ರೋಮಾಂಟಿಕ್ ನಟ ದೇವಾನಂದ್ ಪ್ರಣಯಕ್ಕೆ 2 ಸಾಕ್ಷಿ!!

Evergreen Dev Anand's Evergreen Car
ದೇವಾನಂದ್ ಅಂದರೆ ನೆನಪುಗಳ ಮೆರವಣಿಗೆ. ಪ್ರೀತಿಯ ಆಲಾಪ, ಆರ್ತನಾದ, ಲವಲವಿಕೆ, ನೋವು ನಲಿವುಗಳಲ್ಲಿ ದೇವಾನಂದ್ ನೆನಪಾಗುತ್ತಾನೆ. ಮುನಿಮ್ ಜಿ, ಕಾಲಾಪಾನಿ, ಲವ್ ಮ್ಯಾರೇಜ್, ಕಾಲಾ ಬಜಾರ್, ಹಮ್ ದೋನೋ, ಗೈಡ್ ಚಿತ್ರಗಳು ಕಣ್ಣಮುಂದೆ ಸುಳಿಯುತ್ತವೆ.

ಇತ್ತೀಚೆಗೆ ಇನ್ನಿಲ್ಲವಾದ ಎವರ್ ಗ್ರೀನ್ ರೋಮಾಂಟಿಕ್ ನಟ ಇಷ್ಟವಾಗಲೂ ಲೆಕ್ಕವಿಲ್ಲದಷ್ಟು ಕಾರಣಗಳಿವೆ. ಆತ ಭಾರತದ ಚಿತ್ರರಂಗದಲ್ಲಿ ತನ್ನ ನಟನೆ, ಚಿತ್ರಲೋಕದಿಂದ ಮಿಂಚಿದ ಅಪರೂಪದ ನಟ. ಎಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿರುವ ದೇವಾನಂದ್ ನೆನಪಿಸಿಕೊಳ್ಳಲು ನಮಗೆ ಒಂದು ನೆಪ ಬೇಕಿಲ್ಲ.

ನಟಿ ಮತ್ತು ಗಾಯಕಿ ಸುರೈಯಾ ಜೊತೆ ಪ್ರಣಯ, ಭಾವನಾತ್ಮಕ ಸಂಬಂಧ ಕೂಡ ನೆನಪಿಸಿಕೊಳ್ಳಬೇಕು. ಇವರಿಬ್ಬರು ಆರು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದರು. ಆದರೆ ಆಕೆ ಮುಸ್ಲಿಂ. ಆದರೆ ಇವರ ಪ್ರೀತಿಗೆ ಸುರೈಯಾ ಅಜ್ಜಿ ವಿರೋಧಿಸಿದಳು. ಸುರೈಯಾ ಜೀವನಪೂರ್ತಿ ಅವಿವಾಹಿತೆಯಾಗಿ ಉಳಿದಳು.

ಅವರ ನಟನೆ, ಪ್ರೀತಿ, ಬದುಕಿನ ಬಗ್ಗೆ ಸಾಕಷ್ಟು ಓದಬಹುದು. ಆದರೆ ಅವರ ಜೀವನಶೈಲಿಯಲ್ಲಿ ಪ್ರಮುಖ ಭಾಗವಾಗಿದ್ದ ಕಾರುಗಳ ಕುರಿತು ಮಾತನಾಡುವುದು ವಾಹನ ವೆಬ್ ಸೈಟಿಗೆ ಹೆಮ್ಮೆಯ ವಿಚಾರ. ದೇವಾನಂದ್ ಬಳಕೆ ಮಾಡಿದ ಕಾರುಲೋಕದಲ್ಲಿ ಒಂದು ಪ್ರಯಾಣ ಇಲ್ಲಿದೆ. ಇದು ಕನ್ನಡ ಡ್ರೈವ್ ಸ್ಪಾರ್ಕ್ ವಿಶೇಷ.

ಮರೆಯಾದ ದೇವಾನಂದರ ಮರೆಯಲಾಗದ ಕಾರುಗಳಲ್ಲಿ ಬ್ರಿಟನಿನ ಹಿಲ್ಮೆನ್ ಮಿಂಕ್ಸ್ ಬ್ಲಾಕ್ ಕಾರು ಪ್ರಮುಖ. ಈ ಕಾರು 1954ರ "ಟ್ಯಾಕ್ಸಿ ಡ್ರೈವರ್" ಸಿನಿಮಾದಲ್ಲಿದ್ದ ಮುಖ್ಯ ಬಂಡಿ. ನಟಿ ಮತ್ತು ಪ್ರೇಯಸಿ ಜೊತೆ ಈ ಸಿನಿಮಾದಲ್ಲಿ ದೇವಾನಂದ್ ಪ್ರಯಾಣಿಸುವ ದೃಷ್ಯ ಟ್ಯಾಕ್ಸಿ ಡ್ರೈವರ್ ಚಿತ್ರ ನೋಡಿರುವರು ಮರೆತಿರಲಿಕ್ಕಿಲ್ಲ.

ಈ ಕಾರನ್ನು ಖರೀದಿಸಿದ್ದು ವಿದ್ಯಾ ಚಿತ್ರದಲ್ಲಿ ದೊರಕಿದ ಸಂಭಾವನೆಯಿಂದ. ವಿದ್ಯಾ ಚಿತ್ರದಲ್ಲಿ ಸುರಯ್ಯ ನಟಿಯಾಗಿದ್ದಳು. ಹೀಗಾಗಿ ಸುರಯ್ಯ ಪ್ರೀತಿ ನೆನಪಾಗಿ ಈ ಕಾರು ದೇವಾನಂದ್ ಬಳಿ ಸಾಕಷ್ಟು ವರ್ಷವಿತ್ತು. ತನ್ನ ಪ್ರೀಯತಮೆಯ ನೆನಪಿಗಾಗಿ ದೇವಾನಂದ್ ಈ ಕಾರಿಗೆ ಸಂಗೀತದ ಹಾರ್ನ್ ಫಿಟ್ ಮಾಡಿದ್ದರು.

ಟ್ಯಾಕ್ಸಿ ಡ್ರೈವರ್ ಚಿತ್ರದಲ್ಲಿ ಹಿಲ್ಮೆನ್ ಮಿಂಕ್ಸ್ ಕಾರು ಬಳಸಿದ್ದು ಈ ಕಾರಿನ ಬ್ರಾಂಡ್ ಪ್ರಚಾರಕ್ಕೂ ನೆರವಾಯಿತು. ಮುಂಬೈನಲ್ಲಿ 1970ರವರೆಗೆ ಹಿಲ್ಮೆನ್ ಮಿಂಕ್ಸ್ ಪ್ರಮುಖ ಟ್ಯಾಕ್ಸಿ ವಾಹನವಾಗಿ ಬಳಕೆಯಲ್ಲಿತ್ತು. ಹಿಲ್ಮೆನ್ ಕಾರಿನಲ್ಲಿಯೇ ದೇವಾನಂದ್ ಹೆಚ್ಚಾಗಿ ಪ್ರೀಯತಮೆಯನ್ನು ಭೇಟಿಯಾಗುತ್ತಿದ್ದರು.

ಕಾಲಗಳು ಉರಳಿದವು. ಆ ಕಾಲದಲ್ಲಿ ಕಾರೆಂದರೆ ನಟನ ಸ್ಟೇಟಸ್ ಪ್ರಶ್ನೆ. ಹೀಗಾಗಿ ತನ್ನ ಹಳೆಯ ಹಿಲ್ಮೆನ್ ಕಾರಿಗೆ ಗುಡ್ ಬೈ ಹೇಳಿದರು. ದೇವಾನಂದ್ ಕೂಡ ತನ್ನ ಸ್ಟೇಟಸ್ ಗೆ ಸೂಕ್ತವಾಗುವ ಹೊಸ ಕಾರನ್ನು ಆಯ್ಕೆ ಮಾಡಿದ್ದರು.

ತಾನು ಹಿಲ್ಮೆನ್ ಕಾರು ಖರೀದಿಸಿದ ಶೋರೂಂಗೆ ಭೇಟಿನೀಡಿ ಹೊಸ ನೀಲಿ ಕಾರು ಖರೀದಿಸಿದರು. ಅದರ ಹೆಸರು ಟ್ರಿಯುಂಪ್. ಈ ದಿನಗಳಲ್ಲಿ ಈ ಮಾದರಿಯ ಕಾರು ನೋಡಲು ಸಿಗದು. ಈ ಕನ್ವರ್ಟಿಬಲ್ ಕಾರಿಗೆ ಪ್ರೇಯಸಿಯ ನೆನಪಲ್ಲಿ ಪ್ರಿನ್ಸಸ್ ಎಂದು ಹೆಸರಿಟ್ಟರು.

ದೇವಾನಂದ್ ಬದುಕಿಗೆ, ಪ್ರಣಯಕ್ಕೆ, ನಟನೆಗೆ ಸಾಕ್ಷಿಯಾಗಿದ್ದ ಲಕ್ಕಿ ಬಂಡಿಗಳು ಹಿಲ್ಮೆನ್ ಮತ್ತು ಟ್ರಯಂಪ್. ಈ ವಾರಾಂತ್ಯದಲ್ಲಿ ದೇವಾನಂದ್ ಬದುಕನ್ನು ಮತ್ತು ಅವರ ಚಿತ್ರಗಳನ್ನು ನಿಮಗೆ ನೆನಪಿಸಿಕೊಳ್ಳಲು ಅವರ ಕಾರು ಕತೆ ಹೇಳಬೇಕಾಯಿತು. ಮರೆತರೆ ತಾನೇ ನೆನಪಿಸಿಕೊಳ್ಳುವುದು ಅಂತೀರಾ? ಅದು ನಿಜ.

More from DriveSpark

Article Published On: Saturday, December 10, 2011, 15:36 [IST]
English summary
Dev Anand bought his first car from the remuneration of his film Vidya in which he acted along with Suraiya. Dev Anand was romantically linked with yesteryear actress Suraiya and she remained a person Dev Anand loved all his life. Dev Ananad should have had fond memories of the Hillman Minx.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+