59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಮಾಡಿದ Lamborghini

ಇಟಲಿ ಮೂಲದ ಐಷಾರಾಮಿ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಲ್ಯಾಂಬೊರ್ಗಿನಿ (Lamborghini) ತನ್ನ ಕಳೆದ ವರ್ಷದ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಅದರಂತೆ ಕಳೆದ ವರ್ಷ 8,405 ಕಾರುಗಳನ್ನು ಮಾರಾಟ ಮಾಡಿದೆ ಎಂದು ಲ್ಯಾಂಬೊರ್ಗಿನಿ ಕಂಪನಿಯು ಘೋಷಿಸಿದೆ.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ಇದು ಅದರ 59 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಕಾರು ಮಾರಾಟವಾಗಿದೆ. 202ರ ಕಾರು ಮಾರಾಟಕ್ಕೆ ಹೋಲಿಸಿದರೆ ಶೇ.13 ರಷ್ಟು ಬೆಳವಣಿಗೆಯಾಗಿದೆ, ಉರುಸ್ ಎಸ್‍ಯುವಿ ಲ್ಯಾಂಬೊರ್ಗಿನಿಯ ಜಾಗತಿಕವಾಗಿ ಹೆಚ್ಚು ಮಾರಾಟವಾಗುವ ಮಾದರಿಯಾಗಿ ಉಳಿದಿದೆ. ಕಾರು ತಯಾರಕ ಸಂಸ್ಥೆಯು ಕಳೆದ ವರ್ಷ 5,021 ಯುನಿಟ್ ಉರುಸ್‌ಗಳನ್ನು ಮಾರಾಟ ಮಾಡಿದೆ. 2,586 ಯುನಿಟ್‌ಗಳೊಂದಿಗೆ ಹುರಾಕನ್ ಲ್ಯಾಂಬೊರ್ಗಿನಿಯ ಎರಡನೇ ಅತ್ಯುತ್ತಮ ಮಾರಾಟವಾಗಿದೆ ಮತ್ತು ಅವೆಂಟಡಾರ್ ವಿ12 ಮಾದರಿಯ 798 ಯುನಿಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ಭಾರತದಲ್ಲಿ ಲ್ಯಾಂಬೊರ್ಗಿನಿಯು ಕಳೆದ ವರ್ಷ 100 ನೇ ಉರುಸ್ ಎಸ್‍ಯುವಿಯನ್ನು ವಿತರಿಸಿತು, ಭಾರತದಲ್ಲಿ Huracan Evo RWD Spyder, Huracan STO, Urus Pearl Capsule ಮತ್ತು Urus Graphite Capsule ಕಾರುಗಳು ಬಿಡುಗಡೆಯಾದಾಗಿನಿಂದ ಭಾರತದಲ್ಲಿ 300 ಯುನಿಟ್‌ಗಳ ಸಂಚಿತ ಮಾರಾಟದ ಮೈಲಿಗಲ್ಲನ್ನು ಆಚರಿಸಿತು.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ಆಟೊಮೊಬಿಲಿ ಲ್ಯಾಂಬೊರ್ಗಿನಿಯು ಅಧ್ಯಕ್ಷ ಮತ್ತು ಸಿಇಒ ಸ್ಟೀಫನ್ ವಿಂಕೆಲ್‌ಮನ್ ಮಾತನಾಡಿ, ಈ ದಾಖಲೆಯು ನಮಗೆ ನಾಲ್ಕು ಅಂಶಗಳ ದೃಢೀಕರಣವನ್ನು ಒದಗಿಸಿದೆ: ನಮ್ಮ ಕಾರ್ಯತಂತ್ರದ ಯೋಜನೆಯ ಘನತೆ, ನಮ್ಮ ಬ್ರ್ಯಾಂಡ್‌ನ ಅತ್ಯುತ್ತಮ ಅಂತರರಾಷ್ಟ್ರೀಯ ಖ್ಯಾತಿ, ನಮ್ಮ ಜನರ ಸಾಮರ್ಥ್ಯ ಮತ್ತು ಉತ್ಸಾಹ ಮತ್ತು ಅಸಾಧಾರಣ ವೃತ್ತಿಪರತೆ ಮತ್ತು ಕ್ರಿಯಾಶೀಲತೆ. 52 ಮಾರುಕಟ್ಟೆಗಳಲ್ಲಿ ನಮ್ಮ 173 ವಿತರಕರು ಸವಾಲಿನ ಅನಿಶ್ಚಿತ ಸಮಯದಲ್ಲಿ ನಮ್ಮೊಂದಿಗೆ ಹೂಡಿಕೆ ಮಾಡುವುದನ್ನು ಮುಂದುವರೆಸಿದ್ದಾರೆ.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ನಾವು ಆಳವಾದ ರೂಪಾಂತರದ ಅವಧಿಯನ್ನು ಪ್ರಾರಂಭಿಸಲು ಮತ್ತು ಇನ್ನೂ ಹೆಚ್ಚು ಸಮರ್ಥನೀಯ ಭವಿಷ್ಯದತ್ತ ಸಾಗಲು ನಾವು ಹಿಂದೆಂದಿಗಿಂತಲೂ ಬಲಶಾಲಿಯಾಗಿದ್ದೇವೆ. 2022 ರಲ್ಲಿ ನಾವು ಪ್ರಸ್ತುತ ಕಾರ್ಯಕ್ಷಮತೆಯನ್ನು ಕ್ರೋಢೀಕರಿಸಲು ಮತ್ತು 2023 ರಿಂದ ನಮ್ಮ ಭವಿಷ್ಯದ ಹೈಬ್ರಿಡ್ ಶ್ರೇಣಿಯ ಆಗಮನಕ್ಕೆ ಸಿದ್ಧರಾಗಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದರು,

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ಕಳೆದ ವರ್ಷ ಲಂಬೋರ್ಗಿನಿ ಮೂರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಇವುಗಳಲ್ಲಿ ಹುರಾಕನ್ STO, ಹ್ಯುರಾಕನ್ ಸೂಪರ್ ಟ್ರೋಫಿಯೊ EVO ಮತ್ತು GT3 EVO ರೇಸಿಂಗ್ ಕಾರುಗಳಾಗಿವೆ. ಲ್ಯಾಂಬೊರ್ಗಿನಿ ಪ್ರಪಂಚದಾದ್ಯಂತ ನಾಲ್ಕು ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲು ಯೋಜಿಸಿದೆ. ಲ್ಯಾಂಬೊರ್ಗಿನಿಯು 2022 ರಲ್ಲಿ ಹೊಸ ಮಾದರಿಗಳೊಂದಿಗೆ ಇನ್ನೂ ಉತ್ತಮವಾದ ವರ್ಷದೊಂದಿಗೆ ಆವೇಗವನ್ನು ಮುಂದುವರಿಸಲು ಆಶಿಸುತ್ತಿದೆ.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ಇನ್ನು ಲ್ಯಾಂಬೊರ್ಗಿನಿ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಇಟಲಿ ಮೂಲದ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು 2027 ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಲ್ಯಾಂಬೊರ್ಗಿನಿ ತನ್ನ ಸೂಪರ್‌ಕಾರ್ ವಿಭಾಗದಲ್ಲಿ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸುವುದಾಗಿ ಈ ಹಿಂದೆಯೇ ಬಹಿರಂಗಪಡಿಸಿತ್ತು.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ಕಂಪನಿಯು ತನ್ನ ವಾಹನಗಳನ್ನು ಹಂತ ಹಂತವಾಗಿ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಾಗಿ ಪರಿವರ್ತಿಸಲಿದೆ ಎಂದು ಹೇಳಲಾಗಿದೆ. ಲ್ಯಾಂಬೊರ್ಗಿನಿ ಕಂಪನಿ ಸಿಇಒ ಸ್ಟೀಫನ್ ವಿಂಕೆಲ್‌ಮನ್ ರವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಮೊದಲ ಎಲೆಕ್ಟ್ರಿಕ್ ಲ್ಯಾಂಬೊರ್ಗಿನಿ ಕಾರ್ ಅನ್ನು 2027 ಅಥವಾ 2028 ರಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ ಅದಕ್ಕೂ ಮುನ್ನ ಪ್ಲಗ್ ಇನ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ,

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ಆದರೆ ಲ್ಯಾಂಬೊರ್ಗಿನಿಯು ಆಂತರಿಕ ದಹನಕಾರಿ ಎಂಜಿನ್ (ಐಸಿಇ) ಹೊಂದಿರುವ ಕಾರುಗಳ ಉತ್ಪಾದನೆಯನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದರು. ಕೃತಕವಾಗಿ ತಯಾರಾದ ಇಂಧನದಲ್ಲಿ ಚಲಿಸಲು ಸಾಧ್ಯವಾಗುವಂತಹ ವಾಹನಗಳನ್ನು ತಯಾರಿಸಲು ಕಂಪನಿಯು ಯೋಜನೆಯನ್ನು ಸಿದ್ಧಪಡಿಸಿದೆ. ಕೃತಕ ಇಂಧನದ ಬಳಕೆಯಿಂದಾಗಿ ಆ ವಾಹನಗಳು ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುತ್ತವೆ.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ಲ್ಯಾಂಬೊರ್ಗಿನಿಯ ಈ ಕಾರುಗಳು ಕಾರ್ಬನ್ ನ್ಯೂಟ್ರಲ್ ಆಗಿದ್ದು, ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ. ಈ ವರ್ಷದ ಆರಂಭದಲ್ಲಿ ಲ್ಯಾಂಬೊರ್ಗಿನಿ ಕಂಪನಿಯು 1.5 ಶತಕೋಟಿ ಡಾಲರ್ ಹೂಡಿಕೆ ಮೂಲಕ ತನ್ನ ವಿದ್ಯುದೀಕರಣದ ಗುರಿಗಳನ್ನು ಬಹಿರಂಗಪಡಿಸಿತು. ಕಂಪನಿಯು ಮುಂದಿನ 10 ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

ವರದಿಗಳ ಪ್ರಕಾರ, ಲ್ಯಾಂಬೊರ್ಗಿನಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಜಿಟಿ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರು 4 ಸೀಟರ್ ಆಗಿರಲಿದೆ. ಈ ಮಾದರಿಯನ್ನು ಅಭಿವೃದ್ಧಿಪಡಿಸಲು ಪೋರ್ಷೆ ಕಂಪನಿಯು ಲ್ಯಾಂಬೊರ್ಗಿನಿ ಕಂಪನಿಗೆ ನೆರವಾಗಲಿದೆ. ಇನ್ನು ಲ್ಯಾಂಬೊರ್ಗಿನಿ ಕಂಪನಿಯು ತನ್ನ ಸೂಪರ್ ಎಸ್‌ಯುವಿಯಾದ ಉರುಸ್‌ನ 10,000 ನೇ ಯುನಿಟ್ ಉತ್ಪಾದನೆಯನ್ನು ಪೂರ್ಣಗೊಳಿಸಿದೆ. ಈ ಯುನಿಟ್ ಅನ್ನು ರಷ್ಯಾಕ್ಕಾಗಿ ತಯಾರಿಸಲಾಗುತ್ತದೆ. ಕಂಪನಿಯು 2018 ರಲ್ಲಿ ಉರುಸ್ ಎಸ್‌ಯುವಿಯ ಉತ್ಪಾದನೆಯನ್ನು ಆರಂಭಿಸಿತು.

59 ವರ್ಷಗಳ ಇತಿಹಾಸದಲ್ಲಿ 2021ರಲ್ಲೇ ಅತ್ಯಧಿಕ ಕಾರು ಮಾರಾಟ ಕಂಡ Lamborghini

2020ರ ಜೂನ್ ತಿಂಗಳಿನಲ್ಲಿ ಕಂಪನಿಯು ಉರುಸ್‌ಗಾಗಿ ಹೊಸ ಪರ್ಲ್ ಕ್ಯಾಪ್ಸುಲ್ ಹಾಗೂ ಕಾರ್ಬನ್ ಫೈಬರ್ ಬಣ್ಣದ ಆಯ್ಕೆಯನ್ನು ಪರಿಚಯಿಸಿತು. ಉರುಸ್, ಲ್ಯಾಂಬೊರ್ಗಿನಿ ಕಂಪನಿಯ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಹಲವಾರು ಫೀಚರ್ ಗಳನ್ನು ಹೊಂದಿದ್ದು, ತನ್ನ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಲ್ಯಾಂಬೊರ್ಗಿನಿ ಉರುಸ್‌ ಉತ್ತಮವಾಗಿ ಮಾರಾಟವಾಗಿವೆ. ಭಾರತದ ಆಟೋ ಮೊಬೈಲ್ ಉದ್ಯಮದಲ್ಲಿ ನಿಧಾನಗತಿಯ ಹೊರತಾಗಿಯೂ, ಈ ಕಾರು ಉತ್ತಮ ಮಾರಾಟವನ್ನು ದಾಖಲಿಸಿದೆ.

Most Read Articles

Kannada
English summary
Lamborghini sold 8405 units in 2021 worldwide record sales details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X