ಲೇಡಿ ಗಾಗಾಗೆ ಡ್ರೈವಿಂಗ್ ಪಾಠ, ಕಲಿಸೋದು ಯಾರು?
ಲೇಡಿ ಗಾಗಾ ಲಾಸ್ ಏಂಜಲಿಸ್‌ನಲ್ಲಿ ಆಡಿ ಕಂಪನಿಯ ನೂತನ ಆರ್8 ಸ್ಪೋರ್ಟ್ಸ್ ಕಾರಿನ ಡ್ರೈವಿಂಗ್ ಕಲಿಯುತ್ತಿದ್ದಾರೆ. ಅರೇ ಈಕೆ ಆರ್8 ಯಾವಾಗ ಖರೀದಿಸಿದ್ದು ಯಾವಾಗ? ಎಂದು ಕೇಳುತ್ತಿದ್ದೀರಾ? ಆಕೆ ಖರೀದಿಸಿಲ್ಲ. ಇತ್ತೀಚೆಗೆ ಹುಟ್ಟುಹಬ್ಬಕ್ಕೆ ಈ ಕಾರನ್ನು ಉಡುಗೊರೆಯಾಗಿ ಪಡೆದಿದ್ದರು.
ಆಕೆ ಕಾರು ಕಲಿಯೋ ವಿಷ್ಯ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಫೋಟೊ ಗ್ರಾಫರ್ ಒಬ್ಬರಿಗೆ ಹೇಗೋ ಈ ಸುದ್ದಿ ಸಿಕ್ತು. "ನೀವು ಡ್ರೈವಿಂಗ್ ಮಾಡುವಾಗ ನಾನು ಫೋಟೊ ಕ್ಲಿಕ್ಕಿಸಲೇ?" ಎಂದು ಆತ ಕೇಳಿದ್ದ. ಆಕೆಗೆ ಬಹುಶಃ ಕೋಪ ಬಂದಿರಬೇಕು.
ತಕ್ಷಣ ಆತನ ಆಸೆಗೆ ತಣ್ಣೀರೆರಚಿದ ಗಾಗಾ, " ಹೌದು ನಾನು ಡ್ರೈವಿಂಗ್ ಕಲಿಯುತ್ತಿದ್ದೇನೆ. ಆದರೆ ನಾನು ಗಾಡಿ ಬಿಡುವಾಗ ಗಾಡಿ ಬಿಡುವಾಗ ನನ್ನ ಹಿಂಬಾಲಿಸಿ, ಅಡ್ಡ ಬರುವುದು ಬೇಡ. ವಾಹನ ಚಾಲನೆ ಮಾಡುವಾಗ ಚಿತ್ರ ತೆಗೆಯಲು ನಾನು ಒಲ್ಲೆ" ಎಂದು ಇಂಗ್ಲಿಷ್‌ನಲ್ಲಿ ಟ್ವಿಟ್ಟಿಸಿದ್ದಾರೆ.
ಜರ್ಮನಿಯ ಕಾರು ಕಂಪನಿ ಆಡಿ ಇತ್ತೀಚೆಗೆ ಆರ್8 ಕಾರನ್ನು ಪರಿಚಯಿಸಿತ್ತು. ಇದಕ್ಕೆ ಭಾರತದಲ್ಲಿ ಸುಮಾರು 1.2 ಕೋಟಿ ರುಪಾಯಿ ದರವಿದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 320 ಕಿ.ಮೀ.
ಯಾರಿದು ಲೇಡಿ ಗಾಗಾ?: ಈಕೆ ಅಮೆರಿಕದ ಪಾಪ್ ಸಿಂಗರ್. ತನ್ನ ಆಲ್ಬಂಗಳಿಂದ ವಿಶ್ವದಲ್ಲಿಯೇ ಜನಪ್ರಿಯ ವ್ಯಕ್ತಿ. ಟೈಮ್ ನಿಯತಕಾಲಿಕೆಯ ಸಮೀಕ್ಷೆಯಲ್ಲಿ ಜಗತ್ತಿನ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. "ದಿ ಫೇಮ್" ಈಕೆಗೆ ಖ್ಯಾತಿ ತಂದುಕೊಟ್ಟ ಮೊದಲ ಆಲ್ಬಾಂ. ಲೇಡಿ ಗಾಗಾ ಅಂದರೆ ತನ್ನ ಹಾಡು, ವಿಶೇಷ ಅಭಿನಯ, ವ್ಯಕ್ತಿತ್ವ, ಸೌಂದರ್ಯಗಳಿಂದ ವೀಕ್ಷಕರ ಹೃದಯದಲ್ಲಿ ಕಿಚ್ಚು ಹೊತ್ತಿಸಿದಾಕೆ. (ಕನ್ನಡ ಡ್ರೈವ್‌ಸ್ಪಾರ್ಕ್)


Click it and Unblock the Notifications









