ಫಿಯೆಟ್ ಕೆಫೆಯಲ್ಲಿ ಬೈಟು ಕಾಫಿ ಕುಡಿಯೋಣ ಬನ್ನಿ

Fiat Caffe Website Is Now Live
ದೇಶದಲ್ಲಿ ಕಾಫಿ ಕೆಫೆ ಆರಂಭಿಸಲು ಫಿಯೆಟ್ ಯೋಜಿಸಿರುವುದಾಗಿ ಈ ಹಿಂದೆ ವರದಿ ಮಾಡಿದ್ದೇವು. ಇದೀಗ ಕಂಪನಿಯು ದೆಹಲಿಯಲ್ಲಿ ಆರಂಭವಾಗಲಿರುವ ಫಿಯೆಟ್ ಕಾಫಿ ಕೆಫೆಯ ವೆಬ್ ಸೈಟ್ ಆರಂಭಿಸಿದೆ. ವೆಬ್ ಸೈಟ್ ಲಿಂಕ್ ಇಲ್ಲಿದೆ.

ಇನ್ನೊಂದು ಕೆಫೆಯನ್ನು ಪುಣೆಯಲ್ಲಿ ಆರಂಭಿಸುವ ಯೋಜನೆ ಫಿಯೆಟ್ ಗಿದೆ. ಫಿಯೆಟ್ ಕಾಫಿ ಕೆಫೆ ಹೆಸರೇ ಹೇಳುವಂತೆ ಕಾಫಿ ಕೆಫೆ. ಇಲ್ಲಿ ಕಾಫಿ, ಟೀ ಕುಡಿಯಬಹುದು. ಫಿಯೆಟ್ ಕಂಪನಿಯು ಕಾರು ಮಾರೋದನ್ನು ಬಿಟ್ಟು ಕಾಫಿ ಮಾರಲು ಯಾಕೆ ಆರಂಭಿಸಿತ್ತು ಎನ್ನೋ ಡೌಟ್ ನಿಮಗೆ ಬಂದಿರಬಹುದು.

ಫಿಯೆಟ್ ಕಾಫಿ ಕೆಫೆ ಮೂಲಕ ಕಂಪನಿಯು ಫಿಯೆಟ್ ಇತಿಹಾಸವನ್ನು ಜನರಿಗೆ ಪರಿಚಯಿಸಲು ಯೋಜಿಸಿದೆ. ಅಂದರೆ ಈ ಕಾಫಿ ಕೆಫೆಯಲ್ಲಿ ಕಂಪನಿಯ ಕೆಲವು ಐತಿಹಾಸಿಕ ಕಾರುಗಳನ್ನು ಪ್ರದರ್ಶಿಸಲಿದೆ. ಇಲ್ಲಿ ಕಂಪನಿಯ ಇತಿಹಾಸ ಇತ್ಯಾದಿ ಮಾಹಿತಿಗಳು ದೊರಕಲಿದೆ.

ಒಟ್ಟಾರೆ ಜನರಿಗೆ ಕಾಫಿ ಕುಡಿಸುವ ನೆಪದಲ್ಲಿ ಫಿಯೆಟ್ ಕಾರಿನ ಕುರಿತು ಜನರಿಗೆ ತಿಳಿಸುವ ಕೆಫೆಯಿದು. ಸದ್ಯಕ್ಕೆ ಕಂಪನಿಯ ಯಾವುದೇ ಹೊಸ ಕಾರುಗಳು ರಸ್ತೆಗಿಳಿಯಲು ಸಿದ್ಧವಾಗದ ಹಿನ್ನಲೆಯಲ್ಲಿ ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಭಾಗವಹಿಸದಿರಲು ಫಿಯೆಟ್ ಇಂಡಿಯಾ ನಿರ್ಧರಿಸಿದೆ.

More from DriveSpark

Article Published On: Tuesday, December 20, 2011, 11:35 [IST]
English summary
Fiat India's grand plans for a makeover of its image has started with the Fiat Caffe, its first indian cafe. The Fiat Caffe is being built in Delhi and you can now see it before it opens on 1st January. Fiat has made the Fiat Caffe's website live
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+