ಮಿಡ್ ನೈಟ್ ವರೆಗೆ ಲೈಟ್ ಆಫ್ ಮಾಡ್ಬೇಡಿ: ಫೋರ್ಡ್

ಅಂದರೆ ಕಂಪನಿಯು ದೇಶದ ಎಲ್ಲಾ ಡೀಲರ್ಷಿಪ್ ಮಳಿಗೆಗಳಲ್ಲಿ ಮುಂಜಾನೆ 8 ಗಂಟೆಯಿಂದ ಮಧ್ಯರಾತ್ರಿವರೆಗೆ ಕಾರು ಮಾರಾಟ ಮಾಡಲಿದೆ. ಇದು ಗ್ರಾಹಕರಿಗೆ ವಿಶೇಷ ಶಾಪಿಂಗ್ ಅನುಭವ ನೀಡಲಿದೆ.
ಈ ಮಿಡ್ ನೈಟ್ ಸೇಲ್ ನಲ್ಲಿ ಗ್ರಾಹಕರಿಗೆ ಹಲವು ಲಾಭಗಳು, ಕೊಡುಗೆಗಳು ದೊರಕಲಿದೆ. ಅಂದರೆ ಆ ಸಮಯದಲ್ಲಿ ಹೊಸ ಕಾರು ಬುಕ್ಕಿಂಗ್ ಮಾಡಿದವರಿಗೆ ವಿನಾಯಿತಿ, ಗಿಫ್ಟ್, ಕಡಿಮೆ ಬಡ್ಡಿದರ ಇತ್ಯಾದಿ ಕೊಡುಗೆ ದೊರಕಲಿದೆ. ಫೋರ್ಡ್ ಕಾರು ಖರೀದಿಸಬೇಕೆಂದು ಯೋಜಿಸಿದ್ದವರು ಇದರಲ್ಲಿ ಪಾಲ್ಗೊಳ್ಳಬಹುದು.
ಇಷ್ಟೇ ಅಲ್ಲದೇ ಕಾರು ಖರೀದಿದಾರರಿಗೆ ಹಲವು ಬಹುಮಾನಗಳನ್ನು ನೀಡಲಿದೆ. ಅಂದರೆ ಗ್ರಾಹಕರಿಗೆ ವಿಶೇಷ ಕೂಪನ್ ನೀಡಲಾಗುವುದಂತೆ. ಅದರಲ್ಲಿರುವ ಕೋಡ್ ನೋಡಿ ಎಲ್ ಇಡಿ ಟಿವಿ, ಬ್ಲಾಕ್ ಬೆರ್ರಿ, ಡಿಜಿಟಿಲ್ ಕ್ಯಾಮರಾ ಮತ್ತು ಡಿವಿಡಿ ಪ್ಲೇಯರ್ ಇತ್ಯಾದಿ ಬಹುಮಾನಗಳನ್ನು ಗ್ರಾಹಕರನ್ನು ಪಡೆಯಬಹುದಾಗಿದೆ.


Click it and Unblock the Notifications








