ಟಾಟಾ ಕ್ಷೇಟಾ ಸವಾರಿ ಎಷ್ಟು ಸುರಕ್ಷಿತ?

ಇದರಲ್ಲಿ ಪವರ್ ಸ್ಟೇರಿಂಗ್, ರಿಮೋಟರ ಟ್ರಂಕ್ ಓಪನರ್, ರಿಮೊಟ್ ಫ್ಯೂಯಲ್ ಲಿಡ್ ಓಪನರ್, ರಿಯರ್ ರೀಡಿಂಗ್ ಲ್ಯಾಂಪ್, ಹಿಂದಿನ ಸೀಟಿಗೆ ಹೆಡ್ ರೆಸ್ಟ್, ಕೂಲಾಗಿ ಸವಾರಿ ಮಾಡಲು ಏರ್ ಕಂಡಿಷನರ್, ಟೀ ಜ್ಯೂಸ್, ಪೆಗ್ ಕುಡಿದು(ಕುಡಿದು ಸವಾರಿ ಮಾಡುವುದು ಅಪಾಯ) ಇಡಲು ಕಪ್ ಹೋಲ್ಡರ್. ಸಿಗರೇಟ್ ಲೈಟರ್(ಧೂಮಪಾನಿಗಳೇ ಎಚ್ಚರ), ಡಿಜಿಟಲ್ ಓಡೊಮೀಟರ್ ಇತ್ಯಾದಿ ಫೀಚರುಗಳಿವೆ.
ಇಂಡಿಕಾ ವಿ2 ಕಾರಿನಂತೆ ಕ್ಷೇಟಾದ ಕ್ಯಾಬಿನ್ ನಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಹೆಡ್ ರೂಮ್, ಲೆಗ್ ರೂಮ್ ಸ್ಥಳಾವಕಾಶವೂ ಹೆಚ್ಚಿದ್ದು, ಆರಾಮವಾಗಿ ಕಾಲು ಚಾಚಿ ಕುಳಿತುಕೊಳ್ಳಬಹುದಾಗಿದೆ.
ಸುರಕ್ಷತೆ: ಇಂಡಿಕಾ ವಿ2 ಕಾರಿನಂತೆ ಇದರಲ್ಲೂ ಕೆಲವು ಸುರಕ್ಷತೆಯ ಫೀಚರುಗಳಿವೆ. ಅಂದ್ರೆ ಮಕ್ಕಳ ಸುರಕ್ಷತೆಯ ಸವಾರಿಗಾಗಿ ಚೈಲ್ಡ್ ಸೇಫ್ಟಿ ಲಾಕ್ಸ್, ಹಲೊಜಿನ್ ಹೆಡ್ ಲ್ಯಾಂಪ್, ಹಿಂಬದಿ ಸೀಟಿಗೂ ಬೆಲ್ಟ್, ಎಂಜಿನ್ ಚೆಕ್ ವಾರ್ಮಿಂಗ್ ಇತ್ಯಾದಿ ಸುರಕ್ಷತೆಯ ಫೀಚರುಗಳಿವೆ.


Click it and Unblock the Notifications