ದಾಂಗುಡಿಯಿಡಲಿದೆ ಸುವರ್ಣಲೇಪಿತ 'gold plus' nano ಕಾರು

By Super

nano gold plus model
ಚೆನ್ನೈ, ಜುಲೈ10: ಭಾರತೀಯ ಸ್ವರ್ಣಾಭರಣಗಳ 5,000ನೇ ವಾರ್ಷಿಕೋತ್ಸವದ ಅಂಗವಾಗಿ ಟೈಟಾನ್‌ ಇಂಡಸ್ಟ್ರೀಸ್ ಕಂಪನಿಯು ಸುವರ್ಣ ಲೇಪಿತ ಟಾಟಾ ನ್ಯಾನೊ ಕಾರು ಉತ್ಪಾತ್ಪಾದನೆಗೆ ನಿರ್ಧರಿಸಿದೆ. ಸುಮಾರು 22 ಲಕ್ಷ ರೂ. ಬೆಲೆಬಾಳುವ 70 ಕೆಜಿ ಶುದ್ಧ ಚಿನ್ನದಿಂದ ತಯಾರಾಗಲಿರುವ ಈ ಕಾರಿನ ಬೆಲೆ 40 ಲಕ್ಷ ರೂ.ಗಳಾಗಿರಬಹುದೆಂದು ಅಂದಾಜಿಸಲಾಗಿದೆ.

'ಗೋಲ್ಡ್‌ ಪ್ಲಸ್‌ ನ್ಯಾನೊ' ಹೆಸರಿನ ಶುದ್ಧ ಚಿನ್ನಾಭರಣಗಳಿಂದ ಕೂಡಿದ ವಿಶ್ವದ ಮೊದಲ ಗೋಲ್ಡ್ ಕಾರು ಇದಾಗಿದ್ದು, ಪ್ರಸಕ್ತ ವರ್ಷದ ಎಪ್ರಿಲ್‌-ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಸಿಂಗೂರು ವಿವಾದದಿಂದ ಭಾರೀ ಪ್ರಚಾರ ಪಡೆದುಕೊಂಡಿರುವ ಟಾಟಾ ಸಂಸ್ಥೆಯು ಟೈಟಾನ್‌ ಜತೆಗೂಡಿ ಸುವರ್ಣ ಲೇಪಿತ ಕಾರನ್ನು ಉತ್ಪಾದಿಸುವ ಮೂಲಕ ಭಾರತೀಯ ಚಿನ್ನಾಭರಣಗಳ 5,000ನೇ ವಾರ್ಷಿಕೋತ್ಸವವನ್ನು ಆಚರಿಸಲು ನಿರ್ಧರಿಸಿದೆ.

ನೂತನ ಕಾರು ಗೋಲ್ಡ್‌ ಪ್ಲಸ್‌ ನ್ಯಾನೊವನ್ನು ಉತ್ಪಾದಿಸುವ ನಿಟ್ಟಿನಲ್ಲಿ ಕಳೆದ ನವೆಂಬರಿನಲ್ಲಿ ತಿಂಗಳ ಕಾಲ ಟೈಟಾನ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅಭಿಯಾನ ಕೈಗೊಂಡಿತ್ತು. ಭಾರತದ ಪ್ರಥಮ ಚಿನ್ನಾಭರಣ ಲೇಪಿತ ಕಾರಿಗಾಗಿ ದೇಶದೆಲ್ಲೆಡೆಯಿಂದ 13 ವಿವಿಧ ವಿನ್ಯಾಸಗಳು ಸ್ಪರ್ಧೆಗೆ ಬಂದಿದ್ದವು. ಮತದಾರರು ಎಸ್‌ಎಂಎಸ್‌, ಗೋಲ್ಡ್‌ ಪ್ಲಸ್‌ ನ್ಯಾನೊ ಸೈಟನ್ನು ತೆರೆಯುವ ಮೂಲಕ, ಫೇಸ್‌ಬುಕ್‌, ಟ್ವಿಟರ್ ಹಾಗೂ ಯೂಟ್ಯೂಬ್‌ ಮೂಲಕ ತಮಗಿಷ್ಟದ ವಿನ್ಯಾಸವನ್ನು ಆಯ್ಕೆ ಮಾಡಬಹುದಾಗಿತ್ತು.

ಗೋಲ್ಡ್‌ ಪ್ಲಸ್‌ ಕಾರಿನ ಉತ್ಪಾದನೆಯ ಮೂಲ ಉದ್ದೇಶ ನ್ಯಾನೊ ಕಾರುಗಳ ಮಾರಾಟವನ್ನು ಹೆಚ್ಚಿಸುವುದಾಗಿದೆ. ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಹಾಗೂ ಗ್ರಾಹಕ ಸ್ನೇಹಿಯಾಗಿರದ ಹಿನ್ನೆಲೆಯಲ್ಲಿ ನ್ಯಾನೊ ಕಾರುಗಳ ಮಾರಾಟ ಪ್ರಮಾಣ ಇತ್ತೀಚೆಗೆ ಕ್ಷೀಣಿಸಿತ್ತು. 2010 ಜುಲೈನಲ್ಲಿ 9,000 ಕಾರುಗಳ ಮಾರಾಟಗೊಂಡಿದ್ದರೆ ನವೆಂಬರಿನಲ್ಲಿ 509 ಕಾರುಗಳಷ್ಟೇ ಮಾರಾಟವಾಗಿದ್ದವು.

More from DriveSpark

Article Published On: Sunday, July 10, 2011, 10:39 [IST]
English summary
Gold Plus, the jewellery division of Titan Industries, has said it will come out with the world's first 'jewellery car' by embellishing a Tata Motors Nano with gold designs as it celebrates 5,000 years of Indian jewellery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+