ಸೂಪರ್ ಕಾರುಗಳನ್ನು ಸತ್ಕರಿಸಲು ಭಾರತ ಯೋಗ್ಯವಲ್ಲವೇ ?

By Nagaraja

ಸೂಪರ್ ಕಾರು ಅಂತಾನೆ ಅಲ್ಲ ಯಾವುದೇ ಕಾರನ್ನು ಓಡಿಸಲು ಭಾರತ ಅತ್ಯಂತ ಕೆಟ್ಟ ರಸ್ತೆ ವ್ಯವಸ್ಥೆಯನ್ನು ಹೊಂದಿದೆ. ಗುಂಡಿಗಳಿಂದ ತುಂಬಿಕೊಂಡಿರುವ ರಸ್ತೆಗಳಿಂದಾಗಿ ವಾಹನವನ್ನು ಓಡಿಸಲು ಹರ ಸಾಹಸಪಡಬೇಕು. ಹಾಗಿರುವಾಗ ಕಡಿಮೆ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ಸೂಪರ್ ಕಾರುಗಳನ್ನು ಚಾಲನೆ ಮಾಡುವುದಾದರೂ ಹೇಗೆ ? ಇಲ್ಲಿ ನಿಜಕ್ಕೂ ಸೂಪರ್ ಕಾರುಗಳನ್ನು ಸತ್ಕರಿಸಲು ಭಾರತ ಯೋಗ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ದೇಶದಲ್ಲಿ ಸೂಪರ್ ಕಾರುಗಳು ಸಂಖ್ಯೆ ಬೆರಳಣಿಕೆಯಷ್ಟೇ ಮಾತ್ರವಾದರೂ ಪದೇ ಪದೇ ಸಂಭವಿಸುತ್ತಿರುವ ಅಪಘಾತ ಪ್ರಸಂಗಗಳು ಆತಂಕವನ್ನು ಇಮ್ಮಡಿಗೊಳಿಸುತ್ತದೆ. ಇದರಿಂದಾಗಿ ಭಾರತ ಸೂಪರ್ ಕಾರುಗಳಿಗೆ ಅನರ್ಹ ಎಂಬ ಭಾವನೆ ಉಂಟಾಗಿರುವುದಂತೂ ಅಷ್ಟೇ ಸತ್ಯ.

ಪೋರ್ಷೆ 911 ಟರ್ಬೊ

ಪೋರ್ಷೆ 911 ಟರ್ಬೊ

ಹೈದರಾಬಾದ್ ಹೊರವಲಯದ ರಿಂಗ್ ರೋಡ್ ನಲ್ಲಿ ಉದ್ಯಮಿಯೋರ್ವರು 2.5 ಕೋಟಿ ಬೆಲೆ ಬಾಳುವ ಪೋರ್ಷೆ ಟರ್ಬೊ 911 ಕಾರನ್ನು ಗಂಟೆಗೆ 250 ಕೀ.ಮೀ. ವೇಗದಲ್ಲಿ ಓಡಿಸುವ ಪ್ರಯತ್ನ ಮಾಡಿದ್ದರು. ತದಾ ಬೆನ್ನಲ್ಲೇ ಕಾರಿನ ನಿಯಂತ್ರಣ ಕಳೆದುಕೊಂಡಿದ್ದರಿಂದ ಅಪಘಾತ ಸಂಭವಿಸಿತ್ತಲ್ಲದೆ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದರು.

ಲಂಬೋರ್ಗಿನಿ ಮರ್ಸಿಲ್ಯಾಗೊ

ಲಂಬೋರ್ಗಿನಿ ಮರ್ಸಿಲ್ಯಾಗೊ

ದೆಹಲಿಯಲ್ಲಿ ಇಟಲಿಯ ಐಕಾನಿಕ್ ಲಂಬೋರ್ಗಿನಿ ಮರ್ಸಿಲ್ಯಾಗೊ ಸೂಪರ್ ಕಾರಿನ ನಿಯಂತ್ರಣ ತಪ್ಪಿ ಕಾಂಕ್ರೀಟ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಂಪೂರ್ಣವಾಗಿ ನಜ್ಜುಗೊಂಡಿತ್ತು. ಆರು ಕೋಟಿ ಬೆಲೆ ಬಾಳುವ ಕಾರನ್ನು ಕೊನೆಗೆ ಕ್ರೇನ್ ಮೂಲಕ ಎತ್ತಬೇಕಾದ ದುಸ್ಥಿತಿ ಎದುರಾಗಿತ್ತು.

ಬುಗಾಟಿ ವೆರೋನ್

ಬುಗಾಟಿ ವೆರೋನ್

ಭಾರತೀಯ ರಸ್ತೆಗಳಲ್ಲಿ ವೇಗಕ್ಕೆ ಕಡಿವಾಣ ಹಾಕಲು ಅಲ್ಲಲ್ಲಿ ಸ್ಪೀಡ್ ಬ್ರೇಕರ್ ಗಳನ್ನು ಲಗತ್ತಿಸಲಾಗಿರುತ್ತದೆ. ಇದು ಸೂಪರ್ ಕಾರುಗಳಿಗೆ ಹೆಚ್ಚಿನ ತೊಂದರೆಯನ್ನುಂಟು ಮಾಡುತ್ತದೆ ಅಂದರೆ ತಪ್ಪಾಗಲಾರದು. ಕೋಟಿ ಬೆಲೆ ಬಾಳುವ ಬುಗಾಟಿ ಸೂಪರ್ ಕಾರಿಗೂ ಇದೇ ಸಂಕಟ ಎದುರಾಗಿತ್ತು.

 ರೇಸ್ ಗಿಳಿದ ಸೂಪರ್ ಕಾರುಗಳು

ರೇಸ್ ಗಿಳಿದ ಸೂಪರ್ ಕಾರುಗಳು

ನಮ್ಮ ಬೆಂಗಳೂರಿನಲ್ಲಿ ತ್ರಿವಳಿ ಸೂಪರ್ ಕಾರುಗಳು ಬಿಎಂಟಿಸಿ ಜೊತೆ ರೇಸ್ ಗಿಳಿದಿದ್ದವು. ಬಿಎಂಡಬ್ಲ್ಯು, ಫೆರಾರಿ ಹಾಗೂ ಲಂಬೋರ್ಗಿನಿ ಕಾರುಗಳು ಟ್ರಾಫಿಕ್ ಮಧ್ಯೆ ಸಿಕ್ಕಿ ಹಾಕಿಕೊಂಡರೂ ಸೂಪರ್ ಕಾರುಗಳು ರೇಸ್ ಗಿಳಿದಿದ್ದವು.

ಲಂಬೋರ್ಗಿನಿ ಗಲರ್ಡೊ

ಲಂಬೋರ್ಗಿನಿ ಗಲರ್ಡೊ

ಸೂಪರ್ ಕಾರೇ ಆದರೇನು ? ನಾಯಿಗೆ ಎಲ್ಲವೂ ಸಮಾನ. ಹೊರಗಡೆ ಪಾರ್ಕ್ ಮಾಡಿದ ಲಂಬೋರ್ಗಿನಿ ಗಲರ್ಡೊ ಕಾರಿಗೆ ನಾಯಿ ಅಭಿಷೇಕ ಮಾಡಿರುವುದು ಮೋಜನ್ನು ಸೃಷ್ಟಿ ಮಾಡಿದೆ.

ಮಗದೊಂದು ಗಲರ್ಡೊ ಸ್ಟೋರಿ

ಮಗದೊಂದು ಗಲರ್ಡೊ ಸ್ಟೋರಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಾರ್ಟಿ ಮುಗಿಸಿಕೊಂಡು ವಾಪಾಸ್ ಬರುತ್ತಿರುವ ವೇಳೆಗೆ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದರು. ಕ್ಷಣ ಮಾತ್ರದಲ್ಲಿ ಗಲರ್ಡೊ ಕಾರು ಸಂಪೂರ್ಣವಾಗಿ ಪುಡಿ ಪುಡಿಯಾಗಿತ್ತು.

ಆಡಿ ಆರ್8

ಆಡಿ ಆರ್8

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಆಡಿಯಿಂದ ನಿರ್ಮಿತ ಅತ್ಯಾಕರ್ಷಕ ಆರ್8 ಕಾರು, ಮುಂಬೈನಲ್ಲಿ ಹಾಡ ಹಗಲೇ ಅಗ್ನಿಗೆ ಶರಣಾಗಿತ್ತು. ಪ್ರಕರಣದ ಬಗ್ಗೆ ಸಂಸ್ಥೆಯು ತನಿಖೆಯನ್ನು ಹಮ್ಮಿಕೊಂಡಿತ್ತು.

ಲಂಬೋರ್ಗಿನಿ ಗಲರ್ಡೊ

ಲಂಬೋರ್ಗಿನಿ ಗಲರ್ಡೊ

ದೆಹಲಿಯಲ್ಲಿ ಐಷಾರಾಮಿ ಹೋಟೆಲ್ ವೊಂದಕ್ಕೆ ತೆರಳಿ ವ್ಯಾಲೆಟ್ ಪಾರ್ಕ್ ಮಾಡಲು ನೀಡಿದಾಗ ಹೋಟೆಲ್ ಸಿಬ್ಬಂದಿ ಕಾರಿನ ನಿಯಂತ್ರಣವನ್ನು ಕಳೆದುಕೊಂಡು ನೇರವಾಗಿ ಢಿಕ್ಕಿ ಹೊಡಿದಿದ್ದರು.

ಲಂಗೋರ್ಗಿನಿ ಹ್ಯುರಕನ್

ಲಂಗೋರ್ಗಿನಿ ಹ್ಯುರಕನ್

ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ಇತ್ತೀಚೆಗಷ್ಟೇ ನಡೆದ ಘಟನೆಯಲ್ಲಿ ಥಾಣೆಯ ಸ್ಥಳೀಯ ಶಾಸಕನ ಪತ್ನಿ ಆಗಷ್ಟೇ ಶೋ ರೂಂನಿಂದ ಹೊರಗಿಳಿದ ಪಳಪಳನೆ ಹೊಳೆಯುವ ಲಂಬೋರ್ಗಿನಿ ಹ್ಯುರಕನ್ ಸೂಪರ್ ಕಾರನ್ನು ಆಟೋ ರಿಕ್ಷಾಗೆ ಢಿಕ್ಕಿ ಹೊಡೆಯುವ ಮೂಲಕ ಎಡವಟ್ಟು ಮಾಡಿಕೊಂಡಿದ್ದರು.

More from DriveSpark

Article Published On: Tuesday, September 6, 2016, 11:19 [IST]
English summary
Supercars have been badly treated in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+