ಚಿನ್ನದ ನ್ಯಾನೊ ಭದ್ರತೆಗೆ ದಿನಕ್ಕೆ ಲಕ್ಷ ರು. ಖರ್ಚು

Golden Nano Gets Top Security From Tata Motors
ದೇಶದ ಆಭರಣ ಉದ್ಯಮಕ್ಕೆ 5000 ವರ್ಷ ಸಂದ ಹಿನ್ನಲೆಯಲ್ಲಿ ಟಾಟಾ ಗ್ರೂಪ್ ನ ಗೋಲ್ಡ್ ಪಲ್ಸ್ ಆಭರಣ ಬ್ರಾಂಡ್ ಚಿನ್ನದ ನ್ಯಾನೊ ಕಾರು "ಗೋಲ್ಡ್ ಪ್ಲಸ್ ನ್ಯಾನೊ" ಇತ್ತೀಚೆಗೆ ಅನಾವರಣಗೊಂಡಿತ್ತು. ಪರಿಶುದ್ಧ ಚಿನ್ನ ಮತ್ತು ಬೆಳ್ಳಿಯಿಂದ ಈ ನ್ಯಾನೊ ಕಾರು ತಯಾರಿಸಲಾಗಿತ್ತು.

ಹಾಗಂತ ಇದನ್ನು ಒಂದು ಲಕ್ಷ ರು. ಕಾರು ಅಂತ ಕೇವಲವಾಗಿ ನೋಡುವ ಹಾಗಿಲ್ಲ. ಯಾಕೆಂದರೆ ಚಿನ್ನ ಮತ್ತು ಬೆಳ್ಳಿಯಿಂದ ನಿರ್ಮಿಸಲಾಗಿರುವ ಈ ಕಲಾತ್ಮಕ ಕಾರಿನ ವೆಚ್ಚ ಸುಮಾರು 23 ಕೋಟಿ ರುಪಾಯಿ. ಹೀಗಾಗಿ ಈ ಕಾರಿನ ಭದ್ರತೆಯ ಕುರಿತು ಹೆಚ್ಚು ಗಮನ ಹರಿಸುವುದು ಅನಿವಾರ್ಯ.

ಈ ಚಿನ್ನದ ಕಾರಿಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಂಪನಿಯು ಈ ಕಾರನ್ನು ವಿವಿಧ ನಗರಗಳಲ್ಲಿ ಸುಮಾರು 90 ದಿನಗಳ ಪ್ರದರ್ಶಿಸಲಿದೆ. ಇದಕ್ಕೆ ಕಂಪನಿ ಪ್ರತಿದಿನ ಸುಮಾರು ಒಂದು ಲಕ್ಷ ರುಪಾಯಿ ಖರ್ಚು ಮಾಡುತ್ತಿದೆಯಂತೆ.

ಅಂದಹಾಗೆ ಈ ಕಾರಿನ ದರ 23 ಕೋಟಿ ರು. ಹೀಗಾಗಿ ಇದರ ಭದ್ರತೆ ಪ್ರಮುಖ ಸಮಸ್ಯೆ. ಯಾರಾದರೂ ಇದರ ಮಿರರ್ ಕಿತ್ತುಕೊಂಡು ಹೋದರೂ ಕಂಪನಿಗೆ ಲಕ್ಷಾಂತರ ರುಪಾಯಿ ನಷ್ಟವಾಗಬಹುದು. ಗೋಲ್ಡ್ ಪಲ್ಸ್ ನ್ಯಾನೊ ದೇಶದ ದುಬಾರಿ ಕಾರು ಕೂಡ ಹೌದು.

Article Published On: Tuesday, October 18, 2011, 10:43 [IST]
English summary
Tata Motors is reportedly spending a whopping Rs.1 lakh per day for the GoldPlus Nano's security. The Goldplus Nano is a tribute to Indian Jewellery from Tata Group's Goldplus brand of jewellery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+