ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಮಾರುಕಟ್ಟೆಯಲ್ಲಿ ಹೊಸ ಎರಡು ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಲ್ಯಾಂಬೊರ್ಗಿನಿ ಕಾರುಗಳು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಕಂಪನಿಯ ಸಿಇಒ ಸ್ಟೀಫನ್ ವಿಂಕೆಲ್ಮನ್ ಸಂದರ್ಶನವೊಂದರಲ್ಲಿ ಸುಳಿವು ನೀಡಿದಂತೆ, 2022ರಲ್ಲಿ ಇಟಾಲಿಯನ್ ಸೂಪರ್ ಕಾರ್ ಬ್ರ್ಯಾಂಡ್ ಲ್ಯಾಂಬೊರ್ಗಿನಿ ಭಾರತದಲ್ಲಿ ಎರಡು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಈ ಎರಡು ಕಾರುಗಳು ಹುರಾಕನ್ ಮತ್ತು ಉರುಸ್ ಅನ್ನು ಆಧರಿಸಿವೆ. ಲ್ಯಾಂಬೊರ್ಗಿನಿ ಕಂಪನಿಯು ಈ ವರ್ಷದ ಕೊನೆಯಲ್ಲಿ ಮಾತ್ರ ಹೊಸ ಮಾದರಿಗಳನ್ನು ಅನಾವರಣಗೊಳಿಸಲು ಯೋಜಿಸಿದೆ.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿಯ ಉರುಸ್ ಎಸ್‌ಯುವಿಯ ಮತ್ತೊಂದು ರೂಪಾಂತವು ಬಿಡುಗಡೆಯಾಗಲಿದೆ. ಇದರೊಂದಿಗೆ ಈಗ ಇರುವ ಮಾದರಿಗಳು ಹೊಸ ಆವೃತ್ತಿಗಳನ್ನು ಪಡೆಯಬಹುದು. ಇನ್ನು ಹುರಾಕನ್ ಮತ್ತು ಉರುಸ್ ಮಾದರಿಗಳ ನವೀಕರಣವಾಗವ ಸಾಧ್ಯತೆಗಳು ಇದೆ.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಹೆಚ್ಚುವರಿ ಎಲೆಕ್ಟ್ರಿಕ್ ಮಾದರಿಯನ್ನು ಉತ್ಪಾದಿಸಲು ಈ ಕಾರುಗಳಿಗೆ ಪ್ಲಗ್-ಇನ್ ಹೈಬ್ರಿಡ್ ವ್ಯವಸ್ಥೆಯನ್ನು ಪರಿಚಯಿಸುವುದನ್ನು ನಾವು ನೋಡಬಹುದು. ಉರುಸ್ ಈಗಾಗಲೇ ಕೆಲವೇ ದಿನಗಳ ಹಿಂದೆ 15,000 ಯುನಿಟ್ ಮಾರಾಟದ ಮೈಲಿಗಲ್ಲನ್ನು ತಲುಪಿದೆ.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಹೊಸ ತಲೆಮಾರಿನ ಹುರಾಕನ್ ಕಾರಿನಲ್ಲಿ 5.2-ಲೀಟರ್ ವಿ10 ಎಂಜಿನ್ ಅನ್ನು ಉಳಿಸಿಕೊಳ್ಳಬಹುದು. ಈ ಎಂಜಿನ್ ಅನ್ನು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಮತ್ತೊಂದು ಬ್ರ್ಯಾಂಡ್ ಆಡಿ ಆರ್8 ನೊಂದಿಗೆ ಹಂಚಿಕೊಳ್ಳಲಾಗಿದೆ. ಲ್ಯಾಂಬೊರ್ಗಿನಿ ಬಾಸ್ ಹೈಬ್ರಿಡ್ ವಿ6 ಎಂಜಿನ್ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಸಂದರ್ಶನದಲ್ಲಿ ವಿಂಕೆಲ್ಮನ್ ಅವರು ಬ್ರ್ಯಾಂಡ್‌ನಿಂದ ಮುಂದಿನ ಸಂಪೂರ್ಣ ಹೊಸ ಮಾದರಿಯು ಹೈಬ್ರಿಡ್ ನೆರವಿನೊಂದಿಗೆ ವಿ12 ಎಂಜಿನ್ ಪಡೆಯಲಿದೆ ಎಂದು ಹೇಳಿದ್ದಾರೆ. ಈ ತಂತ್ರಜ್ಞಾನವು 819 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಇದು ಲ್ಯಾಂಬೊರ್ಗಿನಿ ಸಿಯಾನ್ ಎಫ್‌ಕೆಪಿ 37 ಅನ್ನು ಹೋಲುತ್ತದೆ. ಇದು ಕಾರ್ ಬ್ರ್ಯಾಂಡ್‌ನ ಮೊದಲ ಎಲೆಕ್ಟ್ರಿಕ್ ಉತ್ಪಾದನಾ ಮಾದರಿಯಾಗಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಅವೆಂಟಡಾರ್ ಉತ್ತರಾಧಿಕಾರಿ 2023ರಲ್ಲಿ ಪಿಹೆಚ್‍ಪಿವಿ ಸೆಟಪ್ ನೊಂದಿಗೆ ಹೊಸ ಮಾರಿಯು ಬರಲಿದೆ. ಇದು ಪ್ಲಗ್-ಇನ್ ಹೈಬ್ರಿಡ್ ಸಿಸ್ಟಂನೊಂದಿಗೆ ಹೊಸ ವಿ12 ಎಂಜಿನ್ ಅನ್ನು ಪಡೆಯುವ ಸಾಧ್ಯತೆಗಳಿದೆ.

ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಕಂಪನಿಯು ಫುಲ್ ಎಲೆಕ್ಟ್ರಿಕ್ ಬದಲೂ ಎಲೆಕ್ಟ್ರಿಫೈಯಡ್ ಪವರ್‌ಟ್ರೇನ್‌ಗಳತ್ತ ಗಮನ ಹರಿಸಿದ್ದಾರೆ. ಪ್ರಸ್ತುತ ಎಂಜಿನ್‌ಗಳು ಮತ್ತು ಭವಿಷ್ಯದ ಬ್ಯಾಟರಿ-ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳ ನಡುವಿನ ಅಂತರವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿವಾರಿಸಲು ಎಲೆಕ್ಟ್ರಿಕ್ ಪವರ್‌ಟ್ರೇನ್ ತಂತ್ರಜ್ಞಾನವು ಸಹಾಯ ಮಾಡುತ್ತದೆ.

Most Read Articles

Kannada
English summary
Lamborghini to bring two new models in 2022. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X