ಮಾರುತಿ ಸುಜುಕಿ ಮಾರಾಟ ಶೇಕಡಾ 52 ಇಳಿಕೆ

Maruti Suzuki October 2011 Sales Collapse 52%
ಮಾರುತಿ ಸುಜುಕಿಗೆ ಕಳೆದ ತಿಂಗಳು ಶುಭವಾಗಿರಲಿಲ್ಲ. ಯಾಕೆಂದರೆ ಕಂಪನಿಯ ಒಟ್ಟಾರೆ ಕಾರು ಮಾರಾಟ ಅಕ್ಟೋಬರ್ ತಿಂಗಳಲ್ಲಿ 55,595 ಯುನಿಟ್ ಗೆ ತಲುಪಿ ಶೇಕಡ 52.2ರಷ್ಟು ಇಳಿಕೆ ಕಂಡಿದೆ. ಮಾನೆಸರ್ ಘಟಕದಲ್ಲಿ ನೌಕರರ ಮುಷ್ಕರ, ಉತ್ಪಾದನೆ ಇಳಿಕೆ ಇತ್ಯಾದಿಗಳು ಕಂಪನಿಯ ಕಾರು ಮಾರಾಟದ ಮೇಲೆ ಹೊಡೆತ ನೀಡಿದೆ.

ಕಂಪನಿಯು ದೀಪಾವಳಿ ಆಫರುಗಳನ್ನು ಪ್ರಕಟಿಸಿದರೂ ಮಾರಾಟ ಹೆಚ್ಚಿಸಿಕೊಳ್ಳಲು ವಿಫಲವಾಗಿದೆ. ಕಂಪನಿಯು ಕಳೆದ ತಿಂಗಳು ಕಾರುಗಳಿಗೆ 9,500 ರು.ನಿಂದ 13,500 ರು.ವರೆಗೆ ದರ ವಿನಾಯಿತಿ ಮಾಡಿತ್ತು. ಆದರೂ ಮಾರಾಟ ಇಳಿಕೆ ಕಂಡಿದೆ. ಆದರೆ ಕಂಪನಿಯು ಪ್ರಸಕ್ತ ವರ್ಷ ಕೂಡ ಗ್ರಾಹಕ ತೃಪ್ತಿ ವಿಷ್ಯದಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ.

ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಉತ್ಪಾದನೆಗೆ ಮಾನೆಸರ್ ಘಟಕದಲ್ಲಿನ ನೌಕರರ ಪ್ರತಿಭಟನೆ ಹೊಡೆತ ನೀಡಿದೆ. ಕಂಪನಿಯ ನೂತನ ಕಾರು ಸ್ವಿಫ್ಟ್ ರಸ್ತೆಗಿಳಿದ ನಂತರ ಸುಮಾರು 1 ಲಕ್ಷ ಕಾರುಗಳನ್ನು ಗ್ರಾಹಕರು ಬುಕ್ ಮಾಡಿಕೊಂಡಿದ್ದರು.

ಕಂಪನಿಯು ಸಕಾಲಕ್ಕೆ ನೌಕರರಿಗೆ ಸ್ವಿಫ್ಟ್ ಪೂರೈಸಲಾಗದೇ ಒದ್ದಾಡುತ್ತಿದೆ. ನೌಕರರ ಪ್ರತಿಭಟನೆಯು ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಜೈರು ಕಾರುಗಳಿಗೂ ಹೊಡೆತ ನೀಡಿದೆ. ಮಾರುತಿ ಸುಜುಕಿ ವಾಹನ ಮಾರಾಟವು ಕಳೆದ ಮೂರು ತಿಂಗಳಿನಿಂದ ಇಳಿಕೆ ಕಾಣುತ್ತಿದೆ.

More from DriveSpark

Article Published On: Wednesday, November 2, 2011, 12:07 [IST]
English summary
Maruti Suzuki has posted a massive 52.2 % drop in October sales after managing to sell just 55,595 units. The sales were severely affected by the strike at Manesar. The carmaker said the strike had resulted in a production loss of 40,000 units.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+