ಸ್ವಿಫ್ಟ್ ಗೆ ಚಾಲೆಂಜ್ ಕಾರು: ಷೆವರ್ಲೆ ಸೈಲ್

ಜನರಲ್ ಮೋಟರ್ಸ್ ಇಲ್ಲಿವರೆಗೆ ಕಾಂಪ್ಯಾಕ್ಟ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಪೈಪೋಟಿಗೆ ಇಳಿದಿರಲಿಲ್ಲ. ಆದರೆ ಈಗ ಕಂಪನಿಯು ಚೀನಾದಲ್ಲಿ ಷೆವರ್ಲೆ ಸೈಲ್ ಎಂಬ ಕಾರನ್ನು ಅಭಿವೃದ್ಧಿಪಡಿಸಿದೆ. ಇದು ಸ್ವಿಫ್ಟ್ ಗಾತ್ರದ ಕಾರಾಗಿದ್ದು, ಷೆವರ್ಲೆ ಬೀಟಿಗಿಂತ ಕೊಂಚ ದೊಡ್ಡ ಕಾರಾಗಿದೆ.
ಷೆವರ್ಲೆ ಸೈಲ್ 1.2 ಲೀಟರಿನ ಪೆಟ್ರೋಲ್ ಎಂಜಿನ್ ಅಥವಾ ಅದಕ್ಕಿಂತ ಹೆಚ್ಚು ಶಕ್ತಿಶಾಲಿಯಾದ 1.4 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ ಎಂದು ಕೆಲವು ವರದಿಗಳು ಹೇಳಿವೆ. ಆದರೆ ಕಂಪನಿಯು ಷೆವರ್ಲೆ ಸೈಲ್ ಡೀಸೆಲ್ ಎಂಜಿನ್ ಪರಿಚಯಿಸಲಿದೆಯೇ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.
ನೂತನ ಷೆವರ್ಲೆ 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ. ಈ ಕಾರಿನ ದರದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಜನರಲ್ ಮೋಟರ್ಸ್ ಇಂಡಿಯಾ ಕಂಪನಿಯು ಷೆವರ್ಲೆ ಸೈಲ್ ಕುರಿತು ಯಾವುದೇ ಮಾಹಿತಿ ಹೊರಹೋಗದಂತೆ ಕೈಕಟ್ಟಿ ಬಾಯ್ ಮುಚ್ಚಿ ಕುಳಿತಿದೆ.


Click it and Unblock the Notifications








