ಸುಳ್ಳೇ ಸುಳ್ಳು ಮಹಿಳೆಯರು ಹೇಳೋದೆಲ್ಲ ಸುಳ್ಳೇ ಸುಳ್ಳು
"ನಂದೇನೂ ತಪ್ಪಿಲ್ಲ ಅಂಕಲ್. ಇವರು ಸಿಗ್ನಲ್ ಬಳಿ ಒಮ್ಮೆಗೆ ಬ್ರೇಕ್ ಹಾಕಿದ್ರು. ನನ್ ಸ್ಕೂಟಿ ಹಿಂದಿನಿಂದ ಗುದ್ದಿಬಿಡ್ತು" ಅಂತ ಮಹಿಳೆಯರು ರೆಡಿಮೆಡ್ ಉತ್ತರ ನೀಡುತ್ತಾರೆ. ವಾಹನ ಅಪಘಾತ ಮಾಡಿದ ನಂತರ ಹೆಚ್ಚಿನ ಮಹಿಳೆಯರು ಸುಳ್ಳುಗಾರ್ತಿಯರು ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ಸಮೀಕ್ಷೆ ಲಂಡನಿನಲ್ಲಿ ನಡೆದಿದೆ.
ಸರಾಸರಿ ಹತ್ತು ಮಹಿಳೆಯರಲ್ಲಿ 8 ಮಹಿಳೆಯರು ವಾಹನ ಅಪಘಾತದಲ್ಲಿ ತಮ್ಮ ತಪ್ಪಿದ್ದರೂ ಒಪ್ಪಿಕೊಳ್ಳುವುದಿಲ್ಲವಂತೆ. ಅವರು ಅಪಘಾತಕ್ಕೆ ಬೇರೆ ಯಾರನ್ನೋ ಹೊಣೆ ಮಾಡುತ್ತಾರೆಂದು ವಿಮಾ ಕಂಪನಿ ಯಂಗ್ ಮಾರ್ಮಲಂಡ್ ಸಮೀಕ್ಷೆ ತಿಳಿಸಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.
ಈ ಕಂಪನಿಯು ವಾಹನ ಅಪಘಾತ ಮಾಡಿದ ಮಹಿಳೆಯರನ್ನು ಸಮೀಕ್ಷೆ ನಡೆಸಿತ್ತು. ಇದರಲ್ಲಿ ಶೇಕಡ 78ರಷ್ಟು ಮಹಿಳೆಯರು ಅಪಘಾತದಲ್ಲಿ ತಮ್ಮ ತಪ್ಪಿಲ್ಲವೆಂದು ಹೇಳಿದರಂತೆ. ಇದರಲ್ಲಿ ಹೆಚ್ಚಿನ ಅಪಘಾತದಲ್ಲಿ ಇವರದ್ದೇ ತಪ್ಪಿರುವುದು ತನಿಖೆಯಿಂದ ತಿಳಿದುಬಂದಿತ್ತು.
ಸುಮಾರು 2 ಸಾವಿರ ಮಹಿಳೆಯರನ್ನು ಸಮೀಕ್ಷೆ ನಡೆಸಲಾಯಿತು. ಅದರಲ್ಲಿ ಶೇಕಡ 19ರಷ್ಟು ಮಹಿಳೆಯರು ತಮ್ಮ ಕಾರಲ್ಲಿ ಯಾವುದೋ ಸಮಸ್ಯೆ ಇತ್ತು ಎಂದಿದ್ದಾರೆ.
ಶೇಕಡ 31ರಷ್ಟು ಮಹಿಳೆಯರು ರಸ್ತೆಯಲ್ಲಿ ಯಾವುದೋ ಸಮಸ್ಯೆ ಎದುರಾಯಿತು ಎಂದಿದ್ದಾರೆ. ಅಂದರೆ ಪ್ರಾಣಿಗಳು ಅಡ್ಡಬರುವುದು, ಪಾದಚಾರಿಗಳು ಅಡ್ಡಬರುವುದು ಇತ್ಯಾದಿ ಸಮಸ್ಯೆ ಮುಂದಿಟ್ಟು "ಇಂತಹ ಸಮಯದಲ್ಲಿ ನಾವು ಹೇಗೆ ಕಾರ್ ಕಂಟ್ರೋಲ್ ಮಾಡೋಕೆ ಸಾಧ್ಯ? ಅಂತಾರೆ. ಕೆಲವರು ವಾತಾವರಣದ ಮೇಲೆ ದೂರು ಹಾಕುತ್ತಾರೆ. ಮಂಜು ಕವಿದಿತ್ತು. ರಸ್ತೆ ಸ್ವಲ್ಪನೂ ಕಾಣಿಸ್ತಾ ಇರ್ಲಿಲ್ಲ ಅನ್ನೋರು ಇದ್ದಾರೆ.
"ನಾನು ಸರಿಯಾಗಿಯೇ ಡ್ರೈವಿಂಗ್ ಮಾಡ್ತಾ ಇದ್ದೆ. ಆದ್ರೆ ಒಂದು ಸೆಕೆಂಡಿನಲ್ಲಿ ಕಣ್ಣುಮುಚ್ಚಿತೆರೆಯೋದ್ರಲ್ಲಿ ಏನೋ ಆಗಿಬಿಡ್ತು". ನಾನು ಸರಿಯಾದ ಸ್ಥಳದಲ್ಲಿಯೇ ಪಾರ್ಕ್ ಮಾಡಿದ್ದೆ. ಯಾವುದೋ ಕಾರು ನನ್ನ ಕಾರನ್ನು ಪಾರ್ಕಿಂಗ್ ಸ್ಥಳದಿಂದ ಸ್ವಲ್ಪ ಮುಂದಕ್ಕೆ ತಳ್ಳಿಬಿಡ್ತು" ಅಂತ ಹೆಚ್ಚಿವರು ಬುರುಡೆ ಬಿಡುತ್ತಾರಂತೆ.
ಹೀಗೆ ಮಹಿಳೆಯರು ವಾಹನ ಅಪಘಾತ ಮಾಡಿದ ನಂತರ ಲೆಕ್ಕವಿಲ್ಲದಷ್ಟು ಸುಳ್ಳಿನ ಸರಮಾಲೆಯನ್ನೇ ಬಿಡುತ್ತಾರಂತೆ. ತಪ್ಪು ಒಪ್ಪಿಕೊಳ್ಳಲು ಮುಜುಗರ ಪಡುವುದು ಇದಕ್ಕೆ ಕಾರಣ ಆಗಿರಬಹುದು. ಆದ್ರೆ ಪುರುಷರು ಅಪಘಾತ ಮಾಡಿದ ನಂತರ ಹೊಡೆದಾಟಕ್ಕೆ ಇಳಿಯುತ್ತಾರೆ ಅಂತ ಯಾವ ಅಧ್ಯಯನವೂ ಹೇಳುವ ಅಗತ್ಯವಿಲ್ಲ!


Click it and Unblock the Notifications









