ಫಾಬಿಯಾ, ಷೆವರ್ಲೆ ಕಾರಿಗೆ ಹಬ್ಬದ ಡಿಸ್ಕೌಂಟ್!!

ದೀಪಾವಳಿ ಆಫರ್ ದೊರಕಿರುವುದು ಫಾಬಿಯಾ ಎಂಪಿಐ ಎಲೆಗೆನ್ಸ್ ಕಾರಿಗೆ ಮಾತ್ರ. ಶಕ್ತಿಶಾಲಿ ಹ್ಯಾಚ್ ಬ್ಯಾಕ್ ಕಾರು ಖರೀದಿಸಲು ಬಯಸುವರು ಖಂಡಿತವಾಗಿಯೂ ಫಾಬಿಯಾ ಆಯ್ಕೆ ಮಾಡಿಕೊಳ್ಳಬಹುದು. ಪ್ರಸಕ್ತ ತಿಂಗಳು ಈ ಆವೃತ್ತಿಯ ಫಾಬಿಯಾ ಕಾರಿನ ದರ ಸುಮಾರು 61,500 ರು. ಕಡಿಮೆಯಾಗಿದೆ.
ಈ ಕಾರಿನ ಈ ಹಿಂದಿನ ದರ 6.11 ಲಕ್ಷ ರುಪಾಯಿ. ಇದೀಗ 61,700 ರು. ಡಿಸ್ಕೌಂಟ್ ಇರುವುದರಿಂದ 5.5 ಲಕ್ಷ ರುಪಾಯಿಗೆ ಫಾಬಿಯಾ ಖರೀದಿಸಬಹುದು. Fabia 1.2 Mpi Elegance ಕಾರಿನಲ್ಲಿ 2 ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಎಸ್ ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ.
ಬೇಸ್ ಆವೃತ್ತಿ ಫಾಬಿಯಾ ಎಂಪಿಐ ಕ್ಲಾಸಿಕ್ ಕಾರಿಗೆ ಕಂಪನಿಯು 28,700 ರು. ಡಿಸ್ಕೌಂಟ್ ಮಾಡಿದೆ. ಹೀಗಾಗಿ ಈ ಕಾರಿನ ದರ 4.43 ಲಕ್ಷ ರು. ಇದ್ದದ್ದು 4.15 ಲಕ್ಷ ರು.ಗೆ ತಲುಪಿದೆ. ಸ್ಕೋಡಾ ಫಾಬಿಯಾ ಪ್ರತಿತಿಂಗಳ ಸರಾಸರಿ ಮಾರಾಟ ಸುಮಾರು 1,300 ಯುನಿಟ್ ಆಗಿದೆ.
ಷೆವರ್ಲೆ: ಷೆವರ್ಲೆ ಯು-ವಿಎ ಎಲ್ಟಿ ಕಾರನ್ನು ಖರೀದಿಸಬೇಕೆಂದು ಬಯಸುವರಿಗೆ ಇದು ಸೂಕ್ತ ಸಮಯ. ಈ ಹಬ್ಬದ ಸೀಸನಿನಲ್ಲಿ ಯು-ವಿಎ ಕಾರಿನ ದರ 55 ಸಾವಿರ ರು. ಕಡಿಮೆಯಾಗಿದೆ.
Chevrolet U-VA LT ಕಾರಿನ ದರ 4.84 ಲಕ್ಷ ರುಪಾಯಿ. ಇದೀಗ ದರ ಕಡಿಮೆ ಆಗಿರುವುದರಿಂದ ಸುಮಾರು 4.29 ಲಕ್ಷ ರು.ಗೆ ಈ ಕಾರು ದೊರಕುತ್ತದೆ. ಕಂಪನಿಯು ಸೆಪ್ಟಂಬರ್ ನಲ್ಲಿ ಕೇವಲ 71 ಯೂನಿಟ್ ಯು-ವಿಎ ಕಾರು ಮಾರಾಟ ಮಾಡಿದೆ.


Click it and Unblock the Notifications








