ಬಂಗಾರದ ಬೆಂಝ್ ಕಾರಿಗೆ ಬೆಲೆ ಕಟ್ಟಬಲ್ಲಿರಾ ನೀವು?

Gold Mercedes McLaren SLR for Sale
ಲಂಡನ್, ಡಿ 11: ಇತ್ತೀಚೆಗೆ ಟಾಟಾ ಮೋಟರ್ಸ್ ಬಂಗಾರದ ನ್ಯಾನೊ ನಿರ್ಮಿಸಿತ್ತು. ಅದೇ ರೀತಿ ಲಂಡನಿನ ವ್ಯಕ್ತಿಯೊಬ್ಬ ಬಂಗಾರದ ಬೆಂಝ್ ಕಾರನ್ನೇ ನಿರ್ಮಿಸಿ ಈಗ ಮಾರಾಟ ಮಾಡಲು ಸಿದ್ಧನಾಗಿದ್ದಾನೆ.

ಆತ ಬೆಂಝ್ ಕಾರಿಗೆ ಸುಮಾರು 35 ದಶಲಕ್ಷ ವ್ಯಯಿಸಿ ಆಭರಣ ಅಲಂಕಾರ ಮಾಡಿದ್ದಾನೆ. ಆ ಕಾರಿಗೆ ಪ್ರೀತಿಯಿಂದ "ಅನ್ಲಿಕರ್ ಮೆಕ್ ಲಾರೆನ್ ಎಸ್ಎಲ್ಆರ್ 999 ರೆಡ್ ಗೋಲ್ಡ್ ಡ್ರೀಮ್" ಎಂದು ಹೆಸರಿಟ್ಟಿದ್ದಾನೆ. ಈಗ ಈ ಕಾರನ್ನು ಸುಮಾರು 70 ದಶಲಕ್ಷ ಪೌಂಡಿಗೆ ಮಾರಾಟ ಮಾಡುವುದಾಗಿ ಪ್ರಕಟಿಸಿದ್ದಾನೆ.

ಈತನ ಹೆಸರು ಉಳಿ ಅನ್ಲಿಕರ್. ಈ ಕಾರು ಚಿನ್ನ ಮತ್ತು ಇತರ ಬೆಳೆಬಾಳುವ ಲೋಹಗಳಿಂದ ಮಿರಮಿರನೆ ಮಿಂಚುತ್ತದೆ. ಈ ಕಾರನ್ನು ಕನಿಷ್ಠ 70 ದಶಲಕ್ಷ ಪೌಂಡಿಗೆ ಮಾರಾಟ ಮಾಡಲು ಯೋಜಿಸಿದ್ದಾನೆ. ಹರಾಜಿನಲ್ಲಿ ಇದಕ್ಕೆ ಇದಕ್ಕಿಂತ ಹೆಚ್ಚು ದರ ಸಿಗಬಹುದು. ಇದು ಜಗತ್ತಿನ ದುಬಾರಿ ಕಾರು ಕೂಡ ಆಗುವ ನಿರೀಕ್ಷೆಯಿದೆ.

ಕಾರಿನ ಪ್ರತಿ ವೀಲ್ಹ್, ಹೆಡ್ ಲ್ಯಾಂಪ್ ಮತ್ತು ಡೋರ್ ಹಿಡಿಗೆ 25 ಪದರದಲ್ಲಿ 24 ಕ್ಯಾರೆಟ್ ಚಿನ್ನ ಮಿಶ್ರಿತ ಕೆಂಪು ಪೇಂಟ್ ಬಳಿಯಲಾಗಿದೆ. ಇಂಟಿರಿಯರ್, ಇಂಡಿಕೇಟರ್, ಡ್ಯಾಷ್ ಬೋರ್ಡ್ ಕೂಡ ಚಿನ್ನದ ಲೇಪನದಿಂದ ಮಿಂಚುತ್ತದೆ.

ಈ ಕಾರು 5.4 ಲೀಟರಿನ ಎಂಜಿನ್ ಹೊಂದಿದ್ದು, ಸುಮಾರು 640 ಹಾರ್ಸ್ ಪವರಿನಿಂದ 999 ಹಾರ್ಸ್ ಪವರ್ ನೀಡುತ್ತದೆ. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 210 ಕಿ.ಮೀ. ವೇಗದಲ್ಲಿ ಹೋಗಬಹುದಾಗಿದೆ.

"ನಿಜ ಹೇಳಬೇಕೆಂದರೆ ಕಾರು ಮಾರಾಟ ಮಾಡಲು ಅನ್ಲಿಕರ್ ಗೆ ಮನಸ್ಸಿಲ್ಲ. ಆದರೆ ಸರಿಯಾದ ಬೆಲೆ ದೊರಕಿದರೆ ಮಾತ್ರ ಮಾರಾಟ ಮಾಡಲು ನಿರ್ಧರಿಸಲಾಗಿದೆ" ಎಂದು ಅನ್ಲಿಕರ್ ವಕ್ತಾರರು ಹೇಳಿದ್ದಾರೆ.

More from DriveSpark

Article Published On: Tuesday, December 13, 2011, 18:23 [IST]
English summary
Landon Businessman Ueli Anliker has converted his Mercedes Benz sports car as golden car. He covered this car with more than 5 kgs of gold dust. Now he wants to sell this gold plated benz car for £ 7 million. Will you buy it?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+