ಯಮಹಾ ಇಂಡಿಯಾ ಅಕ್ಟೋಬರ್ ಮಾರಾಟ ಹೆಚ್ಚಳ

Yamaha India Posts 27% Hike In October Sales
ಜಪಾನಿನ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯ ಭಾರತದ ಅಂಗಸಂಸ್ಥೆ ಯಮಹಾ ಇಂಡಿಯಾ ಅಕ್ಟೋಬರ್ ಮಾರಾಟ ಗಮನಾರ್ಹವಾಗಿ ಏರಿಕೆ ಕಂಡಿದೆ. ಅಂದರೆ ಕಂಪನಿಯ ಕಳೆದ ತಿಂಗಳ ವಾಹನ ಮಾರಾಟ ಶೇಕಡ 26.82ರಷ್ಟು ಏರಿಕೆ ಕಂಡಿದೆ.

ಹಬ್ಬದ ಸೀಸನಿನಲ್ಲಿ ಗ್ರಾಹಕರು ಯಮಹಾ ಬೈಕುಗಳಿಗೆ ಮುಗಿಬಿದ್ದದ್ದೇ ಮಾರಾಟ ಹೆಚ್ಚಳಕ್ಕೆ ಕಾರಣ ಎಂದು ಕಂಪನಿ ತಿಳಿಸಿದೆ. (ಓದಿ: ಯಮಹಾ ಅಗ್ಗದ ಬೈಕ್ )

"ಅಕ್ಟೋಬರ್ 2011ರ ಮಾರಾಟ ಹೆಚ್ಚಳದಲ್ಲಿ ಹಬ್ಬದ ಸೀಸನ್ ಪ್ರಮುಖ ನೆರವು ನೀಡಿದೆ. ಈ ಮಾರಾಟ ಪ್ರಗತಿ ಟ್ರೆಂಡ್ ಮುಂದೆಯೂ ಉಳಿಯುವ ಭರವಸೆ ನಮಗಿದೆ" ಎಂದು ಯಮಹಾ ಪ್ರಕಟಣೆಯಲ್ಲಿ ತಿಳಿಸಿದೆ.

ಯಮಹಾ ಕಂಪನಿಯು ಕಳೆದ ತಿಂಗಳು 47,240 ಯುನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳ 37,251 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಇದು ಅತ್ಯುತ್ತಮ ಪ್ರಗತಿಯಾಗಿದೆ. ಕಂಪನಿಯ ರಫ್ತು ವಹಿವಾಟು ಕೂಡ ಕಳೆದ ತಿಂಗಳು ಶೇಕಡ 65.04ರಷ್ಟು ಹೆಚ್ಚಾಗಿದೆ.

ಯಮಹಾ ಕಂಪನಿಯು ದೇಶದಲ್ಲಿ ಸುಮಾರು 38,229 ಬೈಕ್ ಮಾರಾಟ ಮಾಡಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 31,791 ದ್ವಿಚಕ್ರ ವಾಹನ ಮಾರಾಟ ಮಾಡಿತ್ತು. ಯಮಹಾ ಕಳೆದ ತಿಂಗಳು 9,011 ದ್ವಿಚಕ್ರ ವಾಹನ ರಫ್ತು ಮಾಡಿದೆ.

More from DriveSpark

Article Published On: Wednesday, November 2, 2011, 16:41 [IST]
English summary
Japanese two wheeler manufacturer India Yamaha Motor has posted a 26.82 per cent increase in October sales. The company in its statement has said the festive season around Diwali helped increase sales.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+