ಬಾಲಿವುಡ್ ಬೆಡಗಿಯರ ಫೇವರಿಟ್ ಕಾರು ಲೋಕ

ಸದ್ಯ ನಮ್ಮ ಬಾಲಿವುಡ್ ನಟಿಯರಿಗೆ ಇಷ್ಟವಾದ ಅಗ್ರ ಮೂರು ಕಾರುಗಳನ್ನು ಇಲ್ಲಿ ಕೊಡಲಾಗಿದೆ. ಯಾವ ನಟಿಗೆ ಯಾವ ಕಾರು ಇಷ್ಟವೆಂಬ ಮಾಹಿತಿಯೂ ಇಲ್ಲಿದೆ.
ಆಡಿ ಕ್ಯೂ7: ಆಡಿ ಕ್ಯೂ7ಗೆ ಪ್ರಮುಖ ಗ್ರಾಹಕರು ನಮ್ಮ ಬಾಲಿವುಡ್ ನಟಿಯರು. ಆಶಿನ್, ಬಿಪಾಶ ಬಸು, ದೀಪಿಕಾ ಪಡುಕೋಣೆ, ದಿಯಾ ಮಿರ್ಜಾ, ಕಾಜೋಲ್, ಕತ್ರಿನಾ ಕೈಫ್ ಮತ್ತು ಸೋನಂ ಕಪೂರ್ ಬಳಿ ಆಡಿ ಕ್ಯೂ7 ಕಾರಿದೆ.
ಬಾಲಿವುಡ್ ನಲ್ಲಿ ನಟಿಯಾಗಿ ಎಷ್ಟೇ ಯಶಸ್ವಿಯಾಗಲಿ, ಆಕೆಯ ಬಳಿ ಆಡಿ ಕ್ಯೂ7 ಕಾರಿಲ್ಲದಿದ್ದರೆ ಆಕೆಯ ಸ್ಥಾನಮಾನ ಕೊಂಚ ಕಡಿಮೆಯೇ. ಹೀಗಾಗಿ ಯಶಸ್ವಿ ಬಾಲಿವುಡ್ ನಟಿಯರ ಬಳಿ ಆಡಿ ಕ್ಯೂ7 ಕಾರು ಹೆಚ್ಚಾಗಿರುವುದು ಸದ್ಯದ ವಾಸ್ತವ.
ಪೊರ್ಷ್ ಕಯೆನೆ: ಇನ್ನು ಕೆಲವು ಬಾಲಿವುಡ್ ನಟಿಯರಿಗೆ ಪೋರ್ಷ್ ಕಯೆನೆ ಸ್ಪೋರ್ಟ್ಸ್ ಕಾರು ಇಷ್ಟ. ಕೆಲವು ನಟಿಯರಿಗೆ ಈ ಬೃಹತ್ ಸ್ಪೋರ್ಟ್ಸ್ ಕಾರು ಇಷ್ಟವಾಗೋದು ಕಡಿಮೆ. ಆದರೆ ಪ್ರಿಯಾಂಕ ಛೋಪ್ರಾ ಮತ್ತು ಬಿಪಾಶ ಬಸು ಗ್ಯಾರೇಜಿನಲ್ಲಿ ಪೋರ್ಷ್ ಕಯೆನೆ ಕಾರು ಇದೆ.
ಮರ್ಸಿಡಿಸ್ ಎಸ್ ಕ್ಲಾಸ್: ಮರ್ಸಿಡಿಸ್ ಕಾರುಗಳೆಂದರೆ ಐಷಾರಾಮಿ ಸಂಕೇತ. ಬಾಲಿವುಡ್ ನಟಿಯರಿಗೆ ಐಷಾರಾಮಿ ಬದುಕೆಂದರೆ ಪಂಚಪ್ರಾಣ. ಹೀಗಾಗಿ ಇವರ ಬಳಿ ಮರ್ಸಿಡಿಸ್ ಕಾರು ಮಿಸ್ ಆಗೋದು ಸಾಧ್ಯನೇ ಇಲ್ಲ. ಪ್ರೀಯಾಂಕ ಛೋಪ್ರಾ ಮತ್ತು ಕರೀನಾ ಕಪೂರ್ ಬಳಿ ಮರ್ಸಿಡಿಸ್ ಎಸ್ ಕ್ಲಾಸ್ ಕಾರಿದೆ. ಕರೀನಾ ಬಳಿಯಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಲೆಕ್ಸಾಸ್ ಎಲ್ಎಕ್ಸ್ 470 ಕಾರಿದೆ. ಆಕೆಯ ತಂಗಿ ಕರೀಷ್ಮಾ ಬಳಿ ಮರ್ಸಿಡಿಸ್ ಎಸ್ ಕ್ಲಾಸ್ ಕಾರಿದೆ.


Click it and Unblock the Notifications








