಿಟಿ ಸೂಪರ್ ಕಾರನ್ನು ಉತ್ಪಾದನೆ ಮಾಡಲು ಮುಂದಾಗಿದ್ದು, ಸೂಪರ್ ಕಾರು ಪ್ರಿಯರನ್ನು ಸೆಳೆಯುವ ಯೋಜನೆಯಲ್ಲಿದೆ.

ಇದು 518 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಸ್ಯಾಂಡ್ ರೇಸರ್ ಸೂಪರ್ ಕಾರು

2015ರಲ್ಲಿ ಮೊದಲ ಬಾರಿಗೆ ಅಬುದಾಬಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ 500 ಜಿಟಿ ಸೂಪರ್ ಕಾರನ್ನು ಪ್ರದರ್ಶನ ಮಾಡಲಾಗಿತ್ತು. ಈ ಹಿನ್ನೆಲೆ ಜಿಟಿ 500 ಉತ್ಪಾದನೆಗೆ ಬೇಡಿಕೆ ಹೆಚ್ಚಿದ್ದು, ಜಾರೂಕ್ ಮೋಟಾರ್ಸ್ ಈ ನಿಟ್ಟಿನಲ್ಲಿ ಬೃಹತ್ ಯೋಜನೆ ರೂಪಿಸಿದೆ.

ಇದು 518 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಸ್ಯಾಂಡ್ ರೇಸರ್ ಸೂಪರ್ ಕಾರು

ಎಂಜಿನ್ ಸಾಮರ್ಥ್ಯ

6.2-ಲೀಟರ್ ವಿ8 ಎಂಜಿನ್ ಹೊಂದಿರುವ ಜಿಟಿ500 ಸೂಪರ್ ಕಾರು 518 ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದೆ. ಜೊತೆಗೆ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದೆ.

ಇದು 518 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಸ್ಯಾಂಡ್ ರೇಸರ್ ಸೂಪರ್ ಕಾರು

518 ಬಿಎಚ್‌ಪಿ ಉತ್ಪಾದನೆ ಹಿನ್ನೆಲೆ ಆಪ್ ರೋಡಿಂಗ್‌ಗೆ ಇದು ವಿಶೇಷ ಶಕ್ತಿ ತುಂಬಲಿದ್ದು, ಅರಬ್ ರಾಷ್ಟ್ರಗಳಲ್ಲಿನ ಮರಳುಗಾಡು ಕೌಶಲ್ಯ ಪ್ರದರ್ಶನಗಳಿಗೆ ಸಹಕಾರಿಯಾಗಲಿದೆ.

ಇದು 518 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಸ್ಯಾಂಡ್ ರೇಸರ್ ಸೂಪರ್ ಕಾರು

ಇದಲ್ಲದೇ 660 ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಪಡೆದುಕೊಂಡಿರುವ ಜಿಟಿ500,5-ಸ್ಪೀಡ್ ಸಿಕ್ವೆಷನಲ್ ಗೇರ್‌ಬಾಕ್ಸ್ (ಸೂಪರ್ ಕಾರುಗಳಲ್ಲಿ ಮಾತ್ರ ಬಳಕೆ) ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಇದು 518 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಸ್ಯಾಂಡ್ ರೇಸರ್ ಸೂಪರ್ ಕಾರು

ಇನ್ನು ಕಾರಿನ ಒಳವಿನ್ಯಾಸಗಳನ್ನು ಪೂರ್ಣ ಪ್ರಮಾಣದ ಸುಧಾರಿತ ತಂತ್ರಜ್ಞಾಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, 1300 ಕೆಜಿ ತೂಕ ಪಡೆದುಕೊಂಡಿದೆ.

ಇದು 518 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಸ್ಯಾಂಡ್ ರೇಸರ್ ಸೂಪರ್ ಕಾರು

ಈ ಹಿನ್ನೆಲೆ ಜಿಟಿ500 ಸೂಪರ್ ಕಾರಿನ ಬೆಲೆಗಳು ಕೂಡಾ ದುಬಾರಿಯಾಗಿದ್ದು, 4.50 ಲಕ್ಷ ಯುಎಸ್ಎ ಡಾಲರ್‌ಗೆ (ಅಂದಾಜು 2.80 ಕೋಟಿ) ನಿಗದಿಯಾಗುವ ಸಾಧ್ಯತೆಗಳಿವೆ. ಜೊತೆಗೆ ಮುಂಬರುವ ದಿನಗಳಲ್ಲಿ ಸೂಪರ್ ಕಾರು ಮಾದರಿಗಳಲ್ಲಿ ಜಿಟಿ 500 ಮಾದರಿಯೂ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳು ಕೂಡಾ ಇವೆ.

English summary
Read in Kannada 518bhp Off-Road Supercar Enters Production.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark