ಪ್ರಗತಿ ಮೈದಾನದಲ್ಲಿ ಐವತ್ತು ಹೊಸ ವಾಹನಗಳ ಅನಾವರಣ

50 New Vehicles Launch at Delhi Auto Expo 2012
ಜನವರಿ ಐದರಿಂದ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ದ್ವಿಚಕ್ರ ವಾಹನಗಳು, ಬಸ್, ಟ್ರಕ್ ಮತ್ತು ಕಾರುಗಳು ಸೇರಿದಂತೆ ಒಟ್ಟು ಐವತ್ತು ಹೊಸ ವಾಹನಗಳು ಅನಾವರಣಗೊಳ್ಳಲಿವೆ. ಇದರೊಂದಿಗೆ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ನೂರಾರು ವಾಹನಗಳು ಇರಲಿವೆ.

"ಈ ವರ್ಷದ ವಾಹನ ಪ್ರದರ್ಶನದಲ್ಲಿ ಎಲ್ಲಾ ವಿಭಾಗಗಳು ಸೇರಿದಂತೆ ಒಟ್ಟು ಐವತ್ತು ಹೊಸ ವಾಹನಗಳು ಇರಲಿವೆ" ಎಂದು ದೇಶದ ವಾಹನ ಉತ್ಪಾದಕರ ಒಕ್ಕೂಟ(ಎಸ್ಐಎಎಂ)ದ ಅಧ್ಯಕ್ಷರಾದ ಎಸ್ ಶಾಂಡಿಲ್ಯ ಹೇಳಿದ್ದಾರೆ.

ಇದು ದೆಹಲಿಯಲ್ಲಿ ನಡೆಯಲಿರುವ 11ನೇ ವಾಹನ ಪ್ರದರ್ಶನವಾಗಿದೆ. ಆದರೆ ಜನವರಿ 2011ರಲ್ಲಿ ದೆಹಲಿ ವಾಹನ ಪ್ರದರ್ಶನ ನಡೆದಿರಲಿಲ್ಲ. ಈ ವಾಹನ ಪ್ರದರ್ಶನವನ್ನು ಎಸ್ಐಎಎಂ, ದೇಶದ ಉದ್ಯಮ ಒಕ್ಕೂಟ ಮತ್ತು ವಾಹನ ಬಿಡಿಭಾಗ ಉತ್ಪಾದಕರ ಸಂಘ ಸಂಘಟಿಸುತ್ತಿದೆ.

ಈ ವಾಹನ ಪ್ರದರ್ಶನದಲ್ಲಿ 24 ದೇಶಗಳಿಂದ ಸುಮಾರು 1,500 ಪ್ರದರ್ಶಕರು ಭಾಗವಹಿಸಲಿದ್ದಾರೆ. "ಕೇವಲ ವಾಹನ ಕಂಪನಿ ಮಾತ್ರವಲ್ಲದೇ ಟೈರು ಕಂಪನಿಗಳು, ವಾಹನ ಬಿಡಿಭಾಗ ಉತ್ಪಾದಕರು ಭಾಗವಹಿಸಲಿದ್ದಾರೆ" ಎಂದು ಶಾಂಡಿಲ್ಯ ಹೇಳಿದ್ದಾರೆ.

"ಈ ವಾಹನ ಪ್ರದರ್ಶನವು ವಿಶೇಷವಾಗಿ ಹಸಿರು ತಂತ್ರಜ್ಞಾನಕ್ಕೆ ಒತ್ತು ನೀಡಲಿದೆ. ಅಂದರೆ ಪರ್ಯಾಯ ಇಂಧನ, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಲಿದೆ" ಎಂದು ಅವರು ಹೇಳಿದ್ದಾರೆ.

ಈ ವಾಹನ ಪ್ರದರ್ಶನಕ್ಕೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಹೊಸದಾಗಿ ಆರಂಭಿಸಲಾಗಿದೆ. ಪ್ರಗತಿ ಮೈದಾನದಲ್ಲಿ 30 ಸಾವಿರ ಪ್ರದರ್ಶಕರು, ಮಾಧ್ಯಮ ಮತ್ತು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಸುಮಾರು ಒಂದು ಲಕ್ಷ ಜನರಿಗೆ ಸ್ಥಳಾವಕಾಶವಿರುತ್ತದೆ.

Article Published On: Thursday, December 22, 2011, 10:59 [IST]
English summary
50 new vehicle launches at Delhi Auto Expo 2012. "This show will have 50 launches two-wheelers, cars, buses and trucks" S. Sandilya, president, Society of Indian Automobile Manufacturers (SIAM), said
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+