ಪೆಟ್ರೋಲ್ ಮೇಲೆ ಹಸಿರು ತೆರಿಗೆ ವಿಧಿಸಲು ಚಿಂತನೆ

Govt of India Planning Rs 2 Green Tax on Petrol
ಸರಕಾರ ಪರಿಸರ ಮಾಲಿನ್ಯ ತಡೆಗಟ್ಟಲು ಪೆಟ್ರೋಲ್ ಮೇಲೆ ಎರಡು ರೂಪಾಯಿ ಹಸಿರು ತೆರಿಗೆ ವಿಧಿಸುವ ಕುರಿತು ಆಲೋಚಿಸುತ್ತಿದೆ. ಗ್ರೀನ್ ಟ್ಯಾಕ್ಸ್ ಗೆ ಗ್ರೀನ್ ಸಿಗ್ನಲ್ ದೊರಕಿದರೆ ಪೆಟ್ರೋಲ್ ದರ ಮತ್ತೆ ಏರಿಕೆ ಕಾಣಲಿದೆ.

ಸದ್ಯ ಗ್ರೀನ್ ತೆರಿಗೆ ಪ್ರಸ್ತಾಪವನ್ನು ಮಾಡಿದ್ದು ಯೋಜನಾ ಆಯೋಗದ ಪ್ಲಾನ್ ಪ್ಯಾನೆಲ್ ಗ್ರೂಪ್. ದೆಹಲಿ ಮೆಟ್ರೋ ಮುಖ್ಯಸ್ಥರಾದ ಇ ಸುದರ್ಶನ್ ಪ್ಲಾನ್ ಪ್ಯಾನೆಲ್ ಮುಖ್ಯಸ್ಥರಾಗಿದ್ದಾರೆ.

ಈಗಾಗಲೇ ಪೆಟ್ರೋಲ್ ದರ ಗ್ರಾಹಕರಿಗೆ ಬಿಸಿತುಪ್ಪವಾಗಿದೆ. ಕಾರು, ಬೈಕು ಖರೀದಿಗೆ ಜನರು ಹಿಂದುಮುಂದು ನೋಡುತ್ತಿದ್ದಾರೆ. ಪೆಟ್ರೋಲ್ ಕಾರಿಗಿಂತ ಡೀಸೆಲ್ ಕಾರುಗಳ ಬೇಡಿಕೆಯೂ ಹೆಚ್ಚಾಗಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಸರಕಾರ ಕೈಗೊಳ್ಳುವ ಕ್ರಮ ಕಾರು ಮಾರಾಟವನ್ನು ಕಡಿಮೆ ಮಾಡುತ್ತಿದೆ.

ಪೆಟ್ರೋಲ್ ಕಾರಿಗಿಂತ ಡೀಸೆಲ್ ಕಾರುಗಳು ಹೆಚ್ಚು ಮಾಲಿನ್ಯವನ್ನುಂಟು ಮಾಡುತ್ತಿವೆ. ಆದರೆ ಸರಕಾರ ಕೇವಲ ಪೆಟ್ರೋಲಿಗೆ ಗ್ರೀನ್ ಟ್ಯಾಕ್ಸ್ ಹಾಕಲು ನಿರ್ಧರಿಸಿದೆ. ಅಥವಾ ಸರಕಾರ ಸ್ವಲ್ಪದಿನ ಕಳೆದು ಡೀಸೆಲಿಗೂ ಗ್ರೀನ್ ಟ್ಯಾಕ್ಸ್ ಹಾಕಲಿದೆಯೇ? ಗೊತ್ತಿಲ್ಲ.

ಈ ತೆರಿಗೆ ನೀತಿಯನ್ನು ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸುವ ಯೋಚನೆಯೂ ಸರಕಾರಕ್ಕಿದೆ. ಆದರೆ ಗ್ರಾಮೀಣ ಪ್ರದೇಶದಲ್ಲೂ ವಾಹನಗಳ ಸಂಖ್ಯೆ ಕಡಿಮೆಯೇನಿಲ್ಲ. ಒಟ್ಟಾರೆ ಗ್ರೀನ್ ಟ್ಯಾಕ್ಸ್ ಗೆ ಗ್ರೀನ್ ಸಿಗ್ನಲ್ ದೊರಕಿದರೆ ಪೆಟ್ರೋಲ್ ಮತ್ತೆ ಎರಡು ರುಪಾಯಿ ದುಬಾರಿಯಾಗಲಿದೆ. ಯಾವುದಕ್ಕೂ ರೆಡಿಯಾಗಿರಿ.

More from DriveSpark

Article Published On: Wednesday, December 14, 2011, 14:25 [IST]
English summary
Petrol prices are set to go even higher if the plans of the Government of India is planning to impose a Rs.2 Green Tax on the fuel is implemented. Diesel cars are more polluting than petrol cars but the government is not planning to add any tax or cess on diesel as it is used not just be vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+