ಮೈಕ್ರಾ ಜೆರಾಕ್ಸ್: ರೆನಾಲ್ಟ್ ಸಣ್ಣಕಾರು "ಪಲ್ಸ್" ರಸ್ತೆಗೆ

Renault Launches Pulse
ರೆನಾಲ್ಟ್ ನೂತನ ಸಣ್ಣ ಕಾರೊಂದನ್ನು ಭಾನುವಾರ ಕೊನೆಗೊಂಡ ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಅನಾವರಣ ಮಾಡಿತ್ತು. ಅದರ ಹೆಸರು ರೆನಾಲ್ಟ್ ಪಲ್ಸ್. ಕಂಪನಿ ಹೊರತರಲಿರುವ ಈ ಕಾರಿನ ಕುರಿತು ಬಹಳಷ್ಟು ನಿರೀಕ್ಷೆಯನ್ನು ಗ್ರಾಹಕರು ಹೊಂದಿದ್ದರು. ಇದು ದೀಪಾವಳಿ ಸಮಯದಲ್ಲಿ ಒಡೆಯದ ಪಟಾಕಿಗಳಂತೆ "ಠುಸ್" ಆಗಿದೆ.

ರೆನಾಲ್ಟ್ ಕಂಪನಿಯಿಂದ ವಿನೂತನ ಸಣ್ಣ ಕಾರೊಂದನ್ನು ನಿರೀಕ್ಷಿಸುತ್ತಿದ್ದವರಿಗೆ ಸಣ್ಣಮಟ್ಟಿಗಿನ ಷಾಕ್ ಕೂಡ ಇಲ್ಲಿದೆ. ಯಾಕೆಂದರೆ ಈ ಕಾರು ಥೇಟ್ ಮೈಕ್ರಾ ಕಾರಿನಂತೆ ಇದೆ. ಹೀಗಾಗಿ ಸಣ್ಣಪುಟ್ಟ ಬದಲಾವಣೆಯನ್ನು ಹೊರತುಪಡಿಸಿದರೆ ನೂತನ "ಪಲ್ಸ್" ಕಾರು "ಮೈಕ್ರಾ" ಜೆರಾಕ್ಸ್ ನಂತೆ ಇದೆ.

ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಯ ಸಿಇಒ ಕಾರ್ಲೊಸ್ ಘೋಸ್ ಈ ಕಾರನ್ನು ಇಂಡಿಯನ್ ಎಫ್1 ನಲ್ಲಿ ಅನಾವರಣ ಮಾಡಿದ್ದಾರೆ. ಚೆನ್ನೈ ಘಟಕದಲ್ಲಿ ನೂತನ ರೆನಾಲ್ಟ್ ಪಲ್ಸ್ ಕಾರಿನ ಉತ್ಪಾದನೆ ಆರಂಭವಾಗಲಿದೆ.

ಆದರೆ ಹೊಸ ಪಲ್ಸ್ ಕಾರಿನ ದರ ಮತ್ತು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಇದು ನೋಡಲು ಮೈಕ್ರಾದ ಅವಳಿ ಕಾರಿನಂತೆ ಕಾಣುವುದರಿಂದ ದರ ಮೈಕ್ರಾದ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ರೆನಾಲ್ಟ್ ಮತ್ತು ನಿಸ್ಸಾನ್ ದೇಶದಲ್ಲಿ ಹಲವು ವರ್ಷದಿಂದ ಮೈತ್ರಿ ಮಾಡಿಕೊಂಡಿದೆ. ಕಂಪನಿಗಳೆರಡು ತಂತ್ರಜ್ಞಾನ, ಪ್ಲಾಟ್ ಫಾರ್ಮ್ಸ್ ಮತ್ತು ಎಂಜಿನ್ ಇತ್ಯಾದಿಗಳನ್ನು ಹಂಚಿಕೊಳ್ಳುತ್ತಿದೆ. ಆದರೆ ಈ ರೀತಿಯಾಗಿ ಹಳೆಯ ಕಾರೊಂದನ್ನು ಜೆರಾಕ್ಸ್ ಅಥವಾ ಕಾಪಿ ಮಾಡಿದ್ದು ಇದೇ ಮೊದಲು.

ಮೊದಲ ನೋಟಕ್ಕೆ ಈ ಕಾರು ಮೈಕ್ರಾದಂತೆಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದರೆ ಇದು ಮೈಕ್ರಾ ಕಾರೇ ಎಂದು ಖಚಿತವಾಗುತ್ತದೆ. ಒಂದಿಷ್ಟು ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿದರೆ ಮತ್ಯಾವ ಬದಲಾವಣೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.

More from DriveSpark

Article Published On: Monday, October 31, 2011, 12:18 [IST]
English summary
Renault and Nissan's CEO carlos Ghosn chose the first Indian Formula 1 Grand Prix to launch the french carmaker's most ambitious car for India. Renault and Nissan have been long time joint venture partners and they have shared technology, platforms and engines consistently. But this might be the first time a car has been completely copied. But for some minor exterior tweaks, the Pulse will remain a Micra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+