ದರ ಗೆಸ್ ಮಾಡಿ ಮಹೀಂದ್ರ ಕಾರು ಗೆದ್ದ ಅಮಿತ್

ಕಂಪನಿಯು ಮಹೀಂದ್ರ ಎಕ್ಸ್ ಯುವಿ500 ಕಾರಿಗಾಗಿ ವಿಶೇಷ ವೆಬ್ ಸೈಟ್ ಆರಂಭಿಸಿತ್ತು. ಮಹೀಂದ್ರ ಎಕ್ಸ್ ಯುವಿ5500 ಎಂಬ ವೆಬ್ ಸೈಟ್ ಪ್ರವೇಶಿಸಿದವರು ಅಲ್ಲಿ ಟಾರ್ಪಲ್ ಹಾಕಿ ಮುಚ್ಚಿಟ್ಟ ಕಾರಿನ ದರ ಹೇಳಬೇಕು. ಅವರು ಹೇಳಿದ ದರ ನಿಖರವಾಗಿದ್ದಲ್ಲಿ ಆ ಸ್ಪೋರ್ಟ್ಸ್ ಕಾರನ್ನು ಗೆಲ್ಲಬಹುದೆಂದು ಆಮೀಷ ಒಡ್ಡಿತ್ತು.
ಕಂಪನಿಯ ಈ ಆಫರಿಗೆ ಸಾವಿರಾರು ಜನರು ಸಕಾರಾತ್ಮಕವಾಗಿ ಉತ್ತರ ನೀಡಿದ್ದರು. ಕೆಲವರು ಇದು ಕಂಪನಿಯ ಗಿಮಿಕ್ ಆಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಇದೀಗ ಕಂಪನಿಯು ಒಬ್ಬ ವ್ಯಕ್ತಿಯನ್ನು ವಿನ್ನರ್ ಎಂದು ಘೋಷಿಸಿದೆ.
ಕೊಲ್ಲಾಪುರದ ಅಮಿತ್ ಮೇಟ್ ನೂತನ ಮಹೀಂದ್ರ ಕಾರನ್ನು ಗೆದ್ದ ವ್ಯಕ್ತಿ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇವರಿಗೆ ಹೊಸ ಕಾರಿನ ಕೀಲಿಕೈ ನೀಡಲಾಗಿದೆ.
ಈ ಕಾರು ಸೆಪ್ಟಂಬರ್ 29ರಂದು ಬಿಡುಗಡೆಗೊಂಡಿತ್ತು. ಇದರ ದೆಹಲಿ ಎಕ್ಸ್ ಶೋರೂಂ ದರ 10.8 ಲಕ್ಷ ರು.ನಿಂದ 12.88 ಲಕ್ಷ ರು.ವರೆಗಿದೆ.
ನೂತನ ಎಕ್ಸ್ ಯುವಿ ಕಾರು 2.2 ಲೀಟರಿನ ಸಿಆರ್ ಡಿಐ ಡೀಸೆಲ್ ಎಂಜಿನ್ ಹೊಂದಿದೆ. ಇದು 140 ಹಾರ್ಸ್ ಪವರ್ ಮತ್ತು 330 ಎನ್ ಎಂ ಟಾರ್ಕ್ ನೀಡುತ್ತದೆ. ಈ ಕಾರು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಲ್ಲೇ ಅತ್ಯುತ್ತಮವಾದ ಮೈಲೇಜ್ ನೀಡುತ್ತದೆ. ಕಂಪನಿಯ ಪ್ರಕಾರ ಇದರಲ್ಲಿ ಪ್ರತಿಲೀಟರ್ ಗೆ 15 ಕಿ.ಮೀ. ಮೈಲೇಜ್ ಪಡೆಯಬಹುದು.


Click it and Unblock the Notifications








