ಹೊಸ ಲಂಬೊರ್ಗಿನಿ ರಸ್ತೆಗೆ, ದರ 3.69 ಕೋಟಿ ರುಪಾಯಿ

Lamborghini Launches Aventador At Rs. 3.69 Crores
ದೇಶದ ರಸ್ತೆಗಳಿಗೆ ನಡುಕ ಆರಂಭವಾಗಿದೆ. ಯಾಕೆಂದರೆ ಇಲ್ಲಿನ ರಸ್ತೆಯಲ್ಲಿ ಫೆರಾರಿ ಮತ್ತು ಲಂಬೊರ್ಗಿನಿ ಕಂಪನಿಗಳು ಜಿದ್ದಿಗೆ ಬಿದ್ದಿವೆ. ಇತ್ತೀಚೆಗೆ ಫೆರಾರಿ ನೂತನ ಎಫ್ಎಫ್ ಕಾರನ್ನು ಪರಿಚಯಿಸಿತ್ತು. ಅದಕ್ಕೆ ಪೈಪೋಟಿ ನೀಡಲು ಎಂಬಂತೆ ಲಂಬೊರ್ಗಿನಿ ಕಂಪನಿಯು ನೂತನ ಅವೆಂಟಡೊರ್ ಕಾರನ್ನು ದೇಶಕ್ಕೆ ಪರಿಚಯಿಸಿದೆ.

ಅವೆಂಟಡೊರ್ ಕಾರು ಅತ್ಯಧಿಕ ಶಕ್ತಿಶಾಲಿ ಕಾರು. ಇದರಲ್ಲಿ ಸವಾರಿ ಮಾಡುವರಿಗೆ ಎಂಟೆದೆ ಇರಬೇಕು. ವೇಗದ ಕಾರು ಪ್ರಿಯರಿಗಂತೂ ಲಂಬೊರ್ಗಿನಿ ಯಾವತ್ತಿಗೂ ಅಚ್ಚುಮೆಚ್ಚು. ಹೃದಯದ ತೊಂದರೆ ಇರುವರು ಇದರ ದರ ಕೇಳಿ ಬೆಚ್ಚಿಬೀಳಬಾರದು. ಇದರ ಆರಂಭಿಕ ಎಕ್ಸ್ ಶೋರೂಂ ದರ 3.69 ಕೋಟಿ ರುಪಾಯಿ.

ಇಷ್ಟು ದರವಿದ್ದರೂ ಈಗಾಗಲೇ ದೇಶದಲ್ಲಿ 11 ಕಾರುಗಳನ್ನು ಖರೀದಿಸಿಯಾಗಿದೆ. ಕಂಪನಿ ಪರಿಚಯಿಸಿದ ಕೂಡಲೇ ಇಷ್ಟು ಜನರು ಮುಗಿಬಿದ್ದದ್ದು ಕಂಪನಿಗಂತೂ ಭಾರಿ ಖುಷಿ ನೀಡಿದೆ.

ನೂತನ ಲಂಬೊರ್ಗಿನಿ ಅವೆಂಟೊಡೊರ್ ಕಾರು ವಿ12 ಎಂಜಿನ್ ಹೊಂದಿದೆ. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 342 ಕಿ.ಮೀ. ವೇಗದಲ್ಲಿ ಸಾಗಬಹುದು. ಇದರಲ್ಲಿ ಕೇವಲ 2.9 ಸೆಕೆಂಡಿನಲ್ಲಿ ಗಂಟೆಗೆ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಈ ಕಾರು 400 ಎಂಎಂ 6 ಕ್ಯಾಲಿಪರ್ ಫ್ರಂಟ್ ಮತ್ತು 380ಎಂಎಂ 4 ಕಾಲಿಪೆರ್ ಡಿಸ್ಕ್ ಬ್ರೇಕ್ ಹೊಂದಿದೆ. ಇದರಿಂದ ಇದಕ್ಕೆ ಸ್ಪೋರ್ಟ್ಸ್ ಕಾರು ಹಿಡಿತ ದೊರಕಿದೆ.

More from DriveSpark

Article Published On: Thursday, November 3, 2011, 15:41 [IST]
English summary
It is a long established fact that Lamborghini and Ferrari always try to beat each other out of the competition. Lamborghini and Ferrari have been rivals for several years and their competition is now on Indian roads. Soon after Ferrari launched its FF Lamborghini has followed its rival by launching the Aventador in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+