ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಇಟಲಿ ಮೂಲದ ಐಷಾರಾಮಿ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಲ್ಯಾಂಬೊರ್ಗಿನಿ (Lamborghini) ಭಾರತದಲ್ಲಿ ಇತ್ತೀಚೆಗೆ ತನ್ನ 400ನೇ ಸೂಪರ್ ಕಾರನ್ನು ವಿತರಿಸಿದೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಬೊರ್ಗಿನಿ ಕಂಪನಿಯ ಪಯಣದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಭಾರತದಲ್ಲಿ ಇಟಾಲಿಯನ್ ಸೂಪರ್‌ಕಾರ್ ತಯಾರಕರ ಪ್ರಯಾಣದ ಕುರಿತು ಹೇಳುವುದಾದರೆ, ಲ್ಯಾಂಬೊರ್ಗಿನಿ 2007 ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭಾರತೀಯ ಸೂಪರ್‌ಕಾರ್ ಮಾರುಕಟ್ಟೆಯು ಫೆರಾರಿ, ಬೆಂಟ್ಲಿ, ಆಸ್ಟನ್ ಮಾರ್ಟಿನ್, ಪೋರ್ಷೆ, ನಿಸ್ಸಾನ್ ಮುಂತಾದ ಬ್ರಾಂಡ್‌ಗಳೊಂದಿಗೆ ಬಹಳ ಸ್ಪರ್ಧಾತ್ಮಕವಾಗಿದೆ. ಈ ಎಲ್ಲಾ ಜನಪ್ರಿಯ ಕಂಪನಿಗಳು ದೇಶದಲ್ಲಿ ಐಷಾರಾಮಿ ಎಂಬ ಒಂದು ಸಣ್ಣ ಮಾರುಕಟ್ಟೆ ಜಾಗಕ್ಕಾಗಿ ಸ್ಪರ್ಧಿಸುತ್ತಿದೆ,

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಹೊಸ ಮೈಲಿಗಲ್ಲು ಸಾಧಿಸಿದ ಹಿನ್ನಲೆಯಲ್ಲಿ ಲ್ಯಾಂಬೊರ್ಗಿನಿ ಇಂಡಿಯಾ ತನ್ನ ಮೂರನೇ ಆವೃತ್ತಿಯ ಲ್ಯಾಂಬೊರ್ಗಿನಿ ಡೇ ಅನ್ನು ಆಯೋಜಿಸಿದೆ. ತಮ್ಮ ಗ್ರಾಹಕರು ಮತ್ತು ಅವರ ಸೂಪರ್‌ಕಾರ್‌ಗಳನ್ನು ಗೋವಾಕ್ಕೆ ಕರೆತರುತ್ತಿದೆ. ಲ್ಯಾಂಬೊರ್ಗಿನಿ ದಿನದ ಮೂರನೇ ಆವೃತ್ತಿಯನ್ನು 40 ಲ್ಯಾಂಬೊರ್ಗಿನಿ ಗ್ರಾಹಕರೊಂದಿಗೆ ಅತಿರಂಜಿತ ಜೀವನಶೈಲಿಯಲ್ಲಿ ಸುಮಾರು 3 ದಿನಗಳ ಕಾಲ ಆಚರಿಸಲಾಯಿತು.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಈವೆಂಟ್‌ನಲ್ಲಿ ಲ್ಯಾಂಬೊರ್ಗಿನಿ ಸೂಪರ್‌ಕಾರ್‌ಗಳ ಆಯಾ ಮಾಲೀಕರು ಭಾಗವಹಿಸಿದ್ದರು ಮಾತ್ರವಲ್ಲದೆ ಅವರ ಸಂಗಾತಿಗಳು ಮತ್ತು ಮಕ್ಕಳು ಸಹ ಭಾಗವಹಿಸಿದ್ದರು. ಲಂಬೋರ್ಗಿನಿ ಡೇ ಬಗ್ಗೆ ಹೇಳುವುದಾದರೆ, ದಕ್ಷಿಣ ಗೋವಾದ ಐಷಾರಾಮಿ ರೆಸಾರ್ಟ್‌ನಲ್ಲಿ ಬ್ಯಾಂಡ್ ಮತ್ತು ಡಿಜೆ ಒಳಗೊಂಡಿರುವ ಸನ್‌ಡೌನ್ ಪಾರ್ಟಿಯೊಂದಿಗೆ ಈವೆಂಟ್ ಅನ್ನು ಆಯೋಜಿಸಲಾಗಿದೆ ಅದು ಮರುದಿನದ ಮುಂಜಾನೆವರೆಗೂ ನಡೆದಿದೆ.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಮಾಲೀಕರಿಗೆ ಉತ್ತಮ ವಿಶ್ರಾಂತಿಯ ನಂತರ, ಲ್ಯಾಂಬೊರ್ಗಿನಿ ನೇ ದಿನದ ಆಚರಣೆಯು ರೆಸಾರ್ಟ್ ಡ್ರೈವ್‌ವೇನಲ್ಲಿ 40 ಲ್ಯಾಂಬೊರ್ಗಿನಿಗಳನ್ನು ಸಾಲಾಗಿ ನಿಲ್ಲಿಸುವುದರೊಂದಿಗೆ ಪ್ರಾರಂಭವಾಯಿತು. 40 ಲ್ಯಾಂಬೊರ್ಗಿನಿ ಸಾಲಾಗಿ ನಿಲ್ಲಿಸುವುದರೊಂದಿಗೆ ಪ್ರಾರಂಭವಾಯಿತು. 40 ಲಂಬೋರ್ಗಿನಿಗಳಲ್ಲಿ, ಒಂದೇ ಒಂದು ಲಂಬೋರ್ಘಿನಿ ಅವೆಂಟಡೋರ್ ಇತ್ತು, ಉಳಿದ ಸೂಪರ್‌ಕಾರ್‌ಗಳು ಹುರಾಕನ್ ಅಥವಾ ಉರುಸ್ ಆಗಿದ್ದವು.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಡೇ ಭಾಗವಾಗಿ, ಲ್ಯಾಂಬೊರ್ಗಿನಿ ತಂಡವು ಯಾವುದೇ ಸೂಪರ್‌ಕಾರ್‌ಗಳು ತಮ್ಮ ಕೆಳಭಾಗವನ್ನು ಸ್ಕ್ರ್ಯಾಪ್ ಮಾಡದಂತೆ ಖಾತ್ರಿಪಡಿಸಿದ ವಿಶೇಷ ಮಾರ್ಗವನ್ನು ಆಯ್ಕೆ ಮಾಡಿದೆ. ಈ ಮಾರ್ಗವು ಎಲ್ಲಾ ಲಂಬೋರ್ಗಿನಿ ಗ್ರಾಹಕರು ಗೋವಾ ನೀಡುವ ಸುಂದರ ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂದು ಖಚಿತಪಡಿಸಿತು. ಈವೆಂಟ್‌ನ ನಂತರ, ಲ್ಯಾಂಬೊರ್ಗಿನಿ ಮಾಲೀಕರಿಗೆ ಕೆಲವು ಅತ್ಯುತ್ತಮ ಭೋಜನವನ್ನು ನೀಡಲಾಯಿತು.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಈ ಲ್ಯಾಂಬೊರ್ಗಿನಿ ಕ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಇಟಲಿ ಮೂಲದ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು 2027 ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಲ್ಯಾಂಬೊರ್ಗಿನಿ ತನ್ನ ಸೂಪರ್‌ಕಾರ್ ವಿಭಾಗದಲ್ಲಿ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸುವುದಾಗಿ ಈ ಹಿಂದೆಯೇ ಬಹಿರಂಗಪಡಿಸಿತ್ತು.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಇನ್ನು ಲ್ಯಾಂಬೊರ್ಗಿನಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಇಟಲಿ ಮೂಲದ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು 2027 ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಲ್ಯಾಂಬೊರ್ಗಿನಿ ತನ್ನ ಸೂಪರ್‌ಕಾರ್ ವಿಭಾಗದಲ್ಲಿ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸುವುದಾಗಿ ಈ ಹಿಂದೆಯೇ ಬಹಿರಂಗಪಡಿಸಿತ್ತು.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಕಂಪನಿಯು ತನ್ನ ವಾಹನಗಳನ್ನು ಹಂತ ಹಂತವಾಗಿ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಾಗಿ ಪರಿವರ್ತಿಸಲಿದೆ ಎಂದು ಹೇಳಲಾಗಿದೆ. ಲ್ಯಾಂಬೊರ್ಗಿನಿ ಕಂಪನಿ ಸಿಇಒ ಸ್ಟೀಫನ್ ವಿಂಕೆಲ್‌ಮನ್ ರವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಮೊದಲ ಎಲೆಕ್ಟ್ರಿಕ್ ಲ್ಯಾಂಬೊರ್ಗಿನಿ ಕಾರ್ ಅನ್ನು 2027 ಅಥವಾ 2028 ರಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ ಅದಕ್ಕೂ ಮುನ್ನ ಪ್ಲಗ್ ಇನ್ ಹೈಬ್ರಿಡ್ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಆದರೆ ಲ್ಯಾಂಬೊರ್ಗಿನಿಯು ಆಂತರಿಕ ದಹನಕಾರಿ ಎಂಜಿನ್ (ಐಸಿಇ) ಹೊಂದಿರುವ ಕಾರುಗಳ ಉತ್ಪಾದನೆಯನ್ನು ಮುಂದುವರಿಸುತ್ತದೆ ಎಂದು ಅವರು ಹೇಳಿದ್ದರು. ಕೃತಕವಾಗಿ ತಯಾರಾದ ಇಂಧನದಲ್ಲಿ ಚಲಿಸಲು ಸಾಧ್ಯವಾಗುವಂತಹ ವಾಹನಗಳನ್ನು ತಯಾರಿಸಲು ಕಂಪನಿಯು ಯೋಜನೆಯನ್ನು ಸಿದ್ಧಪಡಿಸಿದೆ. ಕೃತಕ ಇಂಧನದ ಬಳಕೆಯಿಂದಾಗಿ ಆ ವಾಹನಗಳು ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುತ್ತವೆ ಎಂಬ ಗಮರ್ನಾಹ ಅಂಶವಾಗಿದೆ,

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಈ ಲ್ಯಾಂಬೊರ್ಗಿನಿಯ ಕಂಪನಿಯು ಈ ಕಾರುಗಳು ಕಾರ್ಬನ್ ನ್ಯೂಟ್ರಲ್ ಆಗಿದ್ದು, ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ. ಈ ವರ್ಷದ ಆರಂಭದಲ್ಲಿ ಲ್ಯಾಂಬೊರ್ಗಿನಿ ಕಂಪನಿಯು 1.5 ಶತಕೋಟಿ ಡಾಲರ್ ಹೂಡಿಕೆ ಮೂಲಕ ತನ್ನ ವಿದ್ಯುದೀಕರಣದ ಗುರಿಗಳನ್ನು ಬಹಿರಂಗಪಡಿಸಿತು. ಕಂಪನಿಯು ಮುಂದಿನ 10 ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಕೆಲವು ವರದಿಗಳ ಪ್ರಕಾರ, ಲ್ಯಾಂಬೊರ್ಗಿನಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಜಿಟಿ ಮಾದರಿಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರು 4 ಸೀಟರ್ ಆಗಿರಲಿದೆ. ಈ ಮಾದರಿಯನ್ನು ಅಭಿವೃದ್ಧಿಪಡಿಸಲು ಪೋರ್ಷೆ ಕಂಪನಿಯು ಲ್ಯಾಂಬೊರ್ಗಿನಿ ಕಂಪನಿಗೆ ನೆರವಾಗಲಿದೆ. ಇನ್ನು ಲ್ಯಾಂಬೊರ್ಗಿನಿ ಕಂಪನಿಯು ತನ್ನ ಸೂಪರ್ ಎಸ್‌ಯುವಿಯಾದ ಉರುಸ್‌ನ 10,000 ನೇ ಯುನಿಟ್ ಉತ್ಪಾದನೆಯನ್ನು ಪೂರ್ಣಗೊಳಿಸಿದೆ. ಈ ಯುನಿಟ್ ಅನ್ನು ರಷ್ಯಾಕ್ಕಾಗಿ ತಯಾರಿಸಲಾಗುತ್ತದೆ. ಕಂಪನಿಯು 2018 ರಲ್ಲಿ ಉರುಸ್ ಎಸ್‌ಯುವಿಯ ಉತ್ಪಾದನೆಯನ್ನು ಆರಂಭಿಸಿತು.

ಕಾರು ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಉರಸ್‌ನ ಬಿಡುಗಡೆಯು ಇಟಾಲಿಯನ್ ಸೂಪರ್‌ಕಾರ್ ತಯಾರಕರಿಗೆ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಗೇಮ್ ಚೇಂಜರ್ ಆಗಿದೆ. ಲ್ಯಾಂಬೊರ್ಗಿನಿ ಉರುಸ್ ತ್ವರಿತವಾಗಿ ಜಗತ್ತಿನಾದ್ಯಂತ ಅನೇಕ ಪ್ರಸಿದ್ಧ ಗ್ಯಾರೇಜ್‌ಗಳ ಭಾಗವಾಯಿತು. ಇಷ್ಟು ಕಡಿಮೆ ಅವಧಿಯಲ್ಲಿ 400 ಯೂನಿಟ್ ಮೈಲಿಗಲ್ಲನ್ನು ಸಾಧಿಸಿದ್ದಕ್ಕಾಗಿ ಹುರಾಕನ್ ಜೊತೆಗೆ ಉರುಸ್‌ಗೆ ಖ್ಯಾತಿ ಸಲ್ಲುತ್ತದೆ.

Most Read Articles

Kannada
English summary
Lamborghini india sales crosses 400 units third edition lamborghini day celebrated details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X