ಎಫ್1 ಕಾರಲ್ಲಿ ರಾ.ಒನ್ ಪ್ರಚಾರ ಮಾಡಿದ ಶಾರೂಖ್

Shahrukh Khan Promoting Ra.One Formula One car
ಬಹುನಿರೀಕ್ಷಿತ ಶಾರೂಖ್ ಖಾನ್ ಸಿನಿಮಾ ರಾ.ಒನ್ ಇದೇ ತಿಂಗಳ 26ರಂದು ಬಿಡುಗಡೆಯಾಗಲಿದೆ. ಇದು ಕಾರು ಉದ್ಯಮಕ್ಕೂ ಪ್ರಮುಖ ಚಿತ್ರ. ಜನರಲ್ಲಿರುವ ಕಾರು ಕ್ರೇಜನ್ನೇ ಬಂಡವಾಳವಾಗಿಸಲು ಸಿನಿಮಾ ತಂಡವೂ ಪ್ರಯತ್ನಿಸುತ್ತಿದೆ. ಇದೀಗ ಶಾರೂಖ್ ಖಾನ್ ಫಾರ್ಮುಲಾ ಒನ್ ಕಾರು ಮೂಲಕ ರಾ.ಒನ್ ಪ್ರಚಾರ ಪಡಿಸುತ್ತಿದ್ದಾರೆ.

ಶಾರೂಖ್ ಖಾನ್ ಸಿನಿಮಾ ಪ್ರಚಾರಕ್ಕೆ ಕಾರು ತಂತ್ರ ಅನುಸರಿಸಿದ್ದಾರೆ. ಸಹಾರ ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ತಂಡದೊಂದಿಗೆ ಶಾರೂಖ್ ಕೂಡ ಕಾಣಿಸಿಕೊಂಡಿದ್ದಾರೆ. ತನ್ನ ರಾ.ಒನ್ ಸಿನಿಮಾಕ್ಕೆ ತಕ್ಕ ಹಾಗೇ ಎಫ್1 ಕಾರಲ್ಲಿ ಪೋಸ್ ನೀಡುತ್ತಿದ್ದಾರೆ. ಈ ಮೂಲಕ ಸಿನಿಮಾ ಪ್ರಮೋಟ್ ಮಾಡುತ್ತಿದ್ದಾರೆ.

ಶಾರೂಖ್ ಖಾನ್ ವೇಗದ ಎಫ್1 ಕಾರು ವಿಜೆಎಂ04ರಲ್ಲಿ ಪೋಸ್ ನೀಡಿದ್ದಾರೆ. ಇದರೊಂದಿಗೆ ಟಿವಿ ಜಾಹೀರಾತೊಂದರಲ್ಲಿ ಎಫ್1 ರೇಸಿನಲ್ಲಿ ಭಾರತ ಗೆಲುವು ಪಡೆಯಲಿ ಎಂದು ರಾ.ಒನ್ ವೇಷದಲ್ಲಿ ಶಾರೂಖ್ ಹಾರೈಸಿದ್ದಾರೆ.

ಈ ಸಿನಿಮಾ ದೇಶದ ಕಾರು ಉದ್ಯಮಕ್ಕೂ ಪ್ರಮುಖವಾಗಿದೆ. ಯಾಕೆಂದರೆ ಇದರಲ್ಲಿ ಲೆಕ್ಕವಿಲ್ಲದಷ್ಟು ಕಾರುಗಳನ್ನು ಬಳಸಲಾಗಿದೆ. ತಮ್ಮ ಕಾರು ಬ್ರಾಂಡ್ ಗಳನ್ನು ಪ್ರಚಾರಗೊಳಿಸಲು ಫೋಕ್ಸ್ ವ್ಯಾಗನ್ ಮುಂತಾದ ಕಂಪನಿಗಳಿಗೆ ಇದು ಪ್ರಮುಖ ಅವಕಾಶವಾಗಿದೆ.

ಇತ್ತೀಚೆಗೆ ಶಾರೂಖ್ ಪತ್ನಿ ಗೌರಿಗೆ ಫೋಕ್ಸ್ ವ್ಯಾಗನ್ ಕಾರೊಂದನ್ನು ಉಡುಗೊರೆ ನೀಡಿರುವುದು ಕೂಡ "ರಾ.ಒನ್" ಸಿನಿಮಾ ವಾಹನೋದ್ಯಮಕ್ಕೆ ಎಷ್ಟು ಪ್ರಮುಖ ಎಂಬುದರ ನಿದರ್ಶನವಾಗಿದೆ.

More from DriveSpark

Article Published On: Friday, October 21, 2011, 11:11 [IST]
English summary
Ra.One set to hit the theaters this Diwali 2011. Superhero Shahrukh Khan now Promoting Ra.One in Formula One car. This film impotent fo Automobile Industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+