ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

Posted By: Staff

ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಅದರಲ್ಲೂ ದೂರದ ಊರುಗಳಿಗೆ ಪ್ರವಾಸ ತೆರಳುವಾಗ ಬ್ಯಾಗ್ ನಲ್ಲಿ ಅಗತ್ಯ ವಸ್ತುಗಳನ್ನು ಮಾತ್ರ ಇಡಲಾಗುತ್ತದೆ. ಆದರೆ ಇಲ್ಲೊಬ್ಬ ಸೌದಿ ಅರೇಬಿಯಾದ ಕೋಟ್ಯಧಿಪತಿ ಉದ್ಯಮಿ ತನ್ನ ಜೊತೆಗೆ ಲಕ ಲಕ ಹೊಳೆಯುವ ಚಿನ್ನದ ಕಾರುಗಳನ್ನು ಸಾಗಿಸಿದ್ದಾರೆ.

ಇತ್ತೀಚೆಗಷ್ಟೇ ಬ್ರಿಟನ್ ಪ್ರವಾಸಕ್ಕೆ ತೆರಳಿರುವ ಸೌದಿ ಅರೇಬಿಯಾದ ಕೋಟ್ಯಧಿಪತಿ ಬರೋಬ್ಬರಿ 10 ಕೋಟಿ ರುಪಾಯಿಗಿಂತಲೂ ಹೆಚ್ಚು ಬೆಲೆಬಾಳುವ ನಾಲ್ಕು ಚಿನ್ನದ ಕಾರುಗಳನ್ನು ತಮ್ಮೊಂದಿಗೆ ಹೊತ್ತೊಯ್ದಿದ್ದಾರೆ.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಬ್ರಿಟನ್ ರಾಜಧಾನಿ ಲಂಡನ್‌ಗೆ ಅದ್ದೂರಿ ಭೇಟಿ ಕೊಟ್ಟಿರುವ ಈತ ಅಲ್ಲಿನ ಸಾಮಾನ್ಯ ಟ್ಯಾಕ್ಸಿಗಳನ್ನು ಆಶ್ರಯಿಸುವ ಬದಲು ತಮ್ಮದೇ ದುಬಾರಿ ಕಾರಿನಲ್ಲಿ ಪಯಣ ಹಮ್ಮಿಕೊಂಡಿದ್ದರು.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಒಂದು ರೀತಿಯಲ್ಲಿ ಹೇಳುವುದಾದ್ದಲ್ಲಿ ಬ್ರಿಟನ್ ನಲ್ಲಿ ತನ್ನ ಶೋಕಿ ಜೀವನ ಶೈಲಿಯ ಪ್ರದರ್ಶನ ನಡೆಸುವುದು ಆತನ ಉದ್ದೇಶವಾಗಿತ್ತು ಅಂದರೆ ತಪ್ಪಾಗಲಾರದು.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಇದಕ್ಕಾಗಿ ವಿಶ್ವ ಶ್ರೇಷ್ಠ ದುಬಾರಿ ಕಾರುಗಳನ್ನೇ ಸಾಗಿಸಿದ್ದರು. ಇವುಗಳಲ್ಲಿ ರೋಲ್ಸ್ ರಾಯ್ಸ್ ಫಾಟಂ, ಲಂಬೋರ್ಗಿನಿ ಅವೆಂಟಡೊರ್ ಸೂಪರ್ ವೆಲೊಸ್, ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ 6x6 ಮತ್ತು ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಸೇರಿದೆ.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಸೌದಿಯಲ್ಲಿರುವ ಶ್ರೀಮಂತ ಉದ್ಯಮಿಗಳು ಚಿನ್ನ ಲೇಪಿತ ಕಾರುಗಳನ್ನು ಅತಿ ಹೆಚ್ಚು ಇಷ್ಟಪಡುತ್ತಿರುವುದಕ್ಕೆ ಇದೂ ಸಾಕ್ಷಿಯಾಗಿದೆ. ಈ ಎಲ್ಲ ನಾಲ್ಕು ಕಾರುಗಳು ಚಿನ್ನದ ಲೇಪನವನ್ನು ಪಡೆದಿದೆ.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಈ ಪೈಕಿ ಶಕ್ತಿಶಾಲಿ 6.5 ಲೀಟರ್ ವಿ12 ಎಂಜಿನ್ ಹೊಂದಿರುವ ಲಂಬೋರ್ಗಿನಿ ಅವೆಂಟಡೊರ್ ಎಸ್‌ವಿ 2.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ ಮತ್ತು ಗಂಟೆಗೆ ಗರಿಷ್ಠ 217 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ತಮ್ಮ ವೈಯಕ್ತಿಕ ಅಗತ್ಯಗಳಿಗಾನುಸಾರವಾಗಿ ಮಾರ್ಪಾಡುಗೊಳಿಸಿರುವ ಮಗದೊಂದು ಬೆಂಟ್ಲಿ ಫೈಯಿಂಗ್ ಸ್ಪರ್ ಗಂಟೆಗೆ 200 ಮೈಲು ವೇಗದಲ್ಲಿ ಸಂಚರಿಸುವಷ್ಟು ಸಾಮರ್ಥ್ಯ ಹೊಂದಿದೆ.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಮರ್ಸಿಡಿಸ್ ಬೆಂಝ್‌ನ ಈ ಆರು ಚಕ್ರಗಳ ಆಫ್ ರೋಡರ್ ದೈತ್ಯ ಜಿ63 ಎಎಂಜಿ ಸಹ ಲಂಡನ್ ಬೀದಿಗಳಲ್ಲಿ ಅಬ್ಬರಿಸಿತ್ತು.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಅತ್ತ ರೋಲ್ಸ್ ರಾಯ್ಸ್ ಫಾಟಂ ತನ್ನ ಕ್ಲಾಸಿಕ್ ವಿನ್ಯಾಸದೊಂದಿಗೆ ನಗರ ನಿವಾಸಿಗಳ ಗಮನ ಸೆಳೆದಿತ್ತು.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಇನ್ನೊಂದೆಡೆ ಸ್ವರ್ಣ ಲೇಪಿತ ಚಿನ್ನದ ಕಾರುಗಳು ಬ್ರಿಟನ್ ಪ್ರವೇಶಿಸಿರುವುದು ಕೆಂಗೆಣ್ಣಿಗೆ ಗುರಿಯಾಗಿದೆ. ವಿಶೇಷವಾಗಿ ಎಂಜಿನ್ ಟ್ಯೂನ್ ಮಾಡಿರುವ ಇಂತಹ ಕಾರುಗಳಿಂದಾಗಿ ಶಬ್ದ ಮಾಲಿನ್ಯ ಉಂಟಾಗುತ್ತಿದೆಯೆಂಬ ಟೀಕೆ ವ್ಯಕ್ತವಾಗಿದೆ.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಲಂಡನ್ ನಲ್ಲಿ ವಾಹನ ನಿಯಮಗಳನ್ನು ಉಲ್ಲಂಘಿಸುವ ಸವಾರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಹಾಗೆಯೇ ಪಾರ್ಕಿಂಗ್ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಚಿನ್ನದ ಕಾರಲ್ಲಿ ಲಂಡನ್ ಸುತ್ತಲು ಬಂದ ಸೌದಿಯ ಶ್ರೀಮಂತ ಪ್ರವಾಸಿ

ಒಟ್ಟಿನಲ್ಲಿ ಭಾರಿ ತೈಲ ನಿಕ್ಷೇಪ ಹೊಂದಿರುವ ಸೌದಿಯ ಈ ಶ್ರೀಮಂತ ಉದ್ಯಮಿ ಯಾರು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

Picture Credit: swns com

English summary
Saudi billionaire arrived in London worth more than £1 million GOLD cars
Please Wait while comments are loading...

Latest Photos