ಹೊಸ ನ್ಯಾನೊ ರಸ್ತೆಗೆ, ಮೈಲೇಜ್ 25.4 ಕಿ.ಮೀ!!

ಮೈಲೇಜ್ ವಿಷ್ಯದಲ್ಲಿ ಕಂಪನಿಯು ತನ್ನ ಈ ಹಿಂದಿನ ದಾಖಲೆಯನ್ನು ತಾನೇ ಮುರಿದಿದೆ. ಹಳೆಯ ನ್ಯಾನೊ ಕಾರು ಕೂಡ ದೇಶದ ಅತ್ಯಧಿಕ ಮೈಲೇಜಿನ ಪೆಟ್ರೋಲ್ ಕಾರು ಎಂಬ ಖ್ಯಾತಿಗೆ ಒಳಗಾಗಿತ್ತು. ನೂತನ 2012ರ ನ್ಯಾನೊ ಕಾರು ಈಗಾಗಲೇ ಟಾಟಾ ಮೋಟರ್ಸ್ ಡೀಲರ್ಷಿಪ್ ಗಳಲ್ಲಿ ದೊರಕುತ್ತಿದೆ. ಅಚ್ಚರಿಯೆಂದರೆ ಹಳೆಯ ದರದಲ್ಲೇ ಹೊಸ ನ್ಯಾನೊ ದೊರಕುತ್ತಿದೆ.
ಈ ಕಾರು 624 ಸಿಸಿ ಎಂಜಿನ್ ಹೊಂದಿದ್ದು, 38 ಪಿಎಸ್ ಪವರ್ ಮತ್ತು 51 ಎನ್ ಎಂ ಟಾರ್ಕ್ ನೀಡುತ್ತದೆ. ಮೈಲೇಜ್ ಪ್ರತಿಲೀಟರಿಗೆ 25.4 ಕಿ.ಮೀ. ನೀಡುತ್ತದೆ. ಹಳೆಯ ಕಾರು 23.6 ಕಿ.ಮೀ. ಮೈಲೇಜ್ ನೀಡುತ್ತಿತ್ತು. ಈ ಕಾರಿನ ಕರ್ಬ್ ತೂಕ 600 ಕೆ.ಜಿ. ಇದೆ. ಈ ಕಾರಿನಲ್ಲಿ ಗರಿಷ್ಠ 105 ಕಿ.ಮೀ. ವೇಗದಲ್ಲಿ ಪ್ರಯಾಣಿಸಬಹುದಾಗಿದೆ.
ಹೊಸ ನ್ಯಾನೊ ಕಾರುಗಳಲ್ಲಿ ಯಾವೆಲ್ಲ ಫೀಚರುಗಳಿವೆ? ಮುಂದಿನ ಪುಟ ನೋಡಿ


Click it and Unblock the Notifications








