ನವೆಂಬರ್ 4ರಂದು ಲ್ಯಾಂಡ್ ರೋವರ್ ಇವೊಕ್ ರಸ್ತೆಗೆ

Land Rover Set To Launch Evoque On Nov 4
ಕುಟುಂಬದ ಜೊತೆಯಾಗಿ ಸದಾ ಸುತ್ತಲು ಲ್ಯಾಂಡ್ ರೋವರ್ ಕಾರೊಂದು ಖರೀದಿಸಬೇಕು ಅನ್ನುವರಿಗೆ ಇದು ಸಿಹಿ ಸುದ್ದಿ. ನಾಳೆ ಅಂದರೆ ನವೆಂಬರ್ 4ರಂದು ಲ್ಯಾಂಡ್ ರೋವರ್ ಕುಟುಂಬದ ಇವೊಕ್ ಸ್ಪೋರ್ಟ್ಸ್ ಯುಟಿಲಿಟಿ ವಾಹನ ದೇಶದಲ್ಲಿ ಅನಾವರಣಗೊಳ್ಳಲಿದೆ ಎಂದು ಕೆಲವು ಬ್ರೇಕಿಂಗ್ ನ್ಯೂಸ್ ವರದಿಗಳು ಹೇಳಿವೆ.

ಕಂಪನಿಯು ತನ್ನ ರೇಂಜ್ ರೋವರ್ ಇವೊಕ್ ಗಾಗಿ ತನ್ನ ಮೊದಲ ಶೋರೂಂ ಅಥವಾ ಇವೊಕ್ ಕಾರಿನ ಅಂಗಡಿಯನ್ನು ಮುಂಬೈನಲ್ಲಿ ತೆರೆಯಲಿದೆ. ಹೀಗಾಗಿ ದೇಶದ ಗ್ರಾಹಕರು ಇನ್ನು ಮುಂದೆ ಇವೊಕ್ ಕಾರುಗಳನ್ನು ಸುಂಕ ಕಟ್ಟಿ ಆಮದು ಮಾಡಿಕೊಳ್ಳುವ ಸಂಕಟವಿಲ್ಲ.

ಉಳಿದ ದೊಡ್ಡಗಾತ್ರದ ಸ್ಪೋರ್ಟ್ಸ್ ಕಾರುಗಳಿಗೆ ಹೋಲಿಸಿದರೆ ಇದು ಪುಟ್ಟ ಅಚ್ಚರಿ. ಯಾಕೆಂದರೆ ಇದು ಸಣ್ಣ ಮತ್ತು ಹಗುರ ಎಸ್ ಯುವಿ. ಈ ಕಾರಿನ ಇಂಟಿರಿಯರ್ ಆರಾಮದಾಯಕ. ಅತ್ಯುತ್ತಮ ದರ್ಜೆಯ ಚರ್ಮದ ಹೊದಿಕೆ ಮತ್ತು ಕಾರ್ಬನ್ ಫೈಬರ್ ಇದರ ಅಂತರಂಗವನ್ನು ರಂಗಾಗಿಸಿದೆ.

ಇದು ಐದು ಸೀಟಿನ ಕಾರು. ನಗರದ ರಸ್ತೆಯಲ್ಲಿ ಮಾತ್ರವಲ್ಲದೇ ರಸ್ತೆಯಂತೆ ಕಾಣುವ ರಸ್ತೆಯಿಲ್ಲದ ಕೆಲವು ಆಫ್ ರೋಡಿನಲ್ಲೂ ಇದರಲ್ಲಿ ಪ್ರಯಾಣಿಸಬಹುದು. ಗುಡ್ಡಗಾಡಿನ ಹಾದಿಯಲ್ಲಿ ಸವಾರಿ ಮಾಡುವಂತಹ ಸಮರ್ಥ ಲ್ಯಾಂಡ್ ರೋವರ್ ಆಫ್ ರೋಡ್ ಕಾರು ಬೇಕೆಂದರೆ ಡಿಸ್ಕವರಿ 4 ಅಥವಾ ಫ್ರೀಲಾಂಡರ್ 2 ಕಾರು ಖರೀದಿಸಬಹುದು.

ಹಾಗಂತ ಇದು ಆಫ್ ರೋಡ್ ಅಥವಾ ರೋಡಿಲ್ಲದ ರೋಡಿನಲ್ಲಿ ಪ್ರಯಾಣಿಸಲು ಸೂಕ್ತವಾಗಿಲ್ಲ ಅಂತಲ್ಲ. ಇವೊಕ್ ಗಿಂತ ಕಡಿಮೆ ದರಕ್ಕೆ ಫ್ರಿಲಾಂಡರ್, ಡಿಸ್ಕವರಿ ಕಾರುಗಳು ದೊರಕುತ್ತಿದೆ. ನೂತನ ಇವೊಕ್ ದರ ಫ್ರೀಲಾಂಡರ್ ಗಿಂತ ಕೊಂಚ ದುಬಾರಿ ಎಂದು ವರದಿಗಳು ಹೇಳಿವೆ. ದರವೆಷ್ಟು ಎಂಬುದನ್ನು ಕಂಪನಿ ಇನ್ನೂ ಖಚಿತಪಡಿಸಿಲ್ಲ.

More from DriveSpark

Article Published On: Thursday, November 3, 2011, 11:32 [IST]
English summary
The Range Rover Evoque is a car that can be credited with giving Land Rover a suave image. This fantastic looking SUV could be launched in India on November 4th. According to reports, Jaguar Land Rover wants to launch this car as soon as possible considering the festive season is coming to India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+