ನೂತನ ನ್ಯಾನೊ: ಹೊಸ ಫೀಚರುಗಳು ಏನಿವೆ?

ಸವಾರಿ ಮತ್ತು ನಿರ್ವಹಣೆ ಹಳೆಯ ನ್ಯಾನೊಗಿಂತಲೂ ಅತ್ಯುತ್ತಮವಾಗಿದೆ. ಪರಿಷ್ಕೃತ ಸಸ್ಪೆನ್ಸನ್, ಆಂಟಿ ರೋಲ್ ಬಾರ್, ಹೊಸ ಸ್ಟೀಯರಿಂಗ್ ಮೆಕಾನಿಸಂ ಕಾರಿನ ಡ್ರೈವಿಂಗ್ ಅನುಭವವನ್ನು ಹೆಚ್ಚಿಸಿದೆ. ಈಗಾಗಲೇ ಬೂಸ್ಟರ್ ಅಸಿಸ್ಟೆಂಡ್ ಬ್ರೇಕ್ ಗಳು ಸಿಎಕ್ಸ್ ಮತ್ತು ಎಲ್ ಎಕ್ಸ್ ಆವೃತ್ತಿಗಳಲ್ಲಿ ದೊರಕುತ್ತಿತ್ತು. ಇದೀಗ ನ್ಯಾನೊ ಸ್ಟಾಂಡರ್ಡ್ ಆವೃತ್ತಿಗೂ ಈ ಫೀಚರ್ಸ್ ಅಳವಡಿಸಲಾಗಿದೆ.
ನ್ಯಾನೊ ಎಲ್ಎಕ್ಸ್ ಫೀಚರುಗಳು: ಫ್ಯಾಬ್ರಿಕ್ ಸೀಟು, ಸೆಂಟ್ರಲ್ ಲಾಕಿಂಗ್, ಡೋರ್ ಹ್ಯಾಂಡಲ್ಸ್, ಫ್ರಂಟ್ ಪವರ್ ವಿಂಡೋಸ್, ಮುಂಭಾಗದಲ್ಲಿ ಕಪ್ ಹೋಲ್ಡರ್, 12 ವೋಲ್ಟೆಜ್ ಸಾಕೆಟ್, ಬಾಡಿ ಬಣ್ಣದ ಬಂಪರ್ಸ್, ಫಾಗ್ ಲ್ಯಾಂಪ್, ಎಲೆಕ್ಟ್ರಾನಿಕ್ ಟ್ರಿಪ್ ಮೀಟರ್, ಫುಲ್ ವೀಲ್ ಕವರ್ಸ್, ಡ್ರೈವರ್ ಮತ್ತು ಪ್ರಯಾಣಿಕರ ಬದಿಯಲ್ಲಿ ಟಿಪ್ ಟಾಪ್ ಮಿರರ್, ಬೂಸ್ಟರ್ ಅಸಿಸ್ಟೆಡ್ ಬ್ರೇಕ್ ಇದೆ.
ನ್ಯಾನೊ ಎಲ್ ಎಕ್ಸ್ ಆರು ಪ್ರೀಮಿಯಂ ಬಣ್ಣಗಳಲ್ಲಿ ದೊರಕುತ್ತಿದೆ. ಪರ್ಲ್ ಬಿಳಿ, ಪಪ್ಪಾಯಿ ಆರೆಂಜ್ ಬಣ್ಣ. ಮೊಜಿಟೊ ಗ್ರೀನ್, ಸನ್ ಶೈನ್ ಹಳದಿ, ಸಿಲ್ವರ್, ತೆಳು ಚಿನ್ನದ ಬಣ್ಣಗಳಲ್ಲಿ ಎಲ್ಎಕ್ಸ್ ಆವೃತ್ತಿ ದೊರಕುತ್ತಿದೆ.
ಎಲ್ಲಾ ಆವೃತ್ತಿಗಳು ಸೇರಿದಂತೆ ಒಟ್ಟು ಹತ್ತು ಬಣ್ಣಗಳಲ್ಲಿ ನ್ಯಾನೊ ಕಾರುಗಳು ದೊರಕುತ್ತಿದೆ. ಪರ್ಲ್ ಬಿಳಿ ಬಣ್ಣ, ತುಸು ಕೆಂಪು, ಅಕ್ವಾ ಬ್ಲೂ, ನಿಯೊನ್ ರಷ್, ಸೆರೆನೆ ವೈಟ್, ಸಿಲ್ವರ್, ಹಸಿರು, ಹಳದಿ, ಗೋಲ್ಡ್ ಬಣ್ಣಗಳಲ್ಲಿ ನ್ಯಾನೊ ಕಾರು ಖರೀದಿಸಬಹುದು.


Click it and Unblock the Notifications