ಫಿಯೆಟ್ ಕೆಫೆ: ಕಾಫಿ ಟೀ ಕುಡಿಯೋಣ ಬನ್ನಿ

ಇಟಲಿಯ ಕಾರು ಕಂಪನಿ ತನ್ನ ಕಂಪನಿಯ ಇತಿಹಾಸ, ವಹಿವಾಟು ಇತ್ಯಾದಿಗಳನ್ನು ಈ ಕೆಫೆಯಲ್ಲಿ ಪರಿಚಯಿಸಲಿದೆ. ದೆಹಲಿಯಲ್ಲಿ ಫಿಯೆಟ್ ಕೆಫೆ ಶೀಘ್ರದಲ್ಲಿ ಅನಾವರಣಗೊಳ್ಳಲಿದೆ. ಸಂಜೆಯ ಹೊತ್ತು ಟೀ ಕಾಫಿ ಕುಡಿಯಲು ಇಲ್ಲಿಗೆ ಬರಬಹುದು. ಟೀ ಕಾಫಿ ಕುಡಿಯುತ್ತ ಫಿಯೆಟ್ ಕಂಪನಿಯ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದು.
ಈ ಫಿಯೆಟ್ ಕೆಫೆ ಮೂಲಕ ಕಂಪನಿಯು ತನ್ನ ಗತಇತಿಹಾಸವನ್ನು ಜನರ ಮುಂದಿಡಲು ನಿರ್ಧರಿಸಿದೆ. ಅಂದರೆ ಕಂಪನಿಯು ಜಗತ್ತಿನ ಪ್ರಮುಖ ಕಂಪನಿಯಾಗಿದೆ. ಆದರೂ ತನ್ನ ಬ್ರಾಂಡ್ ಇಮೇಜ್ ಇದ್ದರೂ ಜಾಗತಿಕವಾಗಿ ಅತ್ಯಧಿಕ ಸಂಖ್ಯೆಯಲ್ಲಿ ಕಾರು ಮಾರಾಟ ಮಾಡಲು ಕಂಪನಿ ವಿಫಲವಾಗಿದೆ.
ಫಿಯೆಟ್ ಕೆಫೆಯಲ್ಲಿ ಕಾಫಿ ಟೀ ಪಾನೀಯ ಕುಡಿಯುತ್ತಿರುವಾಗಲಾದರೂ ಜನರ ಕಣ್ಣಿಗೆ ಫಿಯೆಟ್ ಇತಿಹಾಸ ಬೀಳಲಿ ಎನ್ನುವುದು ಕಂಪನಿಯ ಯೋಚನೆ. ವಾಟ್ ಆನ್ ಐಡಿಯಾ ಅಂತೀರಾ???


Click it and Unblock the Notifications








