ದೀಪಾವಳಿ ಆಫರ್: ನ್ಯಾನೊ ಖರೀದಿದಾರರಿಗೆ ಬಂಪರ್

ಕಂಪನಿಯ ಸದ್ಯದ ಆಫರ್ ಈ ತಿಂಗಳ ಅಂತ್ಯದವರೆಗೆ ಮಾತ್ರ. ನ್ಯಾನೊ ಮೂರು ಆವೃತ್ತಿಗಳಿಗೆ ಕೇವಲ ಹದಿನೈದು ಸಾವಿರ ರು. ಡೌನ್ ಪೇಮೆಂಟ್ ಮಾಡಿದರೆ ಸಾಕಂತೆ. ಈ ಹಿಂದೆ ಬೇಸಿಕ್ ಆವೃತ್ತಿಗೆ ಮಾತ್ರ ಈ ಆಫರ್ ನೀಡಲಾಗಿತ್ತು.
ಇದರೊಂದಿಗೆ ಕಂಪನಿಯು ದೀಪಾವಳಿ ಎಕ್ಸ್ ಚೇಂಜ್ ಆಫರ್ ಕೂಡ ಪ್ರಕಟಿಸಿದೆ. ಅಂದರೆ ದ್ವಿಚಕ್ರ ಸೇರಿದಂತೆ ಹೆಚ್ಚಿನ ವಾಹನಗಳ ವಿನಿಮಯಕ್ಕೆ 5 ಸಾವಿರ ರು. ಬೋನಸ್ ಪಡೆಯಬಹುದಂತೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಮೋಟರ್ ಫೈನಾನ್ಸ್ ಮತ್ತು ಎಚ್ ಡಿಎಫ್ಸಿ ಬ್ಯಾಂಕ್ ಮೂಲಕ ಕಂಪನಿಯು ಕಡಿಮೆ ಬಡ್ಡಿದರಕ್ಕೆ ಕಾರು ಖರೀದಿಸಲು ಅವಕಾಶ ಮಾಡಿಕೊಡಲಿದೆಯಂತೆ.
ನ್ಯಾನೊ ಮೂರು ಆವೃತ್ತಿಗಳಿಗೆ ತಿಂಗಳಿಗೆ ಪಾವತಿಸಬೇಕಾದ ಇಎಂಐ ದರ ಈ ಕೆಳಗಿನಂತಿವೆ. ಇದರಲ್ಲಿ ರಸ್ತೆ ತೆರಿಗೆ ಮತ್ತು ವಿಮಾ ಪಾವತಿ ಸೇರಿಲ್ಲ.
ನ್ಯಾನೊ ಸ್ಟಾಂಡರ್ಡ್: 3,400 ರುಪಾಯಿ
ನ್ಯಾನೊ ಸಿಎಕ್ಸ್: 4,165 ರು.
ನ್ಯಾನೊ ಎಲ್ಎಕ್ಸ್: 4,785 ರುಪಾಯಿ.


Click it and Unblock the Notifications