ಟಾಟಾ ಮೋಟರ್ಸ್ ಅಕ್ಟೋಬರ್ ಮಾರಾಟ ಹೆಚ್ಚಳ

ಅಕ್ಟೋಬರ್ 2011ರಲ್ಲಿ ಟಾಟಾ ಮೋಟರ್ಸ್ ಒಟ್ಟಾರೆ(ರಫ್ತು ಸೇರಿದಂತೆ)ಮಾರಾಟ 68,009 ಯುನಿಟ್ ಗೆ ತಲುಪಿದೆ. ಅಕ್ಟೋಬರ್ 2010ರ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 5ರಷ್ಟು ಹೆಚ್ಚಳವಾಗಿದೆ. ಕಂಪನಿಯ ದೇಶಿ ವಾಹನ ಮಾರಾಟ 63,838 ಯುನಿಟ್ ಗೆ ತಲುಪಿ ಶೇಕಡ 9ರಷ್ಟು ಏರಿಕೆ ಕಂಡಿದೆ.
ಇದೇ ಸಮಯದಲ್ಲಿ ಕಂಪನಿಯ ಪ್ರಯಾಣಿಕ ವಾಹನ ಮಾರಾಟ 25,749 ಯುನಿಟ್ ಮಾರಾಟವಾಗಿದೆ. ಇದರಲ್ಲಿ ಟಾಟಾ ಮೋಟರ್ಸ್ ಮಾರಾಟ 25,124 ಮತ್ತು 622 ಫಿಯೆಟ್ ಕಾರುಗಳಾಗಿವೆ. ಟಾಟಾ ಮತ್ತು ಫಿಯೆಟ್ ಜಂಟಿ ಉದ್ಯಮವಾಗಿದೆ.
ನ್ಯಾನೊ ಮಾರಾಟ: ಕಳೆದ ತಿಂಗಳು ಕಂಪನಿಯು 3,868 ನ್ಯಾನೊ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ ನ್ಯಾನೊ ಮಾರಾಟಕ್ಕೆ ಹೋಲಿಸಿದರೆ ಇದು ಶೇಕಡ 26ರಷ್ಟು ಹೆಚ್ಚಳವಾಗಿದೆ.
ಕಳೆದ ತಿಂಗಳು ಕಂಪನಿಯು 10,812 ಇಂಡಿಕಾ ಕಾರುಗಳನ್ನು, 6268 ಯುನಿಟ್ ಇಂಡಿಗೊ, 4,127 ಸುಮೊ/ಸಫಾರಿ/ಆರಿಯಾ/ವೆಂಚೂರ್ ಕಾರುಗಳನ್ನು ಮಾರಾಟ ಮಾಡಿದೆ. ಇದೇ ಸಮಯದಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಮಾರಾಟ ಏರಿಕೆ ಮುಂದುವರೆಸಿದೆ.
(ಇಲ್ಲಿ ನೋಡಿ: ಕನ್ನಡ ಪದನೀಡಿ ಸಾರಥಿಯಾಗಿ)


Click it and Unblock the Notifications








