ಶಾರೂಖ್ ಖಾನ್ ಐಷಾರಾಮಿ ಕಾರು ಪ್ರೇಮ

ಇದಕ್ಕೂ ಮೊದಲು ಶಾರೂಖ್ ಖಾನ್ ಬಿಳಿ ಬಣ್ಣದ ಮರ್ಸಿಡಿಸ್ ಬೆಂಝ್ ಎಸ್350 ಕಾರನ್ನು ತನ್ನ ಸಿನಿಮಾ ನಿರ್ದೇಶಕ ಮತ್ತು ಸ್ನೇಹಿತ ಫಾರಾಹ ಖಾನ್ ಗೆ ಉಡುಗೊರೆ ನೀಡಿದ್ದ. ಓಂ ಶಾಂತಿ ಓಂ ಸಿನಿಮಾದ ಯಶಸ್ವಿಗಾಗಿ ಈ ಉಡುಗೊರೆ ನೀಡಲಾಗಿತ್ತು.
ಶಾರೂಖ್ ಖಾನ್ ಕಳೆದ ಎರಡು ದಶಕದಿಂದ ಹ್ಯುಂಡೈ ಬ್ರಾಂಡ್ ರಾಯಭಾರಿ. ಹಾಗಂತ ಆತ ಕೇವಲ ಹ್ಯುಂಡೈ ಕಾರನ್ನು ಮಾತ್ರ ಇಷ್ಟಪಡುವನಲ್ಲ. ಇತ್ತೀಚೆಗೆ ತೆರೆಕಂಡ ರಾ.ಒನ್ ಸಿನಿಮಾದಲ್ಲಿ ಶಾರೂಖ್ ಖಾನ್ ಹಲವು ಕಾರುಗಳ ಮೂಲಕ ಮಿಂಚಿದ್ದನ್ನು ನೆನಪಿಸಿಕೊಳ್ಳಬಹುದು.
ಶಾರೂಖ್ ಗ್ಯಾರೇಜಿನಲ್ಲಿ ಬಿಎಂಡಬ್ಲ್ಯು ಸೀರಿಸ್ ಕಾರುಗಳಿವೆ. ಅದರಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಕಾರಿನ ದರ ಸುಮಾರು 1.25 ಕೋಟಿ ರು. ಇದೆ. ಜೊತೆಗೆ 85 ಲಕ್ಷ ರುಪಾಯಿಯ ಬಿಎಂಡಬ್ಲ್ಯು 6 ಸೀರಿಸ್ ಕಾರು ಇದೆ. ಆಡಿ ಎ6 ಕಾರು ಕೂಡ ಆತನಲ್ಲಿದೆ.


Click it and Unblock the Notifications








