ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಇನ್ನು ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್‌ ಸಂಪೂರ್ಣವಾಗಿ ಕಣ್ಮರೆಯಾಗಲಿದ್ದು, ಅದಕ್ಕೆ ಬದಲಾಗಿ ಎಥೆನಾಲ್ ಇಂಧನವನ್ನು ಬಳಸಬೇಕಾಗುತ್ತದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರು ಸಮಾರಂಭವೊಂದರಲ್ಲಿ ಭವಿಷ್ಯದ ಇಂಧನ ಲಭ್ಯತೆ ಕುರಿತು ಮಾತನಾಡಿದ್ದಾರೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಈಗಾಗಲೇ ಇಂಧನಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್‌ ಮತ್ತು ಡೀಸೆಲ್, ಇವೆರಡೂ ಸಹ ಹಲವಾರು ಬಾರಿ ನೂರರ ಗಡಿ ದಾಟಿದೆ. ಇದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಗೆ ಬರುತ್ತಿವೆಯಾದರೂ ಯಾವುದು ಸಹ ಅಷ್ಟೊಂದು ದೊಡ್ಡ ಮಟ್ಟಿನ ಯಶಸ್ಸನ್ನು ಗಳಿಸುತ್ತಿಲ್ಲ. ಹೀಗಿರುವಾಗ ನಿತಿನ್‌ ಗಡ್ಕರಿಯವರು ಎಥೆನಾಲ್‌ ಇಂಧನದ ಕುರಿತಾಗಿ ಮಾತನಾಡಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಇನ್ನು ಸಮಾರಂಭದಲ್ಲಿ ಮಾತನಾಡಿದ ಅವರು, ಬಯೋ ಎಥೆನಾಲನ್ನು ಮಹಾರಾಷ್ಟ್ರದ ವಿಧರ್ಭ ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ. ಮತ್ತು ವಾಹನಗಳಲ್ಲಿ ಹಸಿರು ಹೈಡ್ರೋಜನ್‌ಗಳನ್ನು ಸಹ ಬಳಸಲಾಗುತ್ತದೆ ಎಂದರು. ಇದೇನಾದರೂ ಸರಿಯಾದ ರೀತಿಯಲ್ಲಿ ಜಾರಿಗೆ ಬಂದರೆ ಎಲೆಕ್ಟ್ರಿಕ್‌ ವಾಹನಗಳ ಬಳಿಕ ಭಾರತದಲ್ಲಿ ಎಥೆನಾಲ್‌ ಇಂಧನವೇ ಟ್ರೆಂಡ್‌ ಆಗಲಿದೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಮುಂದಿನ ದಿನಗಳಲ್ಲಿ ಬಯೋ ಎಥೆನಾಲ್ ಇಂಧನಗಳೇ ಭಾರತದಲ್ಲಿ ಪೆಟ್ರೋಲ್‌ ಉತ್ಪನ್ನಗಳಿಗೆ ಬದಲಿಯಾಗಲಿದೆ. ಹಾಗೂ ಇದನ್ನೇ ಮುಂದಿನ ದಿನಗಳಲ್ಲಿ ಎಲ್ಲಾ ವಾಹನಗಳಲ್ಲೂ ಬಳಸಲಾಗುತ್ತದೆ. ಈಗಾಗಲೇ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿಯವರು ಇಂಧನ ತಯಾರಕಾ ಕಂಪನಿಗಳಿಗೆ ಪ್ಲೆಕ್ಸಿಬಲ್‌ ಇಂಧನ ತಯಾರಿಸಲು ಸಲಹೆ ನೀಡಿದ್ದಾರೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಈ ಪ್ಲೆಕ್ಸಿ ಇಂಧನಗಳನ್ನೇ ಬಳಕೆ ಮಾಡುವಂತಹ ಐಸಿ ಎಂಜಿನ್‌ಗಳನ್ನು ಮುಂಬರುವ ವಾಹನಗಳಲ್ಲಿ ತಯಾರಿಸುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ಕ್ಯಾಬಿನೆಟ್‌ ಮಿನಿಸ್ಟರ್‌ ಈ ಒಂದು ದೊಡ್ಡ ಹೇಳಿಕೆ ನೀಡಿರುವುದರಿಂದ ಈ ಎಥೆನಾಲ್‌ ಇಂಧನ ಅಂದರೆ ಏನು ಎಂದು ಬಹಳಷ್ಟು ಮಂದಿಗೆ ಗೊತ್ತಿರುವುದಿಲ್ಲ. ನಾವಿಂದು ಈ ಇಥೆನಾಲ್‌ ಇಂಧನ ಎಂದರೆ ಏನು ಎಂಬುದನ್ನು ನೋಡೋಣ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಎನಿದು ಎಥೆನಾಲ್‌?

ಎಥೆನಾಲ್ ಅಥವಾ ಈಥೈಲ್‌ ಆಲ್ಕೋಹಾಲ್‌ ನ್ನು ಆಲ್ಕೋಹಾಲಾಗಿ ಬಳಸಲಾಗುತ್ತಿದೆ. ಇದೊಂದು ಆರ್ಗಾನಿಕ್‌ ಕೆಮಿಕಲ್‌ ವಸ್ತು. ಇದರಲ್ಲಿ ಗ್ಯಾಸೋಲಿನ್‌ಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಾಲಿನ್ಯವಿರುವುದೇ ಇದನ್ನು ಪಟ್ರೋಲ್‌ ಮತ್ತು ಡೀಸೆಲ್‌ಗಳಿಗಿಂತಲೂ ಉತ್ತಮ ಇಂಧನ ಎಂದು ಗುರುತಿಸುವುದಕ್ಕೆ ಪ್ರಮುಖ ಕಾರಣವಾಗಿದೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಎಥೆನಾಲನ್ನು ಹಲವಾರು ದೇಶಗಳಲ್ಲಿ ಈಗಾಗಲೇ ನಾನಾ ರೀತಿಯಲ್ಲಿ ಉಪಯೋಗಿಸಲಾಗುತ್ತಿದೆ. ಹಲವಾರು ದೇಶಗಳಲ್ಲಿ ಇದನ್ನು ಪೆಟ್ರೋಲ್‌ನ ಜೊತೆಗೆ ಬೆರೆಸಿ ಬಳಸಲಾಗುತ್ತಿದೆ. ಭಾರತದಲ್ಲೂ ಸಹ ಕೆಲವೆಡೆ ಎಥೆನಾಲ್‌ನೊಂದಿಗೆ ಪೆಟ್ರೋಲ್‌ ಬಳಸಲಾಗುತ್ತಿದ್ದು, ಕೆಲವೊಂದು ವಾಹನಗಳು ಈಗಾಗಲೇ ಎಥೆನಾಲ್‌‌ನೊಂದಿಗೆ ಸಂಚರಿಸಲು ಸಿದ್ದಗೊಂಡಿವೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಹಲವಾರು ರೀತಿಯಲ್ಲಿ ಎಥೆನಾಲನ್ನು ಪೆಟ್ರೋಲ್‌ನ ಜೊತೆಗೆ ಮಿಶ್ರಣ ಮಾಡಬಹುದಾಗಿದೆ. ಇದರಲ್ಲಿ ತುಂಬಾ ಪ್ರಸಿದ್ದಿಯಾಗಿರುವುದು ಯಾವುದೆಂದರೆ ಇ೯೦, ಅಥವಾ E85. ಅಂದರೆ ಇದರಲ್ಲಿ ಸುಮಾರು 10-15% ದಷ್ಟು ಎಥೆನಾಲನ್ನು ಪೆಟ್ರೋಲ್‌ನೊಂದಿಗೆ ಬೆರೆಸಲಾಗುತ್ತದೆ. ಇದನ್ನು ಬಹುತೇಕವಾಗಿ ಪೆಟ್ರೋಲ್‌ ಎಂದೇ ಕರೆಯಲಾಗುತ್ತದೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಯಾಕೆಂದರೆ ಕೇವಲ 10 ರಿಂದ 15% ಮಾತ್ರ ಎಥೆನಾಲ್ ಮಿಶ್ರವಾಗಿರುತ್ತದೆ. ಸದ್ಯಕ್ಕೆ ಭಾರತದಲ್ಲಿ ಪೆಟ್ರೋಲ್‌ ಬಂಕ್‌ಗಳು E90 ಮತ್ತು E95 ಪೆಟ್ರೋಲ್‌ಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಈ ಎಥೆನಾಲ್‌ ಪೆಟ್ರೋಲ್‌ ವಿಶ್ವದ ಹಲವಾರು ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಅಮೆರಿಕಾ ಮತ್ತು ಬ್ರೆಜಿಲ್‌ ನಂತಹ ರಾಷ್ಟ್ರಗಳಲ್ಲಿ ಶೇ ೩೦ ರಷ್ಟು ಪ್ರಮಾಣದಲ್ಲಿ ಎಥೆನಾಲನ್ನು ಪೆಟ್ರೋಲ್‌ನಲ್ಲಿ ಬಳಸಲಾಗುತ್ತದೆ. ಅಂದರೆ ಇ೭೦ ಮತ್ತು ಇ೭೫ ಪೆಟ್ರೋಲ್‌ಗಳನ್ನು ಮಾರಾಟ ಮಾಡಲಾಗುತ್ತದೆ ಈ ದೇಶಗಳಲ್ಲಿ ಪೆಟ್ರೋಲ್‌ ಜೊತೆ ಎಥೆನಾಲ್ ಅನ್ನು ಬಳಸುವುದು ಆರಂಭದಲ್ಲಿ ಕೇವಲ 2% ಇತ್ತು. ಆದರೆ ಈಗ ಅದು 10 % ದವರೆಗೂ ಕೊಂಡೊಯ್ಯಲಾಗುತ್ತಿದೆ.

ಇನ್ನೈದು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೊಲ್‌ ಇಲ್ಲ, ಬರೀ ಎಥೆನಾಲ್ - ನಿತಿನ್ ಗಡ್ಕರಿ

ಎಥೆನಾಲ್‌ ಇಂಧನದ ಬಗ್ಗೆ ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಝೀರೋ ಎಮಿಷನ್‌ನ ವಾಹನಗಳಾದ ಎಲೆಕ್ಟ್ರಿಕ್‌ ಮತ್ತು ಹೈಡ್ರೋಜನ್‌ ಆಧಾರಿತ ವಾಹನಗಳಲ್ಲಿ ಬೇರೆಯದೇ ಯಂತ್ರ ವ್ಯವಸ್ಥೆ ಇರುತ್ತದೆ. ಆದರೆ ಐಸಿಇ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳ ವೆಚ್ಚವೂ ಸಹ ಅಧಿಕವೇ. ಆದರೆ ಎಥೆನಾಲ್‌ ಮೂಲಕ ಚಲಿಸುವ ವಾಹನಗಳ ನಿರ್ಮಾಣ ವೆಚ್ಚವೂ ತೀರಾ ಕಡಿಮೆ ಇರುತ್ತದೆ. ಈಗಿರುವ ಪಟ್ರೋಲ್‌ ಎಂಜಿನ್‌ಗಳಿಗೆ ಸ್ವಲ್ಪ ಮಾರ್ಪಾಡು ಮಾಡಿದರೆ ಸಾಕು ಅದನ್ನು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ಗಳನ್ನು ಬಳಸಲು ಉಪಯೋಗಿಸಬಹುದಾಗಿದೆ. ಇನ್ನು ಪೆಟ್ರೋಲ್‌ಗೆ ಹೋಲಿಸಿದರೆ ಎಥೆನಾಲ್‌ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಮತ್ತು ಇದನ್ನು ಮತ್ತೆ ಮತ್ತೆ ತಯಾರಿಸಬಹುದಾದಂತಹ ಇಂಧನವಾಗಿದೆ.

Most Read Articles

Kannada
English summary
India to ban petrol in 5 yrs ethanol blended petrol will be the trend
Story first published: Friday, July 8, 2022, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X