ಬಚ್ಚನ್ ಸಿನಿಮಾದಲ್ಲಿ ಭವಿಷ್ಯದ ಸೂಪರ್ ಕಾರುಗಳು

Deal with Hollywood Movie Cars
ಪ್ರಮುಖವಾಗಿ ಹಾಲಿವುಡ್ ಸಿನಿಮಾಗಳಲ್ಲಿ ಹತ್ತು ಹಲವು ಸೂಪರ್ ಕಾರುಗಳನ್ನು ನಾವು ನೋಡುತ್ತೇವೆ. ಆದರೆ ಇವುಗಳಲ್ಲಿ ಹೆಚ್ಚಿನವು ಇನ್ನೂ ದೇಶದ ರಸ್ತೆಗಿಳಿದಿರುವುದಿಲ್ಲ. ಮುಖ್ಯವಾಗಿ ಇವೆಲ್ಲ ದೇಶದ ರಸ್ತೆಗಿಳಿಯಲಿರುವ ಕಾರುಗಳು.

ಅಭಿಷೇಕ್ ಬಚ್ಚನ್ ನಟನೆಯ ಮಿಷನ್ ಇಂಪಾಸಿಬಲ್ 4: ಘೋಸ್ಟ್ ಪ್ರೊಟೊಕಾಲ್ ಸಿನಿಮಾದಲ್ಲಿ ಭವಿಷ್ಯದ ಬಿಎಂಡಬ್ಲ್ಯು ಕಾರುಗಳಿವೆ. ಅಂದ್ರೆ ಮುಂದಿನ ವರ್ಷ ದೇಶದ ರಸ್ತೆಗಿಳಿಯುವ ಕಾರುಗಳನ್ನು ಹೆಚ್ಚಾಗಿ ಬಳಸಲಾಗಿದೆ.

ಈ ರೀತಿ ಸಿನಿಮಾಗಳಲ್ಲಿ ಕಾರುಗಳನ್ನು ಬಳಸುವುದರಿಂದ ಕಾರು ಕಂಪನಿಗಳಿಗೆ ಲಾಭವಿದೆ. ಕಾರು ಬ್ರಾಂಡುಗಳನ್ನು ಪ್ರಚಾರ ಮಾಡಲು ಸಿನಿಮಾಕ್ಕಿಂತ ಉತ್ತಮ ಮಾಧ್ಯಮವಿಲ್ಲ. ಹೀಗಾಗಿ ಬಿಎಂಡಬ್ಲ್ಯು ಮಿನಿ ಕೂಪರ್, ಪರಿಷ್ಕೃತ ಕ್ರಿಸ್ಲರ್ 300ಸಿ, ಮಾಝ್ದಾ ಇತ್ಯಾದಿ ಕಾರುಗಳು ಇತ್ತೀಚಿನ ಸಿನಿಮಾಗಳಲ್ಲಿ ಕಾಣುತ್ತಿವೆ.

ಇದರಲ್ಲಿ ಬಿಎಂಡಬ್ಲ್ಯು ಮಿನಿ ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ. ಈ ಹ್ಯಾಚ್ ಬ್ಯಾಕ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕಲಿದೆ. ಈ ಕಾರಿನ ದರ ಸುಮಾರು 18 ಲಕ್ಷ ರುಪಾಯಿಯಿಂದ 32 ಲಕ್ಷ ರುಪಾಯಿವರೆಗಿರಲಿದೆ.

ಕಾರು ಪ್ರಚಾರಕ್ಕೆ ಕಂಪನಿಗಳು ಈಗೀಗ ಸಿನಿಮಾಗಳನ್ನೇ ಪ್ರಮುಖ ಮಾಧ್ಯಮವಾಗಿ ಬಳಸಿಕೊಳ್ಳುತ್ತಿವೆ. ಸಿನಿಮಾ ಆರಂಭವಾಗುವ ಮುನ್ನ ಕಾಣುವ ಜಾಹೀರಾತುಗಳಿಗಿಂತ ನಮಗೆ ತಿಳಿಯದ ಹಾಗೇ ಕಾಣುವ ಇಂತಹ ಜಾಹೀರಾತುಗಳ ಮೂಲಕ ಕಾರು ಕಂಪನಿಗಳು ಬ್ರಾಂಡ್ ಪ್ರಚಾರಕ್ಕೆ ಹೊರಟಿವೆ. ರಾ.ಒನ್, ಘೋಸ್ಟ್ ಪ್ರೊಟೊಕಾಲ್ ಚಿತ್ರಗಳು ಇದಕ್ಕೆ ಇತ್ತೀಚಿನ ಉದಾಹರಣೆಗಳಾಗಿವೆ.

More from DriveSpark

Article Published On: Friday, December 23, 2011, 17:17 [IST]
English summary
The luxury car manufacturers take advantage of Hollywood movies and TV shows to advertize Brand. latest Hollywood offering Mission Impossible 4: Ghost Protocol is a perfect example for it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+