ಬೆಂಗಳೂರಿನ ಕ್ರಿಕೆಟ್ ಪ್ರೇಮಿಗೆ ಟಿ20 ಪಸ್ಸಾಟ್

ಟಿ20 ಪಸ್ಸಾಟ್ ಕಾರನ್ನು ಇಬೇ ಇಂಡಿಯಾ ಹರಾಜಿನಲ್ಲಿಟ್ಟಿತ್ತು. ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಹರಾಜಿನಲ್ಲಿ ಸುಮಾರು 26 ಜನರು ಭಾಗವಹಿಸಿದ್ದರು. ಅಂತಿಮವಾಗಿ ಬೆಂಗಳೂರಿನ ಸಾಯಿದಾಸ್ ಮಲ್ಲಾಡಿ ಎಂಬವರು 30,13,000 ರು.ಗೆ ಈ ಕಾರನ್ನು ತನ್ನದಾಗಿಸಿಕೊಂಡಿದ್ದಾರೆ.
ಟಿ20 ಫೋಕ್ಸ್ ವ್ಯಾಗನ್ ಪಸ್ಸಾಟ್ ಕಾರನ್ನು ಐಪಿಎಲ್ ನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇದಕ್ಕೆ ಟಿ20 ತಂಡದ ಎಲ್ಲಾ ಆಟಗಾರರು ಸಹಿ ಮಾಡಿದ್ದರು. ಫೋಕ್ಸ್ ವ್ಯಾಗನ್ ಕಂಪನಿಯ ಪಸ್ಸಾಟ್ ಕಾರುಗಳ ದರ ಸುಮಾರು 20.80 ಲಕ್ಷ ರು.ನಿಂದ 25.65 ಲಕ್ಷ ರು.ವರೆಗಿದೆ. ಹೀಗಾಗಿ ಕ್ರಿಕೆಟ್ ಆಟಗಾರರು ಸಹಿ ಹಾಕಿದ ಪಸ್ಸಾಟ್ ಕೆಲವು ಲಕ್ಷ ರು. ಲಾಭ ಗಳಿಸಿದೆ. ಕಂಪನಿಯು ಹರಾಜಿನಲ್ಲಿ ದೊರಕಿದ ಹಣವನ್ನು ವಿಶ್ವ ವನ್ಯಜೀವಿ ಫಂಡ್(ಡಬ್ಲ್ಯುಡಬ್ಲ್ಯುಎಫ್)ಗೆ ನೀಡಲಿದೆ.


Click it and Unblock the Notifications








