ಹೊಸ ಮಹೀಂದ್ರ ಬೊಲೆರೊ ಝಡ್ಎಲ್ಎಕ್ಸ್ ರಿವ್ಯೂ

ಈ ಹಿಂದೆ ಬೊಲೆರೊ 2,523 ಸಿಸಿಯ ಡೀಸೆಲ್ ಎಂಜಿನ್ ಹೊಂದಿತ್ತು. ಆದರೆ ನೂತನ ಆವೃತ್ತಿ ಕಾಮನ್ ರೈಲ್ ಎಂಜಿನ್ ಜೊತೆಗೆ ಅಪ್ ಗ್ರೇಡ್ ಆಗಿದೆ. ಆದರೆ ಇದು ನೀಡುವ ಅಶ್ವಶಕ್ತಿ ಹಳೆಯ ಬೊಲೆರೊ ಎಂಪಿವಿನಷ್ಟೇ ಇದೆ. ಆದರೆ ಹೊಸ ಬೊಲೆರೊ ಟಾರ್ಕ್ ಪವರ್ ಹೆಚ್ಚಾಗಿದೆ.
ಮರುವಿನ್ಯಾಸ ಮಾಡಿರುವ ಡ್ಯಾಷ್ ಬೋರ್ಡಿನಿಂದಾಗಿ ನೂತನ ಬೊಲೆರೊ ಝಡ್ಎಲ್ಎಕ್ಸ್ ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿದೆ. ಆಧುನಿಕ ಕಾರುಗಳ ಘನತೆಗೆ ತಕ್ಕಂತೆ ಇದು ಡಿಜಿಟಲ್ ಡಿಸ್ ಪ್ಲೇ, ವಾಯ್ಸ್ ಮೆಸೇಜಿಂಗ್ ಇತ್ಯಾದಿ ಆಕರ್ಷಕ ಫೀಚರುಗಳನ್ನು ಹೊಂದಿದೆ. ನೂತನ ಬೊಲೆರೊ ಎಂಜಿನ್ "ಸ್ಟಾರ್ಟ್ ಸ್ಟಾಪ್" ಸಿಸ್ಟಮ್ ಹೊಂದಿದ್ದು ಇಂಧನ ಉಳಿತಾಯ ಮಾಡಲು ಸಹಕರಿಸುತ್ತದೆ.
ಹಳೆಯ ಆವೃತ್ತಿಗೆ ಹೋಲಿಸಿದರೆ ಹೊಸ ಬೊಲೆರೊ ಝಡ್ಎಲ್ಎಕ್ಸ್ ದರ ಕಡಿಮೆಯಾಗಿಲ್ಲ. ಆದರೆ ಹಳೆಯ ಆವೃತ್ತಿ ಖರೀದಿಸುವುದಕ್ಕಿಂತ ಇದು ಸೂಕ್ತ ಎನಿಸುತ್ತದೆ. ಯಾಕೆಂದರೆ ಇದು ಇತ್ತೀಚಿನ ಆವೃತ್ತಿ. 50 ಸಾವಿರ ರು. ಹೆಚ್ಚುಕೊಟ್ಟು ಹೊಸ ಮಾಡೆಲ್ ಖರೀದಿಸುವುದು ಸೂಕ್ತ.
ಬೊಲೆರೊ ಝಡ್ಎಲ್ಎಕ್ಸ್ 63 ಹಾರ್ಸ್ ಪವರ್ ನೀಡುತ್ತದೆ. ಇದರಲ್ಲಿ 25.61 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಬೆಂಗಳೂರಿನಲ್ಲಿ ಮಹೀಂದ್ರ ಬೊಲೆರೊ ಝಡ್ಎಲ್ಎಕ್ಸ್ ಎಕ್ಸ್ ಶೋರೂಂ ದರ ಸುಮಾರು 6.88 ಲಕ್ಷ ರು.ನಿಂದ ಆರಂಭವಾಗುತ್ತದೆ.


Click it and Unblock the Notifications








