ಜಿಎಂ ಇಂಡಿಯಾಕ್ಕೆ ರಾಷ್ಟ್ರೀಯ ಸುರಕ್ಷತಾ ಪ್ರಶಸ್ತಿ

ಕಂಪನಿಯು ಹಲೊಲ್ ಘಟಕದಲ್ಲಿ ಅತ್ಯಧಿಕ ಸುರಕ್ಷತೆಯ ಸ್ಟಾಂಡರ್ಡ್ ಬಳಸಿರುವುದರಿಂದ ಪ್ರಶಸ್ತಿ ಬಾಚಿಕೊಂಡಿದೆ. "ಅತ್ಯುತ್ತಮ ಕೈಗಾರಿಕೆ ಮತ್ತು ಸುರಕ್ಷತೆಯ ಕಾರ್ಯಗಳಿಗಾಗಿ ಸತತ ಮೂರನೇ ವರ್ಷವೂ ನಮಗೆ ಈ ಪ್ರಶಸ್ತಿ ದೊರಕಿರುವುದಕ್ಕೆ ಹೆಮ್ಮೆಯಾಗಿದೆ" ಎಂದು ಜಿಎಂ ಇಂಡಿಯಾ ಉಪಾಧ್ಯಕ್ಷರಾದ ಪಿ ಬಾಲೆಂದ್ರನ್ ಹೇಳಿದ್ದಾರೆ.
ಅಪಘಾತ ತಡೆಗೆ ಪ್ರೋತ್ಸಾಹ ನೀಡುವುದು, ಕಂಪನಿಯ ಆಡಳಿತದಲ್ಲಿ ಸುರಕ್ಷತೆಯನ್ನು ಪ್ರಮುಖ ವಿಷಯವಾಗಿ ಪರಿಗಣಿಸಿರುವುದು ಇತ್ಯಾದಿ ಅಂಶಗಳನ್ನು ಪ್ರಶಸ್ತಿ ಆಯ್ಕೆಗೆ ಬಳಸಿಕೊಳ್ಳಲಾಗಿದೆ. ಭಾರತ ಸರಕಾರವು 1965ರಲ್ಲಿ ನ್ಯಾಷನಲ್ ಸೇಫ್ಟಿ ಅವಾರ್ಡ್ ನೀಡಲು ಆರಂಭಿಸಿತ್ತು.


Click it and Unblock the Notifications








