ನ್ಯಾನೊಗೆ ಉಚಿತ ಪರಿಷ್ಕೃತ ಸ್ಟಾರ್ಟರ್ ಮೋಟರ್

Tata Motors To Replace Starter In Nano
ನ್ಯಾನೊ ಕಾರು ಮಾಲಿಕರಿಗೆ ಒಂದು ಬಂಪರ್ ಅವಕಾಶ. ಏಕೆಂದರೆ ಟಾಟಾ ಮೋಟಾರ್ , ನ್ಯಾನೊ ಕಾರುಗಳಿಗೆ ಹೊಸ ಪರಿಷ್ಕೃತ ಸ್ಟಾರ್ಟರ್ ಅನ್ನು ಉಚಿತವಾಗಿ ನೀಡಲು ತೀರ್ಮಾನಿಸಿದೆ.

ಈ ಹೊಸ ಪರಿಷ್ಕೃತ ಹೊಸ ನ್ಯಾನೊ ಕಾರಿನಲ್ಲಿ ಹೀಗಾಗಲೆ ಲಭ್ಯವಿದೆ. ಟಾಟಾ ಮೋಟಾರ್ ವಕ್ತಾರರು ಈ ಬಗ್ಗೆ ಹೇಳುತ್ತಾ ಈ ಪರಿಸ್ಕೃತ ಆಯಾಮವನ್ನು ಹೊಸದಾಗಿ ತಯಾರಿಸಿರುವ ಎಲ್ಲಾ ಹೊಸ ನ್ಯಾನೊ ಕಾರುಗಳಲ್ಲಿ ಬಳಸಲಾಗಿದೆ ಎಂದಿದ್ದಾರೆ.

ಹೀಗಾಗಲೆ ಇರುವ ಸ್ಟಾರ್ಟರ್ ಪರಿಸ್ಕೃತ ಬದಲು ಹೊಸ ಆಯಾಮದ ಪರಿಸ್ಕೃತವನ್ನು ಅಳವಡಿಸಬಹುದೆ ಹೊರತು ಇದು ನ್ಯಾನೊ ಕಾರಿನ ರೀ ಕಾಲ್ ಅಲ್ಲ ಎಂದು ಮೋಟಾರ್ ಒತ್ತಿ ಹೇಳಿದೆ. ಕಾರು ತನ್ನ ಚಾಲನೆಯನ್ನು ಮಾಡುವ ಮುನ್ನ ಎಂಜಿನ್ ನಲ್ಲಿರುವ ಪಿಸ್ಟೋನ್ ಅನ್ನು ತಿರುಗಿಸಲು ಈ ಸ್ಟಾರ್ಟರ್ ಮೋಟಾರ್ ಅನ್ನು ಬಳಸಲಾಗುವುದು.ಈ ಹೊಸ ಪರಿಸ್ಕೃತ ಸ್ಟಾರ್ಟರ್ ಅನ್ನು ಸಮೀಪದ ನ್ಯಾನೊ ಶೋ ರೂಂಗೆ ಹೋಗಿ ಉಚಿತವಾಗಿ ಬದಲಾಯಿಸಿಕೊಳ್ಳಬಹುದು.

145,000 ಕ್ಕಿಂತ ಅಧಿಕ ನ್ಯಾನೊ ಕಾರುಗಳು ಭಾರತದಲ್ಲಿ ಓಡಾಡುತ್ತಿದ್ದು ಇವುಗಳಿಗೆಲ್ಲಾ ಈ ಹೊಸ ಸ್ಟಾರ್ಟರ್ ಮೋಟಾರ್ ಅಳವಡಿಸಲು ಟಾಟಾ ಮೋಟಾರ್ ಗೆ ಎಷ್ಟು ವೆಚ್ಚ ಬೀಳಬಹುದು ಎಂದು ಕಂಪನಿಯ ವಕ್ತಾರರು ಏನೂ ಮಾಹಿತಿಯನ್ನು ನೀಡಲಿಲ್ಲ. ಆದರೂ ಇದರ ವೆಚ್ಚ ಸುಮಾರು ರು. 110 ಕೋಟಿಗಿಂತ ಅಧಿಕ ತಗುಲಬಹುದು ಎಂದು ಅಂದಾಜು ಮಾಡಲಾಗಿದೆ.

ಭಾರತೀಯ ಮಧ್ಯಮ ವರ್ಗದವರು ಕೂಡ ಕಾರು ಕೊಳ್ಳುವಂತಾಗಬೇಕು ಎಂಬ ದೃಷ್ಟಿಕೋನದಿಂದ ಈ ಪುಟ್ಟ ನ್ಯಾನೊ ಕಾರನ್ನು ತಯಾರಿಸಲಾಯಿತು. ಇದು ತಕ್ಕ ಮಟ್ಟಿಗಿನ ಪ್ರಸಿದ್ಧಿಯನ್ನು ಕೂಡ ಪಡೆಯಿತು. ಆದರೆ ಕೆಲವು ನ್ಯಾನೊ ಕಾರುಗಳು ಬೆಂಕಿ ಅಪಘಾತಕ್ಕೆ ಒಳಗಾದಾಗ ಇದರ ಜನಪ್ರಿಯತೆಗೆ ಹಿನ್ನಡೆ ಆಯಿತು.

ಆದರೂ ನ್ಯಾನೊ ಕಾರುಗಳನ್ನು ವಾಪಸ್ಸು ತೆಗೆದುಕೊಳ್ಳಲು ಮೋಟಾರ್ ಕಂಪನಿ ಒಪ್ಪಲಿಲ್ಲ. ಅಲ್ಲದೆ ಟಾಟಾ ಮೋಟಾರ್ ಈ ರೀತಿ ಬೆಂಕಿ ಅಪಘಾತಕ್ಕೆ ಕಾರಣವನ್ನು ಇನ್ನಷ್ಟೆ ಕಂಡು ಹಿಡಿಯಬೇಕಾಗಿದೆ.

Article Published On: Monday, December 26, 2011, 17:12 [IST]
English summary
Tata Motors is offering a free update to the owners of the Nano. This new update is already available in the 2012 Nano. The new starter motors is being offered free of cost to all Nano owners and the part will be installed in the closest Tata Nano showroom or service centre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+