ಹೊಸ ಟಾಟಾ ನ್ಯಾನೊ ಕಾರುಗಳ ದರವೆಷ್ಟು?

ನೂತನ ನ್ಯಾನೊ ಕಾರು ಕಂಪನಿಯ 676 ಮಳಿಗೆಗಳಲ್ಲಿ ದೊರಕಲಿದೆ. ಈಗ ಡೌನ್ ಪೇಮೆಂಟ್ ಕೂಡ ಕಡಿಮೆಯಾಗಿದೆ. ಕೇವಲ 15 ಸಾವಿರ ರುಪಾಯಿ ಡೌನ್ ಪೇಮೆಂಟ್ ನೀಡಿ ನ್ಯಾನೊ ಕಾರು ಮನೆಗೆ ಕೊಂಡೊಯ್ಯಬಹುದಾಗಿದೆ.
"ನಮ್ಮ ಬದಲಾವಣೆಗಳನ್ನು ಟಾಟಾ ನ್ಯಾನೊ ಮಾಲಿಕರು ಇಷ್ಟಪಡುತ್ತಾರೆ ಎಂಬ ನಂಬಿಕೆ ನಮಗಿದೆ. ಈಗಾಗಲೇ ಹತ್ತು ಬಣ್ಣಗಳಲ್ಲಿ ಹಲವು ಫೀಚರುಗಳಲ್ಲಿ ನ್ಯಾನೊ ದೊರಕಲಿದೆ. ನಾವು ಮುಂದೆಯೂ ಹೊಸ ಫೀಚರುಗಳನ್ನು ಅಳವಡಿಸುವುದನ್ನು ಮುಂದುವರೆಸಲಿದ್ದೇವೆ" ಎಂದು ಟಾಟಾ ಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ಪಿ. ಎಂ. ತೆಲಾಂಗ್ ಹೇಳಿದ್ದಾರೆ.


Click it and Unblock the Notifications








