ಮಾರಾಟ ಹೆಚ್ಚಿಸಲು ಫಿಯೆಟ್ ಇಂಡಿಯಾ ಹೊಸ ತಂತ್ರ

ಈ ತಿಂಗಳು ಲಿನಿಯಾ ಅಥವಾ ಪುಂಟೊ ಖರೀದಿಸಿದ ಗ್ರಾಹಕರನ್ನು ಲಕ್ಕಿ ಡ್ರಾ ಮೂಲಕ ಆಫರ್ ಗಳಿಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಭಾಗವಹಿಸಲು ಇಷ್ಟವಿಲ್ಲದಿದ್ದವರಿಗೆ ಕಂಪನಿಯು ಸುಮಾರು 6,500 ರು. ಮೌಲ್ಯದ ಇಂಧನ ಖರೀದಿಸುವ ವೋಚರ್ ನೀಡುತ್ತದಂತೆ. ಜೊತೆಗೆ ವಿಮಾ ಉಳಿತಾಯ ಇತ್ಯಾದಿ ಸೌಲಭ್ಯವನ್ನೂ ನೀಡುತ್ತದೆ.
ಲಕ್ಕಿ ಡ್ರಾದಲ್ಲಿ ಗೆಲುವು ಪಡೆದವರಿಗೆ ಕಾರು ಖರೀದಿಯಲ್ಲಿ ಸುಮಾರು ಒಂದು ಲಕ್ಷ ರು.ವರೆಗೆ ವಿನಾಯಿತಿ ದೊರಕುತ್ತದೆ. ಈ ಆಫರ್ ನಲ್ಲಿ ಭಾಗವಹಿಸಲು ಇಷ್ಟವಿಲ್ಲ ಆದರೆ ಡೀಸಲ್ ಕಾರು ಖರೀದಿಸಲು ಬಯಸಿದರೆ ಅವರಿಗೆ 13,500 ರು. ಮೌಲ್ಯದ ಇಂಧನ ಖರೀದಿಸುವ ವೋಚರ್ ಮತ್ತು ವಿಮಾ ವಿನಾಯಿತಿ ನೀಡಲಾಗುತ್ತದೆ. ಇನ್ನಷ್ಟು ಆಫರ್ ಗಳನ್ನು ಕಂಪನಿ ಪ್ರಕಟಿಸಿದೆ. ಇಷ್ಟವಿದ್ದವರೂ ಒಮ್ಮೆ ಕಂಪನಿಯನ್ನು ವಿಚಾರಿಸಬಹುದು!


Click it and Unblock the Notifications








