ಲೇಡಿ ಗಾಗಾಳನ್ನು ಟಿವಿಯಲ್ಲಿಯೇ ನೋಡಿ ತೃಪ್ತಿಪಡಿ

Lady Gaga concert in India on Oct 30
ಸ್ಟಿಫಾನಿ ಜೋನ್ ಅಂಜೆಲಿನಾ ಜರ್ಮನೊಟಾ ಹೆಸರು ಕೇಳಿದ್ದೀರಾ? ಎಷ್ಟೇ ಸ್ಪೀಡಲ್ಲಿ ತಲೆ ಓಡಿಸಿದರೂ ಈ ಹೆಸರಿನ ವ್ಯಕ್ತಿ ಯಾರೆಂದು ಗೊತ್ತಾಗಲಿಕ್ಕಿಲ್ಲ. ಅದೇ, ಲೇಡಿ ಗಾಗಾ ಅಂದರೆ? ಹೆಸರು ಕೇಳಿದ ಕೂಡಲೆ ಯುವಜನತೆಯ ಮನಸು ನವಿಲಾಗುತ್ತದೆ. ಸಂಗೀತಪ್ರಿಯರು ಗಾಗಾ ಅನ್ನುತ್ತ ಗಾನದಲ್ಲಿ ಲೀನರಾಗಿಬಿಡುತ್ತಾರೆ.

ಭಾರತದಲ್ಲಿ ಮೊತ್ತಮೊದಲನೆಯ ಬಾರಿಗೆ ನಡೆಯುತ್ತಿರುವ ಫಾರ್ಮ್ಯುಲಾ 1 ರೇಸಿಂಗ್ ನಡೆಯುವ ಮುನ್ನ ಚಿತ್ರವಿಚಿತ್ರ ಕೇಶವಿನ್ಯಾಸಕ್ಕೆ, ಇಂಥ ಬಟ್ಟೆಯನ್ನೂ ಮಹಿಳೆಯರು ಧರಿಸುತ್ತಾರಾ ಎಂದು ಹುಬ್ಬೇರುವಂತೆ ಬಟ್ಟೆ ಧರಿಸುವ ಅಮೆರಿಕದ ಹಾಡುಗಾರ್ತಿ ಲೇಡಿ ಗಾಗಾ ನಡೆಸಿಕೊಡಲಿರುವ ಸಂಗೀತ ಕಾರ್ಯಕ್ರಮಗಳು ಅಯ್ಯಂಗಾರ್ ಬೇಕರಿಯ ಹಾಟ್ ಪಫ್ಸ್ ಗಳಂತೆ ಮಾರಾಟವಾಗಿರುವುದು ಆಕೆಯ ಬಗ್ಗೆ ಭಾರತದ ಜನತೆಗಿರುವ ಹುಚ್ಚಿಗೆ ಹಿಡಿದ ಕನ್ನಡಿ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಜೇಪೀ ಗ್ರೀನ್ಸ್ ಗೋಲ್ಫ್ ಅಂಡ್ ಸ್ಪಾ ರೆಸಾರ್ಟ್ ನಲ್ಲಿ ಅ.30ರಂದು ಲೇಡಿ ಗಾಗಾ ಸಂಗೀತ ಸಂಜೆ ಏರ್ಪಾಟಾಗಿದೆ. ಟಿಕೆಟ್ಟುಗಳೆಲ್ಲ ಸೋಲ್ಡೌಟಾಗಿದ್ದು ಯಾಕೆಂದರೆ, ಅಲ್ಲಿ ಇರುವ ಸ್ಥಾನಗಳ ಸಂಖ್ಯೆ ಸಾವಿರ ಮಾತ್ರ. ಅಲ್ಲಿ ಬಿಟ್ಟಿ ಪಾಸ್ ಹಿಡಿದುಕೊಂಡು ಬರುವ ವಿವಿಐಪಿಗಳೆಷ್ಟೊ? ಸಿಕ್ಕವರಿಗೆ ಸೀರುಂಡೆ!

ಒಂದೊಂದು ಟಿಕೆಟ್ ಬೆಲೆ ಕೇವಲ 40 ಸಾವಿರ ರು.ಗಳು ಮಾತ್ರ! ಇಂಥ ದುಬಾರಿ ಬೆಲೆಯಿದ್ದರೂ ಟಿಕೆಟ್ ಗಳೆಲ್ಲ ಮಾರಾಟವಾಗಿವೆ. 'ಟಿಕೆಟ್ ಬೆಲೆ ಏರಿಸದೆ ಗತ್ಯಂತರವೇ ಇರಲಿಲ್ಲ. ಹಾಕಿದ ದುಡ್ಡು ವಾಪಸ್ ಪಡೆಯುವುದು ಬೇಡವೆ?' ಎನ್ನುವುದು ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ನುಡಿಗಳು. ಅವರೇ ಈ ಸಂಗೀತ ಸಂಜೆಯ ಆಯೋಜಕ.

ಟಿಕೆಟ್ ಸಿಗದವರು ನಿರಾಶರಾಗುವ ಅಗತ್ಯವಿಲ್ಲ. ಅಯ್ಯೋ, ಗಾಗಾ ಹಾಡಿಗೆ ಅಷ್ಟೊಂದು ದುಡ್ಡು ಸುರಿಯೋದಕ್ಕೇನು ಹುಚ್ಚಾ? ಅಂತ ವಿಚಾರ ಮಾಡುವವರು ಟಿವಿಯಲ್ಲಿಯೇ ಪುಗಸಟ್ಟೆ ನೋಡಿ 40 ಸಾವಿರ ರು. ಉಳಿಸಿಕೊಳ್ಳಬಹುದು. ಉಳಿಕೆಯೇ ಗಳಿಕೆ.

More from DriveSpark

Article Published On: Friday, October 28, 2011, 18:44 [IST]
English summary
Tickets for the F1 after party concert in Greater Noida on Sunday, Oct 30, which will be performed by Lady Gaga, have been completely sold out, said Arjun Rampal, bollywood actor, businessman.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+